ನವದೆಹಲಿ: ದೆಹಲಿಯಲ್ಲಿ ಭಾನುವಾರ ಬೆಳಿಗ್ಗೆ ಸ್ಕೂಟಿಗೆ ಕಾರೊಂದು ಡಿಕ್ಕಿ ಹೊಡೆದ ನಂತರ ಮಹಿಳೆಯೊಬ್ಬರನ್ನು ಕಾರು ಕಿಲೋಮೀಟರ್ಗಟ್ಟಲೆ ದೂರ ಎಳೆದೊಯ್ದ ನಂತರ ಮಹಿಳೆ ಸಾವಿಗೀಡಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೊಸ ಸಿಸಿಟಿವಿ ಫೂಟೇಜ್ ಹೊರಬಿದ್ದಿದ್ದು, ಕಾಂಜವಾಲಾ ಪ್ರದೇಶದಲ್ಲಿ ಕಾರು ಯು-ಟರ್ನ್ ಮಾಡುತ್ತಿರುವುದನ್ನು ತೋರಿಸುತ್ತದೆ. ವಾಹನದ ಕೆಳಗೆ ಮಹಿಳೆಯ ಶವ ಗೋಚರಿಸಿದೆ.
ಮುಂಜಾನೆ 3:34 ರ ದೃಶ್ಯಾವಳಿಗಳು ವಾಹನವು ಲಾಡ್ಪುರ ಗ್ರಾಮದಿಂದ ಸ್ವಲ್ಪ ಮುಂದೆ ಯು-ಟರ್ನ್ ಮಾಡಿ ತೋಸಿ ಗ್ರಾಮದ ಕಡೆಗೆ ಚಲಿಸುವುದನ್ನು ತೋರಿಸುತ್ತದೆ. ಅಲ್ಲಿ ಈ ಪ್ರಕರಣದ ಪ್ರತ್ಯಕ್ಷದರ್ಶಿ ದೀಪಕ್ ದಹಿಯಾ ಅವರು ಮಿಠಾಯಿ ಅಂಗಡಿಯನ್ನು ನಡೆಸುತ್ತಿದ್ದಾರೆ.
ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಕಾರು ಯು-ಟರ್ನ್ ತೆಗೆದುಕೊಳ್ಳುವುದನ್ನು ತಾನು ನೋಡಿದ್ದೇನೆ ಎಂದು ದಹಿಯಾ ಹೇಳಿದ್ದರು. ಮುಂಜಾನೆ 3.34 ಕ್ಕೆ ದಾಖಲಾಗಿರುವ ದೃಶ್ಯಾವಳಿಗಳು, ಶವ ಪತ್ತೆಯಾದ ಸ್ಥಳಕ್ಕೆ ಕಾರು ಹೋಗುತ್ತಿರುವುದನ್ನು ತೋರಿಸುತ್ತದೆ. ಕಾರಿನ ಕೆಳಗೆ ದೇಹವನ್ನು ಸ್ಪಷ್ಟವಾಗಿ ಕಾಣಬಹುದು.
ಅಂಡರ್ಕೇಜಿನಲ್ಲಿ ಸಿಕ್ಕಿಹಾಕಿಕೊಂಡ ಯುವತಿಯ ದೇಹವನ್ನು ಕಿಲೋಮೀಟರ್ಗಳವರೆಗೆ ಎಳೆದೊಯ್ದಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಆ ದಾರಿಯಲ್ಲಿ ಓಡಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
“ಬೆಳಿಗ್ಗೆ 3:20 ಆಗಿತ್ತು…ನಾನು ಅಂಗಡಿಯ ಹೊರಗೆ ನಿಂತಿದ್ದಾಗ ಸುಮಾರು 100 ಮೀಟರ್ ದೂರದಲ್ಲಿ ವಾಹನದಿಂದ ದೊಡ್ಡ ಶಬ್ದ ಕೇಳಿಸಿತು, ಮೊದಲು ಟೈರ್ ಸ್ಫೋಟಗೊಂಡಿದೆ ಎಂದು ನಾನು ಭಾವಿಸಿದೆವು. ಕಾರು ಚಲಿಸಿದ ತಕ್ಷಣ ನಾನು ಶವವನ್ನು ನೋಡಿದೆ. ಕಾರು ಎಳೆದೊಯ್ಯುತ್ತಿತ್ತು. ನಾನು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ದಹಿಯಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಆರೋಪಿಗಳು ಒಂದೇ ರಸ್ತೆಯಲ್ಲಿ ಪದೇ ಪದೇ ವಾಹನ ಚಲಾಯಿಸುತ್ತಿದ್ದರು, ಅನೇಕ ಯು-ಟರ್ನ್ಗಳನ್ನು ತೆಗೆದುಕೊಂಡರು ಎಂದು ದಹಿಯಾ ಹೇಳಿದ್ದಾರೆ. “ನಾನು ಅವರನ್ನು ಹಲವು ಬಾರಿ ನಿಲ್ಲಿಸಲು ಪ್ರಯತ್ನಿಸಿದೆ, ಆದರೆ ಅವರು ವಾಹನವನ್ನು ನಿಲ್ಲಿಸಲಿಲ್ಲ. ಸುಮಾರು ಒಂದೂವರೆ ಗಂಟೆಗಳ ಕಾಲ ಅವರು ಸುಮಾರು 20 ಕಿ.ಮೀ ವರೆಗೆ ಯುವತಿಯ ಶವವನ್ನು ಹೊತ್ತೊಯ್ದರು ಎಂದು ಅವರು ಹೇಳಿದ್ದಾರೆ.
ತನ್ನ ಮೋಟಾರು ಸೈಕಲ್ನೊಂದಿಗೆ ಕಾರನ್ನು ಹಿಂಬಾಲಿಸಿ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೆ. ಕಾರಿನಿಂದ ಶವ ಬಿದ್ದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿಸಿದರು. ಇದು ಕೇವಲ ಅಪಘಾತವಾಗಿರಲಿಕ್ಕಿಲ್ಲ ಎಂದು ದಹಿಯಾ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘಟನೆಯನ್ನು “ನಾಚಿಕೆಗೇಡಿನ” ಎಂದು ಕರೆದಿದ್ದಾರೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
“ಕಾಂಜಾವಾಲಾದಲ್ಲಿ ನಮ್ಮ ಸಹೋದರಿಗೆ ಏನಾಯಿತು ಎಂಬುದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ, ಜೊತೆಗೆ ಪೊಲೀಸರು ಕಾನೂನು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಪತ್ರಿಕೆಯ ಕ್ಲಿಪ್ಪಿಂಗ್ನೊಂದಿಗೆ ಹೇಳಿದ್ದಾರೆ.
ಕಾರನ್ನು ಪತ್ತೆ ಹಚ್ಚಲಾಗಿದ್ದು, ಐವರು ಪ್ರಯಾಣಿಕರನ್ನು ಅವರ ಮನೆಯಿಂದ ಬಂಧಿಸಿ ಕರೆತರಲಾಗಿದೆ.
ಬಂಧಿತ ಆರೋಪಿಗಳು, ತಾವು ಕಾರಿನ ಗಾಜುಗಳನ್ನು ಮೇಲಕ್ಕೇರಿಸಿದ್ದೆವು ಮತ್ತು ಕಾರಿನೊಳಗೆ ಜೋರಾಗಿ ಸಂಗೀತ ಕೇಳುತ್ತಿದ್ದೆವು, ಆದ್ದರಿಂದ ತಾವು ಕಾರಿನ ಕೆಳಗಡೆ ದೇಹವನ್ನು ಗಮನಿಸಲಿಲ್ಲ ಮತ್ತು ಏನಾಯಿತು ಎಂಬುದನ್ನು ಗೊತ್ತಾದ ನಂತರ ಸ್ಥಳದಿಂದ ಪರಾರಿಯಾಗಿರುವುದಾಗಿ ಹೇಳಿದ್ದಾರೆ.
ಬಂಧಿತ ಆರೋಪಿಗಳನ್ನು ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕ್ರಿಶನ್ (27), ಮಿಥುನ್ (26) ಮತ್ತು ಮನೋಜ್ ಮಿತ್ತಲ್ (27) ಎಂದು ಗುರುತಿಸಲಾಗಿದೆ. ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅಪಘಾತದ ಸಮಯದಲ್ಲಿ ಪುರುಷರು ಕುಡಿದ ಸ್ಥಿತಿಯಲ್ಲಿದ್ದರೇ ಎಂದು ಪರಿಶೀಲಿಸಲು ಅವರ ಮಾದರಿಗಳನ್ನು ಸಹ ತೆಗೆದುಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ