ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಬಿಎಂಟಿಸಿ ಶಾಕ್ ನೀಡಿದೆ. ಏರಿಕೆಯಾಗುತ್ತಿರುವ ಇಂಧನ ದರ ಹಾಗೂ ಇತರ ವೆಚ್ಚಗಳ ಹಿನ್ನೆಲೆಯಲ್ಲಿ ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದೆ.
ಬಿಎಂಟಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅದನ್ನು ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಕಳೆದೊಂದು ವರ್ಷದಿಂದ ಇಂಧನ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದ್ದರೂ ಬಸ್ ಪ್ರಯಾಣದ ದರ ಮಾತ್ರ ಹೆಚ್ಚಳ ಮಾಡಿರಲಿಲ್ಲ. ಆದರೆ, ಈಗ ಜವರಿ ೧ರಿಂದಲೇ ಜಾರಿ ಆಗುವಂತೆ ಬಸ್ ಪ್ರಯಾಣದ ದರವನ್ನು ಹೆಚ್ಚಳ ಮಾಡಲಾಗಿದೆ. ಜೊತೆಗೆ, ಮಾಸಿಕ ಮತ್ತು ದಿನದ ಬಸ್ ಪಾಸ್‌ನ ದರವನ್ನೂ ಹೆಚ್ಚಳ ಮಾಡಿದೆ. ಅಲ್ಲದೆ ಮಾಸಿಕ ಪಾಸ್ ಪಡೆದವರಿಗೆ ಮತ್ತೊಂದು ಶಾಕ್ ನೀಡಿದ್ದು, ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರದ ದಿನ ಪಾಸ್ ಬಳಸಿ ಉಚಿತ ಪ್ರಯಾಣಿಸುವಂತಿಲ್ಲ. ಸಾಮಾನ್ಯ ಪಾಸ್ ಇದ್ದವರು ಹಾಗೂ ಹಿರಿಯ ನಾಗರಿಕರು ಪಾಸ್‌ನಲ್ಲಿ ಭಾನುವಾರದ ಉಚಿತ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ
ವಾಯುವಜ್ರದ ಮಾಸಿಕ ದರ ೧,೫೦೦ ರೂ.ಗಳಿಂದ ೧,೮೦೦ ರೂ.ಗಳಿಗೆ ಏರಿಕೆಯಾಗಿದೆ. ವಜ್ರ ಹಾಗೂ ವೊಲ್ವೊ ಬಸ್‌ಗಳ ದಿನದ ಪಾಸ್‌ನ ದರ ೧೦೦ ರೂ. ಇತ್ತು. ಈಗ ಈ ದರವನ್ನು ಪರಿಷ್ಕರಿಸಲಾಗಿದ್ದು ಪ್ರತಿದಿನದ ಪಾಸ್ ದರವನ್ನು ೧೨೫ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ