ದೆಹಲಿಯ ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಚೀನಾ ಮಹಿಳೆ

ನವದೆಹಲಿ: ತನ್ನ ಕೆಲಸ ಕಳೆದುಕೊಂಡು ಇತ್ತೀಚೆಗೆ ಸಂಗಾತಿಯಿಂದ ಬೇರ್ಪಟ್ಟಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಚೀನಾದ ಮಹಿಳೆಯೊಬ್ಬರು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಶ್ ರೂಂನಲ್ಲಿ ರೇಜರ್‌ನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶನಿವಾರ ಮುಂಜಾನೆ ಟರ್ಮಿನಲ್ 3 ರಲ್ಲಿ ಈ ಘಟನೆ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಮಹಿಳೆ ಬಹ್ರೇನ್‌ನಿಂದ ಶನಿವಾರ ತಡರಾತ್ರಿ T3 ಗೆ ಬಂದಿಳಿದಿದ್ದಳು.
ಅವಳು ಕೌಲಾಲಂಪುರಕ್ಕೆ ಹೋಗುವ ವಿಮಾನವನ್ನು ಏರಬೇಕಾಗಿತ್ತು ಆದರೆ ಮುಂಜಾನೆ 4 ಗಂಟೆಯ ಸುಮಾರಿಗೆ ವಿಮಾನದ ನಿಲುಗಡೆ ಸಮಯದಲ್ಲಿ, ಅವಳು ವಾಶ್‌ರೂಮ್‌ಗೆ ಹೋಗಿ ಗಂಟಲು ಮತ್ತು ಮಣಿಕಟ್ಟನ್ನು ರೇಜರ್‌ನಿಂದ ಕತ್ತರಿಸಿಕೊಂಡಳು” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ತಾನು ಇತ್ತೀಚೆಗೆ ತನ್ನ ಕೆಲಸವನ್ನು ಕಳೆದುಕೊಂಡಿದ್ದೇನೆ ಮತ್ತು ತನ್ನ ಸಂಗಾತಿಯೊಂದಿಗೆ ಸಂಬಂಧ ಮುರಿದುಬಿದ್ದಿದೆ ಎಂದು ಮಹಿಳೆ ಹೇಳಿದ್ದಾಳೆ” ಎಂದು ತನಿಖೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement