ತನ್ನ ಬೈಕ್‌ನಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ ಮಹಿಳೆಗೆ ಹೆಲ್ಮೆಟ್‌ನಿಂದ ಹೊಡೆದ ವ್ಯಕ್ತಿ, ತೀವ್ರ ಗಾಯ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ತನ್ನ ಬೈಕ್‌ನಲ್ಲಿ ಕುಳಿತುಕೊಂಡು ತನ್ನೊಂದಿಗೆ ಸವಾರಿ ಮಾಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಗೆ ಹೆಲ್ಮೆಟ್‌ನಿಂದ ಹೊಡೆಯುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರ್ಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು, “ಕಮಲ್ ಎಂಬ ವ್ಯಕ್ತಿ ತನ್ನ ಬೈಕ್‌ನಲ್ಲಿ ತನ್ನೊಂದಿಗೆ ಸವಾರಿ ಮಾಡಲು ನಿರಾಕರಿಸಿದ ಕಾರಣ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಮಹಿಳೆಗೆ ಹೆಲ್ಮೆಟ್‌ನಿಂದ ಥಳಿಸಿದ್ದಾನೆ ಎಂದು ಗುಗ್ರಾಮದ ಎಸಿಪಿ ಮನೋಜ್ ಕೆ ತಿಳಿಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಆಟೋ ರಿಕ್ಷಾದ ಪಕ್ಕದಲ್ಲಿ ಬೈಕ್ ನಿಲ್ಲಿಸಿದ ವ್ಯಕ್ತಿಯೊಬ್ಬರು ಮಹಿಳೆ ಸಮೀಪ ತೋರಿಸುತ್ತದೆ. ಸಂಕ್ಷಿಪ್ತ ಸಂವಾದದ ನಂತರ, ವ್ಯಕ್ತಿ ತನ್ನ ಹೆಲ್ಮೆಟ್‌ನಿಂದ ಮಹಿಳೆಗೆ ಹೊಡೆಯುತ್ತಾನೆ.

ಆಟೋ ರಿಕ್ಷಾ ಚಾಲಕ ಮಧ್ಯಪ್ರವೇಶಿಸಿದಾಗ ಮಹಿಳೆ ತನ್ನ ಕೈಚೀಲದಿMದ ಹೊಡೆದು ಸೇಡು ತೀರಿಸಿಕೊಂಡಿದ್ದಾಳೆ. ಇನ್ನು ಕೆಲವರು ಸ್ಥಳಕ್ಕೆ ಧಾವಿಸಿ ಆರೋಪಿ ಕಮಲ್‌ನನ್ನು ಹಿಡಿದು ಮಹಿಳೆಯಿಂದ ದೂರ ತಳ್ಳಿದ್ದಾರೆ.ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸಿಪಿ ಮನೋಜ್‌ ಕೆ.ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

ಹರಿಯಾಣದ ಯಮುನಾನಗರದಲ್ಲಿ ಮಹಿಳೆಯೊಬ್ಬರು ಅಪಹರಣ ಯತ್ನದಿಂದ ಸ್ವಲ್ಪದರಲ್ಲೇ ಪಾರಾದ ಕೆಲವು ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಪೂರ್ಣ ಘಟನೆ ಸಮೀಪದಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಮಹಿಳೆ ಕಿರುಚಿಕೊಂಡ ನಂತರ ನಾಲ್ವರು ತಮ್ಮ ಅಪಹರಣ ಪ್ರಯತ್ನವನ್ನು ಕೈಬಿಟ್ಟರು ಮತ್ತು ಓಡಿಹೋದರು ಎಂದು ವರದಿಯಾಗಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement