ಪ್ರವಾಸಕ್ಕೆಂದು‌ ಬಂದಿದ್ದ ವ್ಯಕ್ತಿ ಸಾತೊಡ್ಡಿ ಜಲಪಾತದಲ್ಲಿ ಮುಳುಗಿ ಸಾವು

ಯಲ್ಲಾಪುರ: ಪ್ರವಾಸಕ್ಕೆಂದು‌ ಬಂದಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಾತೊಡ್ಡಿ ಜಲಪಾತದಲ್ಲಿ ಸಂಭವಿಸಿದ ವರದಿಯಾಗಿದೆ.
ಭಾನುವಾರ ಪ್ರವಾಸಕ್ಕೆ ಬಂದಿದ್ದ ಹುಬ್ಬಳ್ಳಿಯ ಪೋತುಲ್ ರಾಮ ರಾವ್ (೫೧) ಮೃತರು ಎಂದು ಗುರುತಿಸಲಾಗಿದ್ದು, ಇವರ ಮೃತದೇಹವು ಸೋಮವಾರ ದೊರೆತಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಾತೊಡ್ಡಿ ಜಲಪಾತಕ್ಕೆ ಪ್ರವಾಸಕ್ಕೆಂದು ಅವರು ಬಂದಿದ್ದರು.
ಈಜಲು ನೀರಿಗೆ ಇಳಿದು ನಂತರ ಮುಳುಗಿದ್ದು, ಅಲ್ಲೇ ಇದ್ದವರು ಇವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಸ್ಥಳೀಯರು ಹಾಗೂ ಸ್ಥಳೀಯ ಗ್ರಾಮ ಅರಣ್ಯ ಸಮಿತಿಯವರು ಸೇರಿ ಭಾನುವಾರ ರಾತ್ರಿಯವರೆಗೂ ಹುಡುಕಾಡಿದರೂ ಶವ ಸಿಕ್ಕಿರಲಿಲ್ಲ. ಸೋಮವಾರ ಬೆಳಿಗ್ಗೆ ಮೃತದೇಹ ದೊರೆತಿದೆ. ಮುಳುಗಿದ ವ್ಯಕ್ತಿ ಹುಬ್ಬಳ್ಳಿಯಲ್ಲಿ ರೈಲ್ವೆ ಉದ್ಯೋಗಿಯಾಗಿದ್ದರು ಎಂದು ಹೇಳಲಾಗಿದೆ.

2.5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಜಗಳದ ಕುರಿತು ಸುಪ್ರೀಂ ಕೋರ್ಟ್‌

ನಿಮ್ಮ ಕಾಮೆಂಟ್ ಬರೆಯಿರಿ

advertisement