ಬೆಳಗಾವಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಕರೆ : ನಾಗ್ಪುರ ಪೊಲೀಸರು

ನಾಗ್ಪುರ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಬಂದ ಬೆದರಿಕೆ ಕರೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ನಾಗ್ಪುರ ಪೊಲೀಸರು ಶನಿವಾರ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದವನನ್ನು ಪತ್ತೆ ಮಾಡಿದ್ದಾರೆ. ಕರೆ ಮಾಡಿದನನ್ನು ಜೈಲಿನಲ್ಲಿರುವ ದರೋಡೆಕೋರ ಜಯೇಶ್ ಕಾಂತ ಎಂದು ಗುರುತಿಸಲಾಗಿದ್ದು, ಈತ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದಾನೆ. ಜೈಲಿನೊಳಗಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೈಲಿನಿಂದ ಕೊಲೆ ಬೆದರಿಕೆ ಕರೆ ಮಾಡಿದವನು ಕುಖ್ಯಾತ ದರೋಡೆಕೋರ ಮತ್ತು ಕೊಲೆ ಆರೋಪಿ ಜಯೇಶ್ ಕಾಂತ, ಆತ ಕರ್ನಾಟಕದ ಬೆಳಗಾವಿ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಜೈಲಿನೊಳಗೆ ಅಕ್ರಮವಾಗಿ ಫೋನ್ ಬಳಸಿ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ನಾಗ್ಪುರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ, ಹೆಚ್ಚಿನ ತನಿಖೆಗಾಗಿ ನಾಗ್ಪುರ ಪೊಲೀಸರ ತಂಡ ಬೆಳಗಾವಿಗೆ ತೆರಳಿದೆ.
ಆರೋಪಿಯಿಂದ ಡೈರಿ ವಶಪಡಿಸಿಕೊಂಡ ಪೊಲೀಸರು
ಬೆಳಗಾವಿ ಜೈಲು ಆಡಳಿತವು ಆರೋಪಿಯಿಂದ ಡೈರಿಯನ್ನು ವಶಪಡಿಸಿಕೊಂಡಿದೆ. ಹಿಂಡಲಗಾ ಜೈಲಿನಲ್ಲಿರುವ ಆರೋಪಿಯಿಂದ ಡೈರಿಯನ್ನು ವಶಪಡಿಸಿಕೊಂಡಿದೆ. ಆರೋಪಿಯನ್ನು ಪ್ರೊಡಕ್ಷನ್ ರಿಮಾಂಡ್ ನೀಡುವಂತೆ ನಾಗ್ಪುರ ಪೊಲೀಸರು ಕೋರಿದ್ದಾರೆ. ಪೊಲೀಸರ ಪ್ರಕಾರ, ಬಿಎಸ್‌ಎನ್‌ಎಲ್ ನೆಟ್‌ವರ್ಕ್-ನೋಂದಾಯಿತ ಸಂಖ್ಯೆಯಿಂದ ಗಡ್ಕರಿ ಅವರ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಗೆ ಬೆಳಿಗ್ಗೆ 11:25, 11:32 ಮತ್ತು ಮಧ್ಯಾಹ್ನ 12:32 ಕ್ಕೆ ಕಚೇರಿಗೆ ಮೂರು ಕರೆಗಳು ಬಂದವು. ಕರೆ ದಾಖಲೆಗಳನ್ನು ಪಡೆಯಲಾಗುತ್ತಿದೆ.
“ಮೂರು ಫೋನ್ ಕರೆಗಳು ಬಂದವು. ವಿವರಗಳನ್ನು ಕಂಡುಹಿಡಿಯಲಾಗುತ್ತಿದೆ ಮತ್ತು ನಮ್ಮ ಅಪರಾಧ ವಿಭಾಗವು CDR (ಕಾಲ್ ಡೀಟೇಲ್ ರೆಕಾರ್ಡ್) ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿಶ್ಲೇಷಣೆ ನಡೆಯುತ್ತಿದ್ದು, ಈಗಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಚಿವ ಗಡ್ಕರಿ ಅವರ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ನಾಗ್ಪುರದ ಉಪ ಪೊಲೀಸ್ ಆಯುಕ್ತ ರಾಹುಲ್ ಹೇಳಿದ್ದಾರೆ. ಕಚೇರಿ ಸಿಬ್ಬಂದಿಯಿಂದ ದೂರು ಪಡೆದ ಬೆನ್ನಲ್ಲೇ, ಸಚಿವರ ನಾಗ್ಪುರ ಕಚೇರಿ ಸುತ್ತ ಭದ್ರತೆ ಹೆಚ್ಚಿಸಲಾಗಿದೆ.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement