ಕ್ಷೇತ್ರ ಮರುವಿಂಗಡಣೆ | ದಕ್ಷಿಣದ ರಾಜ್ಯಗಳ ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಳ: ಅಂಕಿ-ಅಂಶ ಹಂಚಿಕೊಂಡ ಅಮಿತ್ ಶಾ ; ಕರ್ನಾಟಕಕ್ಕೆ ಸಿಗುವ ಸ್ಥಾನಗಳೆಷ್ಟು..?

ನವದೆಹಲಿ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ (Delimitation) ನಂತರ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಆರೋಪಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ. ಗುರುವಾರ (ಏಪ್ರಿಲ್ 16) ಲೋಕಸಭೆಯಲ್ಲಿ ಮಾತನಾಡಿದ ಅವರು, ಮರುವಿಂಗಡಣೆಯ ನಂತರ ದಕ್ಷಿಣದ ರಾಜ್ಯಗಳ ಸಂಸದರ ಸಂಖ್ಯೆ ಕುಸಿಯುವ ಬದಲಿಗೆ 195ಕ್ಕೆ ಏರಿಕೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ … Continued

ಪಿಒಕೆ ಮೇಲೆ ಭಾರತದ ಹಕ್ಕು ಪ್ರತಿಪಾದನೆ ; ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಅನ್ವಯವಾಗಲಿದೆ ಡಿಲಿಮಿಟೇಶನ್ ಮಸೂದೆ ; ಕ್ಷೇತ್ರಗಳು ನಿಗದಿ..!

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಒಂದು ವೇಳೆ ಭಾರತದ ನಿಯಂತ್ರಣಕ್ಕೆ ಮರಳಿದರೆ, ಅಲ್ಲಿನ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯನ್ನು ನಡೆಸಲು ಅಗತ್ಯವಿರುವ ಕಾನೂನು ಚೌಕಟ್ಟನ್ನು ರೂಪಿಸುವ ‘ಡಿಲಿಮಿಟೇಶನ್ ಬಿಲ್ 2026’ (ಕ್ಷೇತ್ರ ಮರುವಿಂಗಡಣೆ ವಿಧೇಯಕ) ಅನ್ನು ಕೇಂದ್ರ ಸರ್ಕಾರ ಈ ವಾರ ಸಂಸತ್ತಿನಲ್ಲಿ ಮಂಡಿಸಲು ಸಜ್ಜಾಗಿದೆ. ಈ ಪ್ರದೇಶದ ಮೇಲಿನ ಭಾರತದ ದೀರ್ಘಕಾಲದ ಸಾಂವಿಧಾನಿಕ … Continued

ಮತ್ತೆ ಡಿಲಿಮಿಟೇಶನ್ ಚರ್ಚೆ : ದಕ್ಷಿಣ ರಾಜ್ಯಗಳು ಡಿಲಿಮಿಟೇಶನ್ ವಿರೋಧಿಸುತ್ತಿರುವುದು ಏಕೆ…?

ನವದೆಹಲಿ : ನವದೆಹಲಿ : ಡಿಲಿಮಿಟೇಶನ್ ನಂತರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಕೆಲವು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಉತ್ತರದ ಕೆಲವು ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯು ದಕ್ಷಿಣ ಭಾರತಕ್ಕಿಂತ ವೇಗವಾಗಿದೆ. ತುಲನಾತ್ಮಕವಾಗಿ ಕಡಿಮೆ ಜನಸಂಖ್ಯೆಯ ಬೆಳವಣಿಗೆಯ ಪರಿಣಾಮವಾಗಿ, ಡಿಲಿಮಿಟೇಶನ್ ನಂತರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ಕೆಲವು ಲೋಕಸಭಾ … Continued

ಉತ್ತರ ಕನ್ನಡ ಜಿಲ್ಲೆ ಜಿಪಂ ಕ್ಷೇತ್ರಗಳ ಮರುವಿಂಗಡಣೆ : ಹೆಚ್ಚುವರಿ 15 ಕ್ಷೇತ್ರಗಳ ರಚನೆ, ಆಕ್ಷೇಪಣೆಗೆ ಅವಕಾಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 39 ಜಿಲ್ಲಾ ಪಂಚಾಯತ ಕ್ಷೇತ್ರಗಳ ಮರುವಿಂಗಡಣೆಯಲ್ಲಿ 15 ಹೆಚ್ಚುವರಿ ಕ್ಷೇತ್ರಗಳನ್ನು ರಚನೆ ಮಾಡಿ ಒಟ್ಟು ಕ್ಷೇತ್ರಗಳನ್ನು 54ಕ್ಕೆ ಏರಿಸಿ ರಾಜ್ಯ ಸರ್ಕಾರದ ಕರ್ನಾಟಕ ಪಂಚಾಯತ್‌ ಸೀಮಾ ನಿರ್ಣಯ ಆಯೋಗವು ರಾಜ್ಯಪತ್ರ ಹೊರಡಿಸಿದೆ. ಜೊಯಿಡಾ ತಾಲೂಕಿನಲ್ಲಿ ರಾಮನಗರ, ಜಗಲಬೇಟ ಹಾಗೂ ಜೋಯಿಡಾ ಸೇರಿ ಮೂರು ಜಿಲ್ಲಾ ಪಂಚಾಯತ ಕ್ಷೇತ್ರವನ್ನು ರಚನೆ ಮಾಡಲಾಗಿದೆ. … Continued