ಜಮ್ಮು-ಕಾಶ್ಮೀರದ ಸಿದ್ರಾದಲ್ಲಿ ಎನ್‌ಕೌಂಟರ್‌ನಲ್ಲಿ 3 ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಿದ್ರಾದಲ್ಲಿ ಅಡಗಿಕೊಂಡಿದ್ದ ಮೂವರು ಭಯೋತ್ಪಾದಕರು ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.
ಗುಂಡಿನ ಚಕಮಕಿ ನಡೆದಾಗ ಟ್ರಕ್‌ನಲ್ಲಿ ಭಯೋತ್ಪಾದಕರು ಇದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಎಡಿಜಿಪಿ ಹೇಳಿದ್ದಾರೆ.
ಇದೀಗ ಮೂವರೂ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಎನ್‌ಕೌಂಟರ್ ಸ್ಥಳದಿಂದ ಒಬ್ಬ ಭಯೋತ್ಪಾದಕನ ಶವವನ್ನು ಹೊರತೆಗೆಯಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ 15 ಕಿಲೋಗ್ರಾಂಗಳಷ್ಟು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪೊಲೀಸರು ನಿಷ್ಕ್ರಿಯಗೊಳಿಸಿದ ಕೇವಲ ಒಂದು ದಿನದ ನಂತರ ಮೂವರು ಭಯೋತ್ಪಕರನ್ನು ಕೊಂದು ಹಾಕಿದ್ದು, ಇದು ಪ್ರಮುಖ ಭಯೋತ್ಪಾದಕ ದಾಳಿಯನ್ನು ತಪ್ಪಿಸಿದೆ.
ಬಸಂತ್‌ಗಢ ಪ್ರದೇಶದಲ್ಲಿ ಸಿಲಿಂಡರಾಕಾರದ ಐಇಡಿ, 300-400 ಗ್ರಾಂ ಆರ್‌ಡಿಎಕ್ಸ್, ಏಳು 7.62 ಎಂಎಂ ಕಾರ್ಟ್ರಿಡ್ಜ್‌ಗಳು ಮತ್ತು ಐದು ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡ ನಂತರ ದೊಡ್ಡ ಭಯೋತ್ಪಾದನಾ ಯೋಜನೆಯನ್ನು ತಪ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಯ ಕೋಡೆಡ್ ಶೀಟ್ ಮತ್ತು ಲೆಟರ್ ಪ್ಯಾಡ್ ಪುಟವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಶಂಕಿತನನ್ನು ಬಂಧಿಸಲಾಗಿದೆ.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement