ಚಾಮರಾಜನಗರ: ತನ್ನ ಪ್ರೀತಿಯ ಬಗ್ಗೆ ದೇವರಲ್ಲಿ ನಿವೇದನೆ ಮಾಡಿಕೊಂಡು ಪ್ರೀತಿಸಿದವನನ್ನೇ ತಾನು ಮದುವೆ ಆಗಬೇಕು ಎಂದು ಬಯಸಿದ ಪ್ರೇಯಸಿಯೊಬ್ಬಳು ತಾನು ಪ್ರೀತಿಸಿದವನೇ ತನಗೆ ತಾಳಿ ಕಟ್ಟಬೇಕು ಎಂದು ಪತ್ರ ಬರೆದು ದೇವಿ ದೇಗುಲದ ಹುಂಡಿಗೆ ಹಾಕಿದ್ದಾಳೆ.
ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು ಎಂದು ಪ್ರೇಮಿ ದೇವರಿಕೆ ಹರಕೆ ಕಟ್ಟಿಕೊಂಡು ಪತ್ರ ಬರೆದು ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ.
ಹುಡುಗಿ ತನ್ನ ಹೆಸರು ಮತ್ತು ಬೇರೆ ಯಾವುದೇ ಮಾಹಿತಿಯನ್ನು ಬರೆದಿಲ್ಲ. ಆದರೆ, ತನ್ನ ಪ್ರಿಯಕರನ ಹೆಸರನ್ನು ಉಲ್ಲೇಖ ಮಾಡಿದ್ದಾಳೆ. ಚಾಮರಾಜನಗರ ತಾಲೋಕಿನ ಮುಕ್ಕಡಹಳ್ಳಿಯ ಮಾಯಮ್ಮದೇವಮ್ಮ ದೇವಸ್ಥಾನದಲ್ಲಿ ಈ ವಿದ್ಯಮಾನ ನಡೆದಿದೆ ಎಂದು ವರದಿಯಾಗಿದೆ.ಹುಂಡಿಯ ಹಣ ಎಣಿಕೆ ಸಂದರ್ಭದಲ್ಲಿ ಇದು ಲಭ್ಯವಾಗಿದೆ.
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ನಿಮ್ಮ ಕಾಮೆಂಟ್ ಬರೆಯಿರಿ