ನಾನು ರಿಷಬ್ ಪಂತ್, ಕ್ರಿಕೆಟ್‌ ಆಟಗಾರ : ರಕ್ಷಿಸಲು ಬಂದ ವ್ಯಕ್ತಿಗೆ ಹೇಳಿದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ರಿಷಬ್‌ ಪಂತ್

ಡಿಸೆಂಬರ್ 30 ರಂದು ಮುಂಜಾನೆ ಭೀಕರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಭಾರತದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ಸ್ಥಳಕ್ಕೆ ತಲುಪಿ ರಿಶಬ್‌ ಪಂತ್‌ ಅವರನ್ನು ನೋಡಿದ ಹಾಗೂ ಅವರನ್ನು ಬೆಂಕಿ ಹೊತ್ತಿದ್ದ ಕಾರಿನಿಂದ ಪಾರು ಮಾಡಿದ ಮೊದಲ ವ್ಯಕ್ತಿ ಬಸ್ ಚಾಲಕ ಸುಶೀಲ ಅವರು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಡಿಸೆಂಬರ್ 30 ರಂದು ಮುಂಜಾನೆ ಈ ಘಟನೆ ನಡೆದಿದ್ದು, ಪಂತ್ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಅವರ ಸಹಾಯಕ್ಕೆ ಬಂದವರಲ್ಲಿ ಸುಶೀಲ್ ಎಂಬ ಬಸ್ ಚಾಲಕ ಮೊದಲಿಗರು.
ಇಂಡಿಯಾ ಟುಡೇ ಜೊತೆ ಮಾತನಾಡುವಾಗ ಬಸ್‌ ಚಾಲಕ ಸುಶೀಲ ಮಾನ್‌ ಅವರು, ಅಪಘಾತದ ನಂತರ ಭಾರತದ ಸ್ಟಾರ್ ಕ್ರಿಕೆಟ್‌ ಆಟಗಾರ ತೀವ್ರವಾಗಿ ಗಾಯಗೊಂಡಿದ್ದರು ಮತ್ತು ಕುಂಟುತ್ತಿದ್ದರು ಎಂದು ಹೇಳಿದ್ದಾರೆ ಮತ್ತು ಅವರು ಗಾಯಗೊಂಡಿದ್ದರೂ ತಮ್ಮ ಗುರುತನ್ನು ಹೇಳಿದರು, ತಾನು ಕ್ರಿಕೆಟ್‌ ಆಟಗಾರ ರಿಷಬ್ ಪಂತ್ ಎಂದು ಅವರು ಹೇಳಿದರು ಎಂದು ಸುಶೀಲ್‌ ತಿಳಿಸಿದ್ದಾರೆ.

ನಾನು ಹರಿದ್ವಾರದಿಂದ ಮುಂಜಾನೆ 4:25ಕ್ಕೆ ಹೊರಟಿದ್ದೆ. ಒಂದು ಸ್ಟಾಪ್‌ ಬಳಿ ನನ್ನ ಬಸ್ ನಿಧಾನಗೊಳಿಸಿದೆ ಮತ್ತು ಸುಮಾರು 300 ಮೀಟರ್ ದೂರದಲ್ಲಿ ಸ್ವಲ್ಪ ಬೆಳಕು ಅಲ್ಲಿ ಮತ್ತು ಇಲ್ಲಿ ಚಲಿಸುವುದನ್ನು ನೋಡಿದೆ. ಅದು ಕಾರು ಎಂದು ಊಹಿಸಲು ಕಷ್ಟವಾಯಿತು. ಏನೋ ತಪ್ಪಾಗಿದೆ ಮತ್ತು ಅಪಘಾತ ಸಂಭವಿಸಿದೆ ಎಂದು ನಾನು ನನ್ನ ಕಂಡಕ್ಟರ್‌ಗೆ ಹೇಳಿದೆ ಎಂದು ಮಾನ್ ಘಟನೆ ಬಗ್ಗೆ ಹೇಳಿದ್ದಾರೆ.
ಸುಮಾರು 100 ಮೀಟರ್‌ನಲ್ಲಿ, ಹರಿದ್ವಾರಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಕಾರು ಡಿಕ್ಕಿ ಹೊಡೆದಿದೆ. ಕಾರು ಬಸ್ಸಿನತ್ತ ಮುಖ ಮಾಡಿದ್ದರಿಂದ ಪ್ರಯಾಣಿಕರು ಭಯಗೊಂಡರು. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಅದು ಈಗಾಗಲೇ ಮೂರ್ನಾಲ್ಕು ಬಾರಿ ತಿರುಗಿತು ಎಂದು ಅವರು ಮುಂದುವರಿಸಿದರು.
“ಪಂತ್ ಕಾರಿನಿಂದ ಅರ್ಧದಷ್ಟು ಹೊರಗಿದ್ದರು ಮತ್ತು ನಾನು ಬ್ರೇಕ್‌ ಹೊಡೆದು ಬಸ್‌ ನಿಲ್ಲಿಸಿದೆ. ಮತ್ತು ನಾನು ಮತ್ತು ನನ್ನ ಕಂಡಕ್ಟರ್ ಹೊರಗೆ ಹೋಗಿ ಅವರನ್ನು ಕಾರಿನಿಂದ ಹೊರಗೆ ತೆಗೆದೆವು. ನೀವು ಒಬ್ಬರೇ ಇದ್ದೀರಾ ಎಂದು ನಾನು ಅವರನ್ನು ಕೇಳಿದೆ ಮತ್ತು ಅವರು ‘ಹೌದು’ ಎಂದು ಹೇಳಿದರು. ಅವರು ಎಚ್ಚರವಾಗಿದ್ದಾರೆ ಎಂಬುದು ಗೊತ್ತಾಯಿತು. ನಂತರ ಅವರು ನಾನು ಕ್ರಿಕೆಟ್‌ ಆಟಗಾರ ರಿಷಬ್ ಪಂತ್ ಎಂದು ಅವರು ಹೇಳಿದರು ಎಂದು ಸುಶೀಲ್‌ ತಿಳಿಸಿದ್ದಾರೆ.

https://twitter.com/Vikas_singhji/status/1608725232386461697?ref_src=twsrc%5Etfw%7Ctwcamp%5Etweetembed%7Ctwterm%5E1608725232386461697%7Ctwgr%5Ea10ab5ec9603b1eddf65c59f5b253c8d8581f2b9%7Ctwcon%5Es1_&ref_url=https%3A%2F%2Fzeenews.india.com%2Fcricket%2Frishabh-pant-car-accident-who-is-bus-driver-sushil-who-saved-rishabh-pants-life-by-breaking-window-of-his-car-check-2555792.html

ರಿಷಬ್ ಪಂತ್ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಸುಶೀಲ್ ಅವರು ಕಾರಿನ ಗಾಜು ಒಡೆದು ರಿಷಬ್‌ ಅವರನ್ನು ರಕ್ಷಿಸಿದ್ದಾರೆ.
ಪಂತ್ ಅವರ ಕಾರು ಬ್ಯಾರಿಕೇಡ್ ಮುರಿದು ಸುಮಾರು 200 ಮೀಟರ್ ವರೆಗೆ ಸ್ಕಿಡ್ ಆಗಿ ಅಪಘಾತ ಸಂಭವಿಸಿತ್ತು ಎಂದು ವರದಿಯಾಗಿದೆ. ಪಂತ್ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ತಮ್ಮ ಸರ್ಕಾರ ಭರಿಸಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಕ್ರಿಕೆಟಿಗನ ಸ್ಥಿತಿಯ ಕುರಿತು ಮಾಹಿತಿ ಪಡೆಯಲು ಧಾಮಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಮತ್ತು ಅವರ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದ್ದಾರೆ ಹಾಗೂ ಅಗತ್ಯವಿದ್ದರೆ ಏರ್ ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಬೇಕು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement