ಜೈನರ ಪವಿತ್ರ ಸ್ಥಳ ಶ್ರೀ ಸಮ್ಮೇದ್ ಶಿಖರ್ಜಿ ಕುರಿತ ಜಾರ್ಖಂಡ್ ಸರ್ಕಾರದ ನಿರ್ಧಾರದ ವಿರುದ್ಧ ಉಪವಾಸ ಮಾಡುತ್ತಿದ್ದ ಮತ್ತೊಬ್ಬ ಜೈನ ಸನ್ಯಾಸಿ ನಿಧನ

ಜೈಪುರ: ಜೈನರ ಪವಿತ್ರ ಕ್ಷೇತ್ರ ಶ್ರೀ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ಸ್ಥಳವನ್ನಾಗಿ ಘೋಷಿಸುವ ಜಾರ್ಖಂಡ್ ಸರ್ಕಾರದ ನಿರ್ಧಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜೈನ ಸನ್ಯಾಸಿಯೊಬ್ಬರು ಜೈಪುರದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಸಮುದಾಯದ ಮುಖಂಡರೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಜೈನ ಸನ್ಯಾಸಿ ಸಮರ್ಥ ಸಾಗರ (74) ಅವರು ಐದು ದಿನಗಳ ಉಪವಾಸದ ನಂತರ ಶುಕ್ರವಾರ ಬೆಳಗಿನ ಜಾವ 2 ಗಂಟೆಗೆ ನಿಧನರಾದರು ಎಂದು ರಾಜಸ್ಥಾನ ಜೈನ ಸಭಾದ ಅಧ್ಯಕ್ಷ ಸುಭಾಷ್ ಚಂದ್ರ ಜೈನ್ ತಿಳಿಸಿದ್ದಾರೆ.
ಇಲ್ಲಿನ ಸಂಗನೇರ್ ಪ್ರದೇಶದ ಸಂಘಿಜಿ ದೇವಸ್ಥಾನದಲ್ಲಿ ಸಮರ್ಥ ಸಾಗರ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಜಾರ್ಖಂಡ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಉಪವಾಸ ಮಾಡುತ್ತಿದ್ದ ಮತ್ತೊಬ್ಬ ಜೈನ ಸನ್ಯಾಸಿ ಸುಗ್ಯೇಯಸಾಗರ ಮಹಾರಾಜ್ (72) ಮಂಗಳವಾರ ದೇವಸ್ಥಾನದಲ್ಲಿ ಮೃತಪಟ್ಟ ಕೆಲವು ದಿನಗಳ ನಂತರ ಈ ಸುದ್ದಿ ಬಂದಿದೆ.
ಶ್ರೀ ಸಮ್ಮೇದ್ ಶಿಖರ್ಜಿ ಜಾರ್ಖಂಡ್‌ನ ಪಾರಸನಾಥ ಬೆಟ್ಟಗಳಲ್ಲಿರುವ ಜೈನ ಯಾತ್ರಾ ಕೇಂದ್ರವಾಗಿದೆ. ಜಾರ್ಖಂಡ ಸರ್ಕಾರ ಇದನ್ನು ಪ್ರವಾಸಿ ಆಕರ್ಷಣೆಯನ್ನಾಗಿ ಮಾಡಲು ನಿರ್ಧರಿಸಿದ ನಂತರ ಜೈನ ಸಮುದಾಯ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.ಕೇಂದ್ರ ಸರ್ಕಾರ ಗುರುವಾರ ಪಾರಸನಾಥ ಬೆಟ್ಟಗಳಲ್ಲಿ ಎಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳನ್ನು ತಡೆಹಿಡಿಯಿತು ಮತ್ತು ಅದರ ಪಾವಿತ್ರ್ಯತೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳುವಂತೆ ಜಾರ್ಖಂಡ ಸರ್ಕಾರಕ್ಕೆ ನಿರ್ದೇಶಿಸಿದೆ.

ಪ್ರಮುಖ ಸುದ್ದಿ :-   ಮಹಾರಾಷ್ಟ್ರ | ಗುರುವಾರ ದೇವೇಂದ್ರ ಫಡ್ನವೀಸ್‌, ಇಬ್ಬರು ಡಿಸಿಎಂಗಳ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement