ಅಮಾನತುಗೊಂಡಿದ್ದ ತಮಿಳುನಾಡು ಬಿಜೆಪಿ ನಾಯಕಿ ಗಾಯತ್ರಿ ರಘುರಾಂ ಪಕ್ಷಕ್ಕೆ ರಾಜೀನಾಮೆ

ಚೆನ್ನೈ: ಬಿಜೆಪಿಯಿಂದ ಅಮಾನತುಗೊಂಡಿದ್ದ ನಟಿ, ನೃತ್ಯ ಸಂಯೋಜಕಿ ಹಾಗೂ ರಾಜಕಾರಣಿ ಗಾಯತ್ರಿ ರಘುರಾಮ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಮಂಗಳವಾರದ ಸರಣಿ ಟ್ವೀಟ್‌ಗಳಲ್ಲಿ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಹಾಗೂ ಇದಕ್ಕಾಗಿ ಅವರು ತಮಿಳೂನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ದೂಷಿಸಿದ್ದಾರೆ.
ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಮಹಿಳೆಯರಿಗೆ ಗೌರವದ ಕೊರತೆಯಿಂದಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡುತ್ತಿರುವುದಾಗಿಗಾಯತ್ರಿ ರಘುರಾಂ ಹೇಳಿದ್ದಾರೆ.
ನಿಜವಾದ ಕಾರ್ಯಕರ್ತರ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ ಎಂದು ಹೇಳಿಕೊಂಡ ಗಾಯತ್ರಿ ಅವರು, ನಾನು ಇನ್ನೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಿಷ್ಠೆ ಹೊಂದಿದ್ದೇನೆ. ತನ್ನ ರಾಜೀನಾಮೆಯ ಹಿಂದಿನ ಕಾರಣ ಅಣ್ಣಾಮಲೈ ಎಂದು ಹೇಳಿರುವ ಅವರು, ಅಣ್ಣಾಮಲೈ ಅವರನ್ನು ಸುಳ್ಳುಗಾರ ಎಂದು ಕರೆದಿದ್ದಾರೆ.
ಅಣ್ಣಾಮಲೈ ನಾಯಕತ್ವದಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ಅವರಿಂದ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ತಮ್ಮ ಟ್ವಿಟ್ಟರ್‌ನಲ್ಲಿ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದಾರೆ. ಪಕ್ಷದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮನ್ನು ಯಾರಾದರೂ ಉಳಿಸುತ್ತಾರೆ ಎಂದು ನಂಬಬಾರದು ಮತ್ತು ಗೌರವವಿಲ್ಲದ ಸ್ಥಳಗಳಲ್ಲಿ ಉಳಿಯಬಾರದು ಎಂದು ಹೇಳಿದರು. ಗಾಯತ್ರಿ ಅವರು ಅಣ್ಣಾಮಲೈ ವಿರುದ್ಧ ಪೊಲೀಸ್ ದೂರು ನೀಡಲು ಸಿದ್ಧರಿರುವುದಾಗಿ ಅವರನ್ನು ತನಿಖೆ ಮಾಡಬೇಕಾಗಿದೆ ಎಂದು ಹೇಳಿದರು.
ತಮಿಳುನಾಡು ಬಿಜೆಪಿಯ ಗುಪ್ತಚರ ವಿಭಾಗದ ಉಪಾಧ್ಯಕ್ಷ ಸೆಲ್ವಕುಮಾರ್ ತನ್ನನ್ನು ಟ್ವಿಟರ್‌ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ ಮತ್ತು ಅವರ ಸಂದೇಶಗಳಿಗೆ ಮರುಪ್ರಶ್ನೆ ಮಾಡಿದ ಕಾರಣ ತಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ಕೇಂದ್ರ ಬಜೆಟ್-2023 : 1%ರಷ್ಟು ವೆಚ್ಚ ಕಡಿತಕ್ಕೆ ಏಪ್ರಿಲ್ 1ರಿಂದ ಎಂಎಸ್‌ಎಂಇಗಳಿಗೆ ಪರಿಷ್ಕರಿಸಿದ ಕ್ರೆಡಿಟ್ ಗ್ಯಾರಂಟಿ ಯೋಜನೆ, ಎಲ್ಲ ವ್ಯವಹಾರಗಳಿಗೆ ಪಾನ್‌ (PAN) ಸಾಮಾನ್ಯ ಗುರುತಿಸುವಿಕೆ ಕಾರ್ಡ್‌ ಆಗಿ ಬಳಕೆ

ನಾನು ನನ್ನ ಹೃದಯ ಮತ್ತು ಆತ್ಮಸಾಕ್ಷಿಯಲ್ಲಿ ಹಿಂದೂ ಧರ್ಮವನ್ನು ಬಲವಾಗಿ ನಂಬುತ್ತೇನೆ. ನಾನು ಅದನ್ನು ರಾಜಕೀಯ ಪಕ್ಷದಲ್ಲಿ ಹುಡುಕುವ ಅಗತ್ಯವಿಲ್ಲ. ನಾನು ದೇವರು ಮತ್ತು ಧರ್ಮವನ್ನು ಹುಡುಕಲು ದೇವಸ್ಥಾನಕ್ಕೆ ಹೋಗುತ್ತೇನೆ. ದೇವರು ಎಲ್ಲೆಲ್ಲೂ ಇದ್ದಾನೆ. ದೇವರು ನನ್ನೊಂದಿಗಿದ್ದಾನೆ. ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಗಾಯತ್ರಿ ರಘುರಾಮ್ ಅವರನ್ನು ನವೆಂಬರ್ 2022 ರಿಂದ ಆರು ತಿಂಗಳ ಅವಧಿಗೆ ಪಕ್ಷದ ಎಲ್ಲಾ ಸ್ಥಾನಗಳಿಂದ ಅಮಾನತುಗೊಳಿಸಿದ್ದರು.
ಆಗಿನ ಒಬಿಸಿ ಮೋರ್ಚಾದ ರಾಜ್ಯ ನಾಯಕ ತಿರುಚಿ ಸೂರಿಯಾ ಅವರೊಂದಿಗೆ ಸಾಮಾಜಿಕ ಮಾಧ್ಯಮದ ಬಹಿರಂಗ ವಾಗ್ವಾದದ ನಂತರ ಈ ಕ್ರಮವು ಬಂದಿತ್ತು.
ಪಕ್ಷದ ಅಲ್ಪಸಂಖ್ಯಾತ ಮೋರ್ಚಾ ನಾಯಕಿ ಡೈಸಿ ಸರಿನ್ ಅವರೊಂದಿಗಿನ ಚಾಟ್‌ಗಳು ಮಾಧ್ಯಮಗಳಿಗೆ ಸೋರಿಕೆಯಾದ ನಂತರ ಸೂರ್ಯ ಅವರಿಗೆ ಪಕ್ಷದ ನಾಯಕತ್ವವು ಛೀಮಾರಿ ಹಾಕಿತ್ತು. ಬಿಜೆಪಿ ಇತರೆ ರಾಜ್ಯ ಮತ್ತು ಸಾಗರೋತ್ತರ ತಮಿಳು ಅಭಿವೃದ್ಧಿ ವಿಭಾಗದ ರಾಜ್ಯಾಧ್ಯಕ್ಷರಾಗಿದ್ದ ಗಾಯತ್ರಿ ರಘುರಾಮ್ ಅವರು ಸೂರ್ಯ ಅವರೊಂದಿಗೆ ಈ ವಾಗ್ವಾದದ ವಿವಾದಲ್ಲಿ ಸೇರಿಕೊಂಡಿದ್ದರು.
ಕುತೂಹಲಕಾರಿಯಾಗಿ, ಡಿಎಂಕೆ ನಾಯಕ ತಿರುಚಿ ಶಿವ ಅವರ ಪುತ್ರರಾಗಿರುವ ಸೂರ್ಯ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಪಕ್ಷದ-ರಾಜ್ಯ ಸಂಘಟನಾ ಕಾರ್ಯದರ್ಶಿ ಕೇಶವ ವಿನಾಯಗಂ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇಬ್ಬರು ಪ್ರಮುಖ ಯುವ ನಾಯಕರ ರಾಜೀನಾಮೆಯಿಂದ ತಮಿಳುನಾಡು ಬಿಜೆಪಿ ಬಿಕ್ಕಟ್ಟಿಗೆ ಸಿಲುಕಿದ್ದು, ರಾಜಕಾರಣಿಯಾಗುವ ಮುನ್ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರ ಪೊಲೀಸ್ ಮಾದರಿಯ ಕಾರ್ಯವೈಖರಿ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಕೇಂದ್ರ ಬಜೆಟ್‌ 2023 : ರೈಲ್ವೆಗೆ ಬಜೆಟ್‌ನಲ್ಲಿ ಸಾರ್ವಕಾಲಿಕ ದಾಖಲೆ ಹಣ ಮೀಸಲು, ಒಂದು ಜಿಲ್ಲೆ, ಒಂದು ಉತ್ಪನ್ನ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement