ಊಟದ ವಿಚಾರಕ್ಕೆ ಜಗಳ: ತಾಯಿ, ಮಗ ಆತ್ಮಹತ್ಯೆ

ರಾಮನಗರ: ಕೌಟುಂಬಿಕ ಕಲಹದಿಂದ ನೊಂದು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದ ವರದಿಯಾಗಿದೆ.
ಮೃತರನ್ನು ವಿಜಯಲಕ್ಷ್ಮೀ (50) ಹಾಗೂ ಹರ್ಷ (25) ಎಂದು ಗುರುತಿಸಲಾಗಿದೆ. ತಾಯಿ ವಿಜಯಲಕ್ಷ್ಮೀ ಜೊತೆ ಊಟದ ವಿಚಾರಕ್ಕೆ ಮಗ ಹರ್ಷ ರಾತ್ರಿ ಜಗಳವಾಡಿದ್ದ ಎನ್ನಲಾಗಿದೆ. ಮಗನ ಮಾತಿನಿಂದ ಮನನೊಂದ ವಿಜಯಲಕ್ಷ್ಮಿ ಮನೆಯ ಬಳಿ ಸಂಪಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ತಾಯಿ ಮೃತಪಟ್ಟ ವಿಚಾರ ತಿಳಿದು ತೀವ್ರವಾಗಿ ಮನನೊಂದ ಮಗ ಹರ್ಷ ತಾಯಿಯ ಸಾವಿಗೆ ತಾನೇ ಕಾರಣನಾದೆ ಎಂದು ಭಾವಿಸಿ ಮನನೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement