ನೂತನ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಾವುಟ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇತ್ತೀಚೆಗೆ ಘೋಷಿಸಿರುವ ನೂತನ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಾವುಟವನ್ನು ಅವರ ಪತ್ನಿ ಅರುಣಾ ಲಕ್ಷ್ಮಿ ಅವರು ಬೆಣಕಲ್ ಗ್ರಾಮದಲ್ಲಿ ಭಾನುವಾರ ಅನಾವರಣ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಗೆ ಪ್ರವೇಶ ನಿಷೇಧ ಆಗಿರುವ ಕಾರಣ ಅಲ್ಲಿ ಅವರ ಪತ್ನಿ ರಾಜಕೀಯದ ಅಖಾಡಾಕ್ಕೆ ಇಳಿದಿದ್ದಾರೆ. ಬಾವುಟದಲ್ಲಿ ಹಸ್ತಲಾಘವ ಮಾಡುತ್ತಿರುವ ಸಹಕಾರ ಮಾದರಿಯ ಚಿಹ್ನೆ ಇದೆ.
ಪಕ್ಷದ ಧ್ವಜ ಅನಾವರಣ ಮಾಡಿ ಮಾತನಾಡಿದ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಅವರು, ಇಡೀ ರಾಜ್ಯ ಕಲ್ಯಾಣ ಕರ್ನಾಟಕ ಆಗಬೇಕೆಂಬುದು ಜನಾರ್ದನ ರೆಡ್ಡಿಯವರ ಬಯಕೆ. ಅವರ ಆಶಯದಂತೆ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜನಾರ್ದನ ರೆಡ್ಡಿಯವರಿಗೆ ಕೋರ್ಟ್ ನಿರ್ಬಂಧ ಇರುವುದರಿಂದ ನಾನು ಬೆಣಕಲ್ ಗ್ರಾಮಕ್ಕೆ ಬಂದಿದ್ದೇನೆ. ಜಾತಿ, ಮತ, ಜಾತಿ ಭೇದವಿಲ್ಲದೆ ಪಕ್ಷ ಕಟ್ಟೋಣ. ಜನಾರ್ನ ರೆಡ್ಡಿಯವರು ನೋವು, ಅವಮಾನವನ್ನು ಸಹಿಸಿಕೊಂಡಿದ್ದಾರೆ. ಜನರಿಗೆ ಸೇವೆ ಮಾಡಬೇಕೆಂದು ಪಕ್ಷ ಕಟ್ಟಿದ್ದಾರೆ. ರೆಡ್ಡಿಯನ್ನು ಜ‌ನರಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಇತ್ತೀಚೆಗೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಜನಾರ್ದನ ರೆಡ್ಡಿ ಅವರು ಕಲ್ಯಾಣ ಕರ್ನಾಟಕದ ಅಭ್ಯುಯದ ಪರಿಕಲ್ಪನೆ ಇಟ್ಟುಕೊಂಡು “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ” ಎಂಬ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದರು. ಯಾವುದೇ ಜಾತಿ, ಮತ, ಭೇದವಿಲ್ಲದೆ ಜನಪರ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದ್ದರು.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement