ಬೆಕ್ಕುಗಳಿಗೂ ಸಂತಾನಹರಣ ಚಿಕಿತ್ಸೆ ಮಾಡಿ : ಬಿಬಿಎಂಪಿಗೆ ಹೀಗೊಂದು ಮನವಿ..!

posted in: ರಾಜ್ಯ | 0

ಬೆಂಗಳೂರು : ಇಷ್ಟು ದಿನ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಬಿಬಿಎಂಪಿಗೆ ದೂರು ದಾಖಲಾಗುತ್ತಿತ್ತು. ಆದರೆ ಈಗ ಬೆಕ್ಕುಗಳ ಕಾಟಗಳ ವಿರುದ್ಧ ಸ್ಥಳೀಯ ನಿವಾಸಿಗಳು ದೂರು ನೀಡಿದ್ದಾರೆ…!
ಬೆಕ್ಕಿನ ಹಾವಳಿಯಿಂದ ಕಂಗಾಲಾಗಿರುವ ಸ್ಥಳೀಯರು ನಾಯಿಗಳಿಗೆ ಮಾಡಿದಂತೆ ಬೆಕ್ಕುಗಳಿಗೂ ಸಂತನಾಹರಣ ಚಿಕಿತ್ಸೆ ಮಾಡುವಂತೆ ಮನವಿ ಬಿಬಿಎಂಪಿಗೆ ಮಾಡಿದ್ದಾರೆ.
ಬೆಂಗಳೂರಿನ ವಾರ್ಡ್ ನಂಬರ್ 5ರ ನ್ಯಾಯಾಂಗ ಬಡಾವಣೆಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ಬೆಕ್ಕುಗಳ ಹಾವಳಿ ಜಾಸ್ತಿಯಾಗಿದಯಂತೆ. ಬೆಕ್ಕುಗಳು ಪ್ರತಿ ಆರು ತಿಂಗಳಿಗೊಮ್ಮೆ ಮರಿಗಳನ್ನು ಹಾಕಲಿದ್ದು, ಚಿಕ್ಕ ಮರಿಗಳಿಂದ ದೊಡ್ಡ ದೊಡ್ಡ ಬೆಕ್ಕುಗಳವರೆಗೂ ಪ್ರತಿನಿತ್ಯ ಈ ಬಡಾವಣೆ ಜನರಿಗೆ ಕಿರಿಕಿರಿ ಉಂಟುಮಾಡುತ್ತಿವೆ ಎಂದು ಬಿಬಿಎಂಪಿಗೆ ದೂರು ನೀಡಿದ್ದಾರೆ.
ಮನೆಗಳಿಗೆ ಬೆಕ್ಕುಗಳು ಬಂದು ಸೇರಿಕೊಳ್ಳುತ್ತಿದ್ದು, 6 ತಿಂಗಳಿಗೊಮ್ಮೆ ಮರಿಗಳನ್ನ ಹಾಕುತ್ತಿವೆ. ಅವುಗಳ ಕಾಟ ಹೇಳತೀರದಾಗಿದೆ ಎಂದು ಈ ಭಾಗದ ಜನರು ದೂರಿದ್ದಾರೆ. ದಯಾಮಾಡಿ ಈ ಭಾಗದಲ್ಲಿರುವ ಬೆಕ್ಕುಗಳಿಗೆ ವಯಸ್ಸಿನ ಆಧಾರದ ಮೇಲೆ ಸಂತಾನಹರಣ ಚಿಕಿತ್ಸೆ ಮಾಡಿ ಎಂದು ಮನವಿ ಮಾಡಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಹಿರಿಯ ನಟ ಶರತ್ ಬಾಬು ಆಸ್ಪತ್ರೆಗೆ ದಾಖಲು

3 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement