ನವದೆಹಲಿ : ಜಗತ್ತಿನ ಅತಿ ಎತ್ತರದ ಹಾಗೂ ಕ್ಲಿಷ್ಟಕರ ಯುದ್ಧ ಭೂಮಿ ಎಂದೇ ಖ್ಯಾತಿ ಪಡೆದಿರುವ ಸಿಯಾಚಿನ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಸಿಯಾಚಿನ್ ಗ್ಲೇಸಿಯರ್‌ನ ಕುಮಾರ ಪೋಸ್ಟ್ ಯುದ್ಧ ಭೂಮಿಯಲ್ಲಿ ಮಹಿಳಾ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಅವರನ್ನು ನಿಯೋಜನೆ ಮಾಡಲಾಗಿದೆ. ಈ ಸಂಬಂಧ ಭಾರತೀಯ ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್‌ನ ಅಧಿಕೃತ ಟ್ವಿಟ್ಟರ್ ಖಾತೆ ಮಾಹಿತಿ ಹಂಚಿಕೊಂಡಿದೆ. ಕ್ಯಾಪ್ಟನ್ ಶಿವ ಚೌಹಾಣ್ ಅವರು ಸಿಯಾಚಿನ್ ಗ್ಲೇಸಿಯರ್‌ನ ಕುಮಾರ ಪೋಸ್ಟ್‌ನಲ್ಲಿ ನಿಯೋಜನೆಗೊಂಡಿರುವ ಮೊದಲ ಮಹಿಳಾ ಅಧಿಕಾರಿ ಎಂದು ಬರೆಯಲಾಗಿದೆ. ಈ ಮಿಲಿಟರಿ ಪೋಸ್ಟ್ ಇರುವ ಸ್ಥಳ ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿಯಾಗಿದ್ದು, ಫೈರ್ ಅಂಡ್ ಫ್ಯೂರಿ ಕಾರ್ಪ್ಸ್‌ನ ಶಿವ ಚೌಹಾಣ್ ಅವರನ್ನು ನಿಯೋಜನೆ ಮಾಡಲಾಗಿದೆ ಎಂದು ಪ್ರಕಟಿಸಿದೆ.
ಮಹಿಳಾ ಅಧಿಕಾರಿ ಶಿವ ಚೌಹಾಣ್ ಅವರ ಸಾಧನೆಯನ್ನು ಬಣ್ಣಿಸಿರುವ ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್, ‘ಗಾಜಿನ ಚಾವಣಿ ಒಡೆದ ಸಾಧಕಿ’ ಎಂದು ಬಣ್ಣಿಸಿದೆ. ಏಕೆಂದರೆ ಸಿಯಾಚಿನ್ ಗ್ಲೇಸಿಯರ್‌ನ ಕುಮಾರ ಪೋಸ್ಟ್‌ನಲ್ಲಿ ಕೆಲಸ ಮಾಡಲು ಅಪಾರ ಸಾಮರ್ಥ್ಯ, ಶಕ್ತಿ ಹಾಗೂ ಸೂಕ್ಷ್ಮತೆ ಬೇಕು. ತಮ್ಮ ಅತಿ ಕಠಿಣ ತರಬೇತಿ ವೇಳೆ ಕ್ಯಾಪ್ಟನ್ ಶಿವ ಚೌಹಾನ್ ಅವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದೆ.
ಈ ಪ್ರದೇಶವು ವಿಶ್ವದ ಅತಿ ಎತ್ತರದ ಸಮರ ಭೂಮಿಯಾಗಿದೆ. ಇದು ಸಮುದ್ರ ಮಟ್ಟದಿಂದ 15,632 ಅಡಿ ಎತ್ತರಲ್ಲಿ ಇದೆ. ಎಂಟು ವಿಶೇಷ ಸಾಮರ್ಥ್ಯವುಳ್ಳ ಜನರ ತಂಡವು ಸೆಪ್ಟೆಂಬರ್ 2021 ರಲ್ಲಿ ಸಿಯಾಚಿನ್ ಹಿಮನದಿಯಲ್ಲಿ 15,632 ಅಡಿ ಎತ್ತರದಲ್ಲಿರುವ ಕುಮಾರ ಪೋಸ್ಟ್ ಅನ್ನು ತಲುಪಿ ವಿಶ್ವ ದಾಖಲೆ ಸ್ಥಾಪಿಸಿತು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ನಿಮ್ಮ ಕಾಮೆಂಟ್ ಬರೆಯಿರಿ