ಮೊದಲು ವಾಗ್ವಾದ, ನಂತರ ಜೋರಾಗಿ ಹೊಡೆದಾಟ : ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಹೊಡೆದಾಡಿಕೊಂಡ ಇಬ್ಬರು ಭಾರತೀಯ ಪ್ರಯಾಣಿಕರು | ವೀಕ್ಷಿಸಿ

ಬ್ಯಾಂಕಾಕ್‌ನಿಂದ ಕೋಲ್ಕತ್ತಾಕ್ಕೆ ಪ್ರಯಾಣಿಸುತ್ತಿದ್ದ ಅಂತಾರಾಷ್ಟ್ರೀಯ ವಿಮಾನದಲ್ಲಿ ಇಬ್ಬರು ಭಾರತೀಯ ಪ್ರಯಾಣಿಕರು ವಿಮಾನ ಹಾರಾಡುತ್ತಿದ್ದಾಗಲೇ ಹೊಡೆದಾಡಿಕೊಂಡ ವಿಲಕ್ಷಣ ಘಟನೆ ನಡೆದ ವರದಿಯಾಗಿದೆ.
ಮೊದಲು ಪರಸ್ಪರ ನಡೆದ ವಾಗ್ದಾವು ವಿಕೋಪಕ್ಕೆ ತೆರಳಿದ ನಂತರ ಹೊಡೆದಾಟ ನಡೆದಿದೆ. ಈ ಮಂಗಳವಾರ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ಥಾಯ್ ಸ್ಮೈಲ್ ಏರ್‌ವೇ ವಿಮಾನದಲ್ಲಿ ಇಬ್ಬರು ಭಾರತೀಯರು ಜಗಳವಾಡುತ್ತಿರುವುದನ್ನು ತೋರಿಸುತ್ತದೆ.
ಕೆಲವು ಕ್ಷಣಗಳ ನಂತರ, ಒಬ್ಬ ವ್ಯಕ್ತಿ ಮತ್ತೊಬ್ಬನಲ್ಲಿ “ಶಾಂತಿ ಸೆ ಬಾತ್ ಕರ್‌” (ಸಮಾಧಾನದಿಂದ ಮಾತನಾಡು) ಎಂದು ಹೇಳುವುದನ್ನು ಕೇಳಬಹುದು, ಆದರೆ ಇನ್ನೊಬ್ಬ “ಹಾತ್ ನೀಚೆ ಕರ್” (ನಿಮ್ಮ ಕೈಯನ್ನು ಕೆಳಕ್ಕೆ ಇರಿಸಿ) ಎಂದು ಹೇಳುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ, ವಾಗ್ವಾದ ದೈಹಿಕ ಹೊಡೆದಾಟಕ್ಕೆ ತಿರುಗುತ್ತದೆ. ಒಬ್ಬ ವ್ಯಕ್ತಿಯು ಆಕ್ರಮಣಕಾರಿಯಾಗಿ ಮತ್ತೊಬ್ಬನನ್ನು ಹೊಡೆಯುತ್ತಾನೆ ಹಾಗೂ ಮತ್ತೊಬ್ಬನ ಮುಖದ ಮೇಲೆ ಎಡೆಬಿಡದೆ ಹೊಡೆಯಲು ಪ್ರಾರಂಭಿಸುತ್ತಾನೆ.

ಆ ವ್ಯಕ್ತಿ ತನ್ನ ಕನ್ನಡಕವನ್ನು ತೆಗೆದು ಇನ್ನೊಬ್ಬ ವ್ಯಕ್ತಿಗೆ ಹೊಡೆಯುವುದನ್ನು ಕಾಣಬಹುದು, ಆತನ ಸ್ನೇಹಿತರು ಜಗಳದಲ್ಲಿ ಆತನೊಟ್ಟಿಗೆ ಸೇರುತ್ತಾರೆ. ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರು ಗಾಬರಿಗೊಂಡಿರುವುದನ್ನು ಕಾಣಬಹುದಾಗಿದೆ. ಆದಾಗ್ಯೂ, ಇನ್ನೊಬ್ಬ ವ್ಯಕ್ತಿ ತಿರುಗಿ ಹೊಡೆಯಲಿಲ್ಲ ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಮಾತ್ರ ಕಾಣಬಹುದು.
ಒಂದು ಹಂತದಲ್ಲಿ, ಫ್ಲೈಟ್ ಅಟೆಂಡೆಂಟ್ ಮೈಕ್ರೊಫೋನ್‌ನಲ್ಲಿ “ಜಗಳ ನಿಲ್ಲಿಸಿ” ಎಂದು ಹೇಳುವುದನ್ನು ಕೇಳಬಹುದು, ಹಾಗೂ ಇತರ ಪ್ರಯಾಣಿಕರು ಬಂದು ಜಗಳವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ.
ಕೆಲವು ಫ್ಲೈಟ್ ಅಟೆಂಡೆಂಟ್‌ಗಳು ಇಬ್ಬರನ್ನು ಯಶಸ್ವಿಯಾಗಿ ಇಬ್ಬರನ್ನೂ ಬೇರ್ಪಡಿಸಿ ಜಗಳ ನಿಲ್ಲಿಸುವ ಮೊದಲು ಸಹ-ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಜಗಳವನ್ನು ನಿಲ್ಲಿಸುವಂತೆ ವ್ಯಕ್ತಿಯನ್ನು ಕೇಳಿಕೊಳ್ಳುತ್ತಾರೆ.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

ಈ ತಿಂಗಳು ವಿಮಾನದಲ್ಲಿ ಹೊಡೆದಾಟ ನಡೆಯುತ್ತಿರುವುದು ಇದೇ ಮೊದಲಲ್ಲ. ಇಸ್ತಾನ್‌ಬುಲ್‌ನಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಗಗನಸಖಿಯೊಂದಿಗೆ ಗಲಾಟೆಗೆ ಇಳಿದಿದ್ದ.
ಘಟನೆಯ ಕುರಿತು ವಿಮಾನವು ಪ್ರತಿಕ್ರಿಯಿಸಿದೆ ಮತ್ತು “ನಾವು ಘಟನೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಗ್ರಾಹಕರ ಸೌಕರ್ಯವು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಭರವಸೆ ನೀಡಲು ಬಯಸುತ್ತೇವೆ” ಎಂದು ಹೇಳಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement