ಮುಳುಗುತ್ತಿರುವ ಜೋಶಿಮಠದಲ್ಲಿ ವಾಲಿದ ಇನ್ನೆರಡು ಹೊಟೇಲ್‌ಗಳು; ಔಲಿ ರೋಪ್‌ವೇ ಬಳಿ ಕಂಡುಬಂದ ದೊಡ್ಡ ಬಿರುಕುಗಳು

ಜೋಶಿಮಠ (ಉತ್ತರಾಖಂಡ): ಜೋಶಿಮಠದಲ್ಲಿ ಭಾನುವಾರ ಮತ್ತೆರಡು ಹೋಟೆಲ್‌ಗಳು ಕುಸಿದ ಪರಿಣಾಮ ವಾಲಿವೆ. ಈ ಎರಡು ಹೊಟೇಲ್‌ಗಳು ಅಪಾಯಕಾರಿಯಾಗಿ ಪರಸ್ಪರ ವಾಲಲು ಪ್ರಾರಂಭಿಸಿತು. ಔಲಿ ರೋಪ್‌ವೇ ಬಳಿ ಮತ್ತು ಉತ್ತರಾಖಂಡದ ಈ ಹಿಮಾಲಯದ ಧಾರ್ಮಿಕ ಪ್ರಾಮುಖ್ಯತೆಯ ಇತರ ಪ್ರದೇಶಗಳಲ್ಲಿ ಬಿರುಕುಗಳು ವಿಸ್ತರಿಸಿದವು.
ಮೂಲಗಳ ಪ್ರಕಾರ, ಪಟ್ಟಣದ ಮಾರ್ವಾಡಿ ಬಡಾವಣೆಯ ಜೆಪಿ ಕಾಲೋನಿಯಲ್ಲಿ ಭೂಗತ ಕಾಲುವೆ ಒಡೆದು ನೀರಿನ ಹರಿವು ಹೆಚ್ಚಾಗಿದೆ. ಜನವರಿ 2ರಿಂದ ಈ ಭಾಗದಲ್ಲಿ ನೀರು ಸೋರಿಕೆ ಆರಂಭವಾಗಿದೆ.
ಇದೇ ವೇಳೆ ಜೋಶಿಮಠದಲ್ಲಿ ಪಕ್ಕದ ಎರಡು ಹೋಟೆಲ್‌ಗಳಾದ ಮಲಾರಿ ಇನ್ ಮತ್ತು ಮೌಂಟ್ ವ್ಯೂದ ಧ್ವಂಸ ಕಾರ್ಯ ಮುಂದುವರಿದಿದೆ. ಅವುಗಳನ್ನು ಅಸುರಕ್ಷಿತ ಎಂದು ಘೋಷಿಸಲಾಗಿತ್ತು.ಏತನ್ಮಧ್ಯೆ, ಇತರ ಎರಡು ಹೋಟೆಲ್‌ಗಳಾದ ಸ್ನೋ ಕ್ರೆಸ್ಟ್ ಮತ್ತು ಕಾಮೆಟ್ ಸಹ ಪರಸ್ಪರ ವಾಲಲು ಪ್ರಾರಂಭಿಸಿವೆ. ಅಧಿಕಾರಿಗಳು ಅವುಗಳನ್ನು ಖಾಲಿ ಮಾಡಿದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಈ ಎರಡು ಹೋಟೆಲ್‌ಗಳ ನಡುವಿನ ಅಂತರ ಈ ಹಿಂದೆ ಸುಮಾರು ನಾಲ್ಕು ಅಡಿ ಇತ್ತು. ವಾಲಿದ ನಂತರ ಈಗ ಅದು ಕೆಲವು ಇಂಚುಗಳಿಗೆ ಇಳಿದಿದೆ. ಎರಡೂ ಹೋಟೆಲ್‌ಗಳ ಮೇಲ್ಛಾವಣಿ ಬಹುತೇಕ ಪರಸ್ಪರ ಸ್ಪರ್ಶಿಸುತ್ತಿದೆ.
ಜೋಶಿಮಠ-ಔಲಿ ರೋಪ್‌ವೇ ಬಳಿ ವಿಶಾಲವಾದ ಬಿರುಕುಗಳು ಕಾಣಿಸಿಕೊಂಡಿವೆ. ಜೋಶಿಮಠದಲ್ಲಿ ಭೂ ಕುಸಿತ ಪ್ರಾರಂಭವಾದಾಗ ಈ ರೋಪ್‌ವೇ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು.4.5 ಕಿಮೀ ಉದ್ದದ ರೋಪ್‌ವೇ, ಏಷ್ಯಾದ ಅತಿ ದೊಡ್ಡ ರೋಪ್‌ವೇ ಎಂದು ಪರಿಗಣಿಸಲಾಗಿದೆ, ಇದು ಜೋಶಿಮಠವನ್ನು ಅಂತಾರಾಷ್ಟ್ರೀಯ ಸ್ಕೀಯಿಂಗ್ ತಾಣವಾದ ಔಲಿಯ ಜೊತೆ ಸಂಪರ್ಕಿಸುತ್ತದೆ. ರೋಪ್ ವೇ ಆವರಣದ ಗೋಡೆಗಳ ಬಳಿ ಸುಮಾರು ನಾಲ್ಕು ಇಂಚು ಅಗಲ ಹಾಗೂ 20 ಅಡಿ ಉದ್ದದ ಬಿರುಕು ಕಾಣಿಸಿಕೊಂಡಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ವಿಶ್ವದ ಟಾಪ್‌- 20 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಗೌತಮ್ ಅದಾನಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement