ಸ್ನಿಫರ್ ನಾಯಿ 3 ಮರಿಗಳಿಗೆ ಜನ್ಮ ನೀಡಿದ ನಂತ್ರ ಗಡಿ ಭದ್ರತಾ ಪಡೆ ನ್ಯಾಯಾಲಯದ ತನಿಖೆಗೆ ಆದೇಶ..!

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯಲ್ಲಿ ಕರ್ತವ್ಯದಲ್ಲಿದ್ದ ಸ್ನಿಫರ್ ನಾಯಿಯು ಸಕ್ರಿಯ ಕರ್ತವ್ಯದಲ್ಲಿರುವಾಗ ಅನಿರೀಕ್ಷಿತವಾಗಿ 3 ನಾಯಿಗಳಿಗೆ ಜನ್ಮ ನೀಡಿದೆ. ಇದರ ಬೆನ್ನಲ್ಲೇ ಭದ್ರತಾ ಪಡೆ ಈ ಲೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಆದೇಶಿಸಿದೆ.
ಶಿಲ್ಲಾಂಗ್‌ನ ಬಾಂಗ್ಲಾದೇಶದ ಗಡಿಯಲ್ಲಿರುವ ಬಾರ್ಡರ್ ಔಟ್‌ಪೋಸ್ಟ್‌ನಲ್ಲಿ (BOB) ನಿಯೋಜಿಸಲಾದ ಗಡಿ ಭದ್ರತಾ ಪಡೆ (BSF)ಯ ನಾಯಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಗಡಿ ಭದ್ರತಾ ಪಡೆ ನ್ಯಾಯಾಲಯದ ತನಿಖೆಗೆ ಆದೇಶಿಸಿದೆ ಮತ್ತು ಡೆಪ್ಯುಟಿ ಕಮಾಂಡೆಂಟ್ ಶ್ರೇಣಿಯ ಅಧಿಕಾರಿ ಈ ವಿಷಯದ ಬಗ್ಗೆ ವರದಿಯನ್ನು ಸಲ್ಲಿಸಬೇಕಾಗಿದೆ.
ಯಾಕೆಂದರೆ ಬಿಎಸ್‌ಎಫ್ ನಾಯಿಯು ಹೈ-ಸೆಕ್ಯುರಿಟಿ ವಲಯದಲ್ಲಿ ಮತ್ತು ಅದರ ನಿರ್ವಾಹಕರ ನಿರಂತರ ಜಾಗರೂಕತೆ ಮತ್ತು ರಕ್ಷಣೆಯಲ್ಲಿ ಗರ್ಭ ಧರಿಸಬಾರದು ಎಂಬ ನಿಯಮವಿದೆ. ಭದ್ರತಾ ಪಡೆಯ ಪಶುವೈದ್ಯ ವಿಭಾಗದ ಮೇಲ್ವಿಚಾರಣೆಯಲ್ಲಿ ಮಾತ್ರ ಅದಕ್ಕೆ ಸಂತಾನೋತ್ಪತ್ತಿ ಮಾಡಲು ಅನುಮತಿಸಲಾಗಿದೆ ಎಂದು ಬಿಎಸ್‌ಎಫ್‌ ನಿಯಮಗಳು ಹೇಳುತ್ತದೆ.

ಉನ್ನತ ತರಬೇತಿ ಪಡೆದ ಬಿಎಸ್‌ಎಫ್ ನಾಯಿಗಳನ್ನು ಅವುಗಳ ನಿರ್ವಾಹಕರ ಮೇಲ್ವಿಚಾರಣೆಯಲ್ಲಿ ಇರಿಸಲಾಗುತ್ತದೆ ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. “ಈ ನಾಯಿಗಳು ಎಂದಿಗೂ ಇತರ ನಾಯಿಗಳೊಂದಿಗೆ ಸಂಪರ್ಕಕ್ಕೆ ಬರುವುದಿಲ್ಲ. ಮತ್ತು ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಅವುಗಳಿಗೆ ಸಂತಾನೋತ್ಪತ್ತಿಗೆ ಅನುಮತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಬಿಎಸ್ಎಫ್ ಸೇರಿದಂತೆ ಇತರ ಕೇಂದ್ರೀಯ ಪಡೆಗಳಲ್ಲಿರುವ ಕಾರ್ಯಾಚರಣೆಯ ನಾಯಿಗಳ ತರಬೇತಿ, ಸಂತಾನೋತ್ಪತ್ತಿ, ಲಸಿಕೆ, ಆಹಾರ ಮತ್ತು ಆರೋಗ್ಯದ ಬಗ್ಗೆ ವಿಶೇಷ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ನಮೂದಿಸಬೇಕಾಗುತ್ತದೆ. ಈ ಸ್ನಿಪರ್‌ ನಾಯಿಗಳು ಶಿಬಿರ ಅಥವಾ ಬಿಒಪಿಯಲ್ಲಿದ್ದರೆ, ಅವುಗಳಿಗೆ ಭದ್ರತಾ ಕವಚವಿರುತ್ತದೆ ಮತ್ತು ಯಾವುದೇ ಹೊರಗಿನ ನಾಯಿಗಳು ಅಂದರೆ ಬೀದಿ ನಾಯಿಗಳು ಶಿಬಿರಕ್ಕೆ ಪ್ರವೇಶಿಸುವಂತಿಲ್ಲ. ಆದರೂ ಈ ಸ್ನಿಪರ್‌ ನಾಯಿ ಅದರ ಮೇಲ್ವಿಚಾರಣೆ ಮಾಡುವ ವಿಭಾಗಕ್ಕೆ ಗೊತ್ತಿಲ್ಲದಂತೆ ಗರ್ಭ ಧರಿಸಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಇದು ಬಿಎಸ್‌ಎಫ್‌ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಹೀಗಾಗಿ ಇದು ಬೇರೆ ನಾಯಿಗಳ ಸಂಪರ್ಕಕ್ಕೆ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement