ಉತ್ತರ ಕನ್ನಡ ಜಿಲ್ಲೆ ಜಿಪಂ ಕ್ಷೇತ್ರಗಳ ಮರುವಿಂಗಡಣೆ : ಹೆಚ್ಚುವರಿ 15 ಕ್ಷೇತ್ರಗಳ ರಚನೆ, ಆಕ್ಷೇಪಣೆಗೆ ಅವಕಾಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 39 ಜಿಲ್ಲಾ ಪಂಚಾಯತ ಕ್ಷೇತ್ರಗಳ ಮರುವಿಂಗಡಣೆಯಲ್ಲಿ 15 ಹೆಚ್ಚುವರಿ ಕ್ಷೇತ್ರಗಳನ್ನು ರಚನೆ ಮಾಡಿ ಒಟ್ಟು ಕ್ಷೇತ್ರಗಳನ್ನು 54ಕ್ಕೆ ಏರಿಸಿ ರಾಜ್ಯ ಸರ್ಕಾರದ ಕರ್ನಾಟಕ ಪಂಚಾಯತ್‌ ಸೀಮಾ ನಿರ್ಣಯ ಆಯೋಗವು ರಾಜ್ಯಪತ್ರ ಹೊರಡಿಸಿದೆ.
ಜೊಯಿಡಾ ತಾಲೂಕಿನಲ್ಲಿ ರಾಮನಗರ, ಜಗಲಬೇಟ ಹಾಗೂ ಜೋಯಿಡಾ ಸೇರಿ ಮೂರು ಜಿಲ್ಲಾ ಪಂಚಾಯತ ಕ್ಷೇತ್ರವನ್ನು ರಚನೆ ಮಾಡಲಾಗಿದೆ. ಇದಕ್ಕೆ ಆಕ್ಷೇಪಣೆಗಳಿದ್ದರೆ 16-01-2023ರ ಸೋಮವಾರ ಸಂಜೆ 5ರ ಒಳಗೆ ಸಲ್ಲಿಸಲು ತಿಳಿಸಲಾಗಿದೆ. (ಹೆಚ್ಚಿನ ಮಾಹಿತಿಗಾಗಿ ರಾಜ್ಯಪತ್ರದ ಪಿಡಿಎಫ್‌ಗೆ  Uttarakannada ZP delimitation ಇಲ್ಲಿ ಕ್ಲಿಕ್‌ ಮಾಡಬಹುದು )  ದಾಂಡೇಲಿ ತಾಲೂಕಿನಲ್ಲಿ ಅಂಬಿಕಾನಗರ ಒಂದೇ ಜಿಲ್ಲಾ ಪಂಚಾಯತ ಕ್ಷೇತ್ರವಾಗಿದೆ. ಹಳಿಯಾಳ ತಾಲೂಕನ್ನು ಮಂಗಳವಾಡ, ತೇರಗಾಂವ, ಗುಂಡೋಳ್ಳಿ, ಮುರ್ಕವಾಡ ಸೇರಿದಂತೆ ಒಟ್ಟು ನಾಲ್ಕು ಜಿಲ್ಲಾ ಪಂಚಾಯತ ಕ್ಷೇತ್ರವನ್ನಾಗಿ ವಿಂಗಡಿಸಲಾಗಿದೆ. ಕಾರವಾರ ತಾಲೂಕಿನಲ್ಲಿ ಮಲ್ಲಾಪುರ, ಮುಡಗೇರಿ, ಚಿತ್ತಾಕುಲಾ, ಕಡವಾಡ, ಹಾಗೂ ಚೆಂಡಿಯಾ ಸೇರಿ 5 ಜಿಲ್ಲಾ ಪಂಚಾಯತ ಕ್ಷೇತ್ರ ರಚನೆ ಮಾಡಲಾಗಿದೆ. ಯಲ್ಲಾಪುರ ತಾಲೂಕಿನಲ್ಲಿ ಇಡಗುಂದಿ, ಕಿರವತ್ತಿ ಹಾಗೂ ಕಂಪ್ಲಿ ಹೀಗೆ ಮೂರು ಜಿಪಂ ಕ್ಷೇತ್ರ ಮಾಡಲಾಗಿದೆ. ಮುಂಡಗೋಡ ತಾಲೂಕಿನಲ್ಲಿ ಮೈನಳ್ಳಿ, ಇಂದೂರ, ಪಾಳಾ, ಮಳಗಿ, ಸೇರಿ 4 ಜಿಪಂ ಕ್ಷೇತ್ರ ರಚನೆ ಮಾಡಲಾಗಿದೆ.
ಅಂಕೋಲಾ ತಾಲೂಕಿನಲ್ಲಿ ಅಗಸೂರು, ಅವರ್ಸಾ, ಭಾವಿಕೇರಿ, ಶೇಟಗೇರಿ, ಬೆಳಸೆ ಕ್ಷೇತ್ರಗಳು ಸೇರಿ 5 ಜಿಪಂ ಕ್ಷೇತ್ರ ಮಾಡಿದರೆ ಶಿರಸಿ ತಾಲೂಕಿನಲ್ಲಿ ಹುಲೇಕಲ್, ದೊಡ್ನಳ್ಳಿ, ಬದನಗೋಡ, ಬನವಾಸಿ, ಜಾನ್ಮನೆ, ಹಾಗೂ ಶಿವಳ್ಳಿ, ಹೆಗಡೆಕಟ್ಟಾ ಸೇರಿ 6 ಜಿಪಂ ಕ್ಷೇತ್ರಗಳನ್ನಾಗಿ ವಿಂಗಡನೆ ಮಾಡಲಾಗಿದೆ.
ಕುಮಟಾ ತಾಲೂಕಿನಲ್ಲಿ ಮುರೂರು, ಮಿರ್ಜಾನ, ಹೆಗಡೆ, ಗೋಕರ್ಣ, ಹೊಲನಗದ್ದೆ ಹಾಗೂ ದೇವಗಿರಿ ಸೇರಿ 5 ಜಿಪಂ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ಅಣಲೇಬೈಲ್, ಕಾನಗೋಡ, ಹಲಗೇರಿ ಹಾಗೂ ದೊಡ್ಮಣೆ ಜಿಪಂ ಕ್ಷೇತ್ರಗಳನ್ನು ರಚಿಸಲಾಗಿದೆ. ಹೊನ್ನಾವರ ತಾಲೂಕಿನಲ್ಲಿ ನಗರಬಸ್ತಿಕೇರಿ, ಚಂದಾವರ, ಹಳದೀಪುರ, ಮುಗ್ವಾ, ಮಾವಿನಕುರ್ವಾ, ಕಾಸರಕೋಡ, ಬಳಕೂರು ಕ್ಷೇತ್ರ ಸೇರಿ ಒಟ್ಟು 7 ಜಿಪಂ ಕ್ಷೇತ್ರವನ್ನಾಗಿ ವಿಂಗಡಣೆ ಮಾಡಲಾಗಿದ್ದು, ಭಟ್ಕಳ ತಾಲೂಕಿನಲ್ಲಿ ಮಾವಳ್ಳಿ-1, ಕಾಯ್ಕಿಣಿ, ಶಿರಾಲಿ, ಹೆಬಳೆ, ಬಿಳಲಖಂಡ, ಹಾಗೂ ಬೆಳಕೆ ಸೇರಿ ಒಟ್ಟು 6 ಜಿಪಂ ಕ್ಷೇತ್ರವನ್ನಾಗಿ ವಿಂಗಡಿಸಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement