ಅಮೃತ ಮಹೋತ್ಸವ ಸಂಭ್ರಮದಲ್ಲಿ ಭೂಮರೆಡ್ಡಿ ಕಾಲೇಜ್‌ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ

posted in: ರಾಜ್ಯ | 0

( ೧೭-೦೧-೨೦೨೩ ರಂದು ಬೆಳಿಗ್ಗೆ ೧೦ ಗಂಟೆಗೆ ಹುಬ್ಬಳ್ಳಿ ನಗರದ ಕೊಯಿನ್ ರಸ್ತೆಯ ರುವ ಕೆ.ಎಲ್.ಇ. ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆ.ಯಲ್ಲಿ ಬಿ.ವಿ..ಭೂಮರಡ್ಡಿ ಕಾಲೇಜ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಮತ್ತು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬಿ. ಕೋರೆ, ಅವರ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು,ಈ ನಿಮತ್ತ ಲೇಖನ)
ಈಗ ಕೆಎಲ್‌ಇ ಸಂಸ್ಥೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದು ಕೆ.ಜಿ.ಯಿಂದ ಪಿ.ಜಿ ವರೆಗೆ ಶೈಕ್ಷಣಿಕ ರಂಗದ ಎಲ್ಲ ಕ್ಷೇತ್ರಗಳಲ್ಲಿ ಸಂಸ್ಥೆಗಳನ್ನು ಸ್ಥಾಪಿಸಿ, ಎಲ್ಲ ಬಗ್ಗೆಯ ಶಿಕ್ಷಣ ನೀಡುತ್ತಿದೆ. ಸದ್ಯ ಕೆ.ಎಲ್.ಇ. ಸಂಸ್ಥೆಯ ೨೭೨ ವಿವಿಧ ಸಂಸ್ಥೆಯಲ್ಲಿ ೧. ೩೫ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ೧೭೦೦೦ಕ್ಕೂ ಹೆಚ್ಚಿನ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ತಂತ್ರಜ್ಞಾನ, ಸಾಮಾಜಿಕ ಕ್ಷೇತ್ರಗಳಲ್ಲಿ ಕ್ಷೇತ್ರದಲ್ಲಿ ಕೆಎಲ್‌ಇ ಸಂಸ್ಥೆಯು ಗುಣಾತ್ಮಕ ಸೇವೆ ನೀಡುತ್ತಿದೆ.
ಹುಬ್ಬಳ್ಳಿಯಲ್ಲಿ ೧೯೪೭ರಲ್ಲಿ ಪ್ರಾರಂಭವಾದ ಬಿ.ವಿ. ಭೂಮರೆಡ್ಡಿ ಇಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಕಾಲೇಜಿಗೆ ಚಾರಿತ್ರಿಕ ಮಹತ್ವವಿದೆ. ಉತ್ತರ ಕರ್ನಾಟಕ ಮೊದಲನೆಯ ಇಂಜಿನಿಯರಿಂಗ್ ಕಾಲೇಜ್‌ ಮತ್ತು ಕರ್ನಾಟಕದ ಪ್ರಥಮ ಖಾಸಗಿ ಇಂಜಿನಿಯರಿಂಗ್ ಕಾಲೇಜ ಇದಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಯಾಗಬೇಕಾದರೆ ತಾಂತ್ರಿಕ ಶಿಕ್ಷಣ ಅವಶ್ಯ ಎಂದು ತಿಳಿದ ಶಿಕ್ಷಣ ಪ್ರೇಮಿ ಉದ್ಯಮಿ ಬಿ.ವಿ. ಭೂಮರೆಡ್ಡಿ ಅವರು ಅಪಾರ ದೇಣಿಗೆ ನೀಡಿ ಕಾಲೇಜ ಪ್ರಾರಂಭಿಸಲು ಪ್ರೇರಕರಾದರು.
ಹುಬ್ಬಳ್ಳಿಯ ವಿದ್ಯಾನಗರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ೫೬ ಎಕರೆ ಜಾಗದಲ್ಲಿ ಇಂಜಿನಿಯರಿಂಗ್ ಕಾಲೇಜ ತಲೆ ಎತ್ತಿ ನಿಂತಿದೆ. ಆಕರ್ಷಕ ಕಟ್ಟಡಗಳು, ಬ್ಯಾಂಕು. ಅಂಚೆ ಕಚೇರಿ, ಕ್ಯಾಂಟೀನ್, ಉದ್ಯಾನವನ, ಮುದ್ರಣಾಲಯ, ಸುಸಜ್ಜಿತ ಆಧುನೀಕರಣಗೊಂಡ ಗ್ರಂಥಾಲಯ, ವರ್ಗ ಕೋಣೆಗಳು, ಆಡಳಿತ ವಿಭಾಗಗಳು ಒಂದಕ್ಕಿಂತ ಒಂದು ವ್ಯವಸ್ಥಿತವಾಗಿವೆ. ವಿದ್ಯಾನಗರ ಪ್ರದೇಶದಲ್ಲಿ ಪ್ರಶಾಂತ ವಾತಾವರಣದಲ್ಲಿ ಜಾಗವನ್ನು ಕೆ.ಎಲ್.ಇ.ಸಂಸ್ಥೆ ಖರೀದಿಸಲು ಶ್ರಮಿಸಿದ ಸಂಸ್ಥೆಯ ಅಜೀವ ಸದಸ್ಯರಾಗಿದ್ದ ಲಕ್ಷ್ಮಣಣರಾವ್‌ ಟೊಣ್ಣೆನ್ನವರ ಅವರ ಸೇವೆಯನ್ನು ಸ್ಮರಿಸಲೇಬೇಕು
ಕಾಲೇಜಿನಲ್ಲಿ ೧೨ಕ್ಕೂ ಹೆಚ್ಚಿನ ಸ್ನಾತಕ ಮತ್ತು ೮ಕ್ಕೂ ಹೆಚ್ಚಿನ ಸ್ನಾತಕೋತ್ತರ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಬಿ.ಸಿ.ಎ., ಎಂ.ಸಿ.ಎ. ಮತ್ತು ಬಿ.ಬಿ.ಎ., ಎಂ.ಬಿ.ಎ. ಕೋರ್ಸುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ೫೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ೩೦೦ಕ್ಕೂ ಹೆಚ್ಚಿನ ಬೋಧಕ ಸಿಬ್ಬಂದಿ ಮತ್ತು ೧೬೫ ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿಬ್ಬಂದಿಗೆ ಆಧುನೀಕ ಜ್ಷಾನ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚು ಗಮನಕೊಟ್ಟು ಗುಣಾತ್ಮಕ ಶಿಕ್ಷಣ ತರಬೇತಿ ನೀಡುತ್ತಿರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮೌಲಿಕ ಮತ್ತು ಗುಣಾತ್ಮಕ ಬದಲಾವಣೆ ತರಲು ಸಾಧ್ಯವಾಗಿದೆ. ಇವುಗಳ ಜೊತೆಗೆ ಕ್ಯಾಂಪಸ್‌ ಸಂದರ್ಶನಕ್ಕೆ ದೇಶದ ಪ್ರತಿಷ್ಠಿತ ಉದ್ದಿಮೆದಾರರು, ಬ್ಯಾಂಕಿನವರು, ಕಂಪನಿಗಳು ಮುಂದೆಬರುತ್ತಿವೆ. ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಸಾಧ್ಯವಾಗಿದೆ. ಕಾಲೇಜಿನ ಗುಣಾತ್ಮಕ ನಿರ್ವಹಣೆ ವ್ಯವಸ್ಥೆಗೆ ೨೦೦೨ರಲ್ಲಿ ಅಳವಡಿಸಲಾಗಿದೆ. ಐಎಸ್ಒ-೯೦೦೧ ಪ್ರಶಸ್ತಿ ೨೦೦೦ದಲ್ಲಿ ೨೦೦೪ರಲ್ಲಿ ಬಿ.ವಿ.ಕ್ಯೂ ಪ್ರಶಸ್ತಿ ಬಂದಿವೆ. ಕಾಲೇಜ ಸರ್ವವಿಧದಲ್ಲಿಯೂ ಶ್ರೇಷ್ಠತೆಯ ಗುಣಾತ್ಮಕ ಮೌಲ್ಯವರ್ಧಿತ ಪ್ರಶಸ್ತಿಗಳಿಗೆ ಭಾಜನವಾಗುತ್ತಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ರಾಷ್ಟ್ರೀಯ ಇಂಜಿನಿಯರಿಂಗ್‌ ಪ್ರತಿಷ್ಠಾನದ ನಿಯಮಾವಳಿಗನುಸಾರವಾಗಿ ಗುಣಾತ್ಮಕ ಶಿಕ್ಷಣ ನೀಡಲು ಕಾಲೇಜು ತೊಡಗಿಸಿಕೊಂಡಿದೆ. ಜಾಣ್ಮೆಯ ಕೌಶಲ್ಯಗಳು ಅಳವಡಿಸಿಕೊಳ್ಳುವುದು, ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು, ಸಾಮಾಜಿಕ ಬದ್ಧತೆ, ಸಾಮೂಹಿಕ ಪ್ರಯತ್ನ, ಸಹಕಾರ ಮೊದಲಾದ ನಿಯಮಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವಲ್ಲಿ ಕಾಲೇಜು ಮುಂಚೂಣಿಯಲ್ಲಿದೆ. ಉತ್ತಮ ಕ್ರೀಡಾ ಸೌಲಭ್ಯ ಒದಗಿಸಲಾಗಿದೆ.
ಡಾ. ಆರ್. ಎಚ್. ಕುಲಕರ್ಣಿ ಸ್ಮಾರಕ ದೇಶಪಾಂಡೆ ಫೌಂಡೇಶನ್‌, ಖ್ಯಾತ ಉದ್ದಿಮೆದಾರರಾದ ರತನ್ ಟಾಟಾ ಅವರಿಂದ ಉದ್ಘಾಟನೆಗೊಂಡ ಮೆಕೆನಿಕಲ್ ಮತ್ತು ಆಡಳಿತ ನಿರ್ವಹಣೆಯ ಭವ್ಯ, ವಿಶಾಲ ಮತ್ತು ಕಲಾತ್ಮಕವಾದ ಕಟ್ಟಡಗಳು ಕ್ಯಾಂಪಸ್ಸಿನ ಮೆರಗನ್ನು ಹೆಚ್ಚಿಸಿವೆ. ಅತ್ಯಾಧುನಿಕ ಗ್ರಂಥಾಲಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾ ಸೌಲಭ್ಯಗಳನ್ನು ಹೊಂದಿದೆ.
ಕುಲಕರ್ಣಿ, ಎ.ಎಸ್. ಮೆನನ್ , ಡಾ.ಬಿ.ಸಿ. ಖಾನಾಪುರೆ, ಡಾ. ವಿ.ಎಸ್. ಧೋತ್ರದ, ಡಾ.ಎಸ್.ಎಸ್. ಮೂರ್ತಿ, ಡಾ. ಅಶೋಕ ಶೆಟ್ಟರ, ಡಾ.ಪಿ. ಜಿ. ತೆವರಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇಂಜಿನಿಯರಿಂಗ್ ಶಿಕ್ಷಣ ತಜ್ಞರು ಮತ್ತು ಡೀನ್‌ ಆದ ಡಾ. ಬಿ.ಎಲ್. ದೇಸಾಯಿ ಮತ್ತು ಇತರ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಮಹಾವಿದ್ಯಾಲಯದ ಬೆಳವಗಣಿಗೆ ಕೈಜೋಡಿಸಿದ್ದಾರೆ. ಸದ್ಯ ಡಾ. ಬಸವರಾಜ ಎಸ್. ಅನಾಮಿ ಅವರು ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಹಲವಾರು ಸಂಶೋಧನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಹಿರಿಯ ನಟ ಶರತ್ ಬಾಬು ಆಸ್ಪತ್ರೆಗೆ ದಾಖಲು

ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳಾದ ಡಾ. ಸುಧಾಮೂರ್ತಿ, ಡಾ. ಎ. ಸಹಸ್ರಬುದ್ಧೆ, ವಿವೇಕ ಕುಲಕರ್ಣಿ, ಎಸ್. ಎಂ. ಪಂಚಗಟ್ಟಿ, ಉಮೇಶ ವೈದ್ಯಮಠ, ಪ್ರದೀಪ ವಜ್ರರಾಮ, ಡಾ. ಎಸ್.ಎಸ್. ದೇಸಾಯಿ, ಪ್ರೊ. ನೋಜರ್ ಸಿಂಗ್ ಪೂರಾವ್, ಎಂ.ಕೆ. ರಾಜಮನೆ, ಅಜಿತ ಪ್ರಭು ಮೊದಲಾದವರು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಾ ಕಾಲೇಜಿನ ಹಿರಿಮೆ ಹೆಚ್ಚಿಸಿದ್ದಾರೆ. ಸದ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದಾರೆ.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬಿ. ಕೋರೆ ಹಾಗೂ ಅವರ ತಂಡದ ದೂರದರ್ಶಿತ್ವ ಮತ್ತು ಮಾರ್ಗದರ್ಶನಲ್ಲಿ ಸಂಸ್ಥೆಯು ತಾಂತ್ರಿಕ ಮತ್ತು ಅಭಿಯಾಂತ್ರಿಕ ಶಿಕ್ಷಣವನ್ನು ನೀಡುತ್ತಾ ಮುನ್ನಡೆಯುತ್ತಿದೆ. ಡಾ. ಅಶೋಕ ಶೆಟ್ಟರ ಅವರು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಬಂದ ನಂತರ ಭೂಮರೆಡ್ಡಿ ಇಂಜಿನಿಯರಿಂಗ್‌ ಕಾಲೇಜು ಪ್ರಗತಿ ಪಥದತ್ತ ಸಾಗುತ್ತಿದೆ.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬಿ. ಕೋರೆ
ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿಯಲ್ಲಿ ಅಗಷ್ಟ ೧, ೧೯೪೭ ರಂದು ಜನಿಸಿದ ಡಾ. ಪ್ರಭಾಕರ ಬಿ. ಕೋರೆ ಅವರಿಗೆ ಸಮಾಜ ಸೇವೆ ಹಿರಿಯರಿಂದ ಬಂದ ಬಳುವಳಿ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಂದೆ ಬಸವಪ್ರಭು ಕೋರೆ, ತಾಯಿ ಶಾರದಾದೇವಿ ಇಬ್ಬರೂ ಇದನ್ನೇ ಜೀವನವಾಗಿಸಿಕೊಂಡವರು. ಕೋರೆಯವರು ವಿದ್ಯಾರ್ಥಿ ದೆಸೆಯಿಂದಲೂ ಕ್ರಿಯಾಶೀಲ ಸಂಘಟಕರು. ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ , ಸಂಸ್ಥಾಪಕರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ರಚನಾತ್ಮಕ ಕಾರ್ಯ ಮಾಡಿದ್ದಾರೆ.
ಶಿಕ್ಷಣದ ಜತೆಜತೆಗೆ ಸಾಹಿತ್ಯ-ಸಂಸ್ಕೃತಿಯಲ್ಲೂ ಸಹಕಾರ ಕ್ಷೇತ್ರದಲ್ಲೂ ವಿಶೇಷ ಆಸಕ್ತಿ; ಈ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದವರಿಗೆ ಗೌರವ ಸಮರ್ಪಿಸುವುದು ಇವರ ಸಂಪ್ರದಾಯ. ಜೈಂಟ್ಸ್ ಇಂಟರ್‌ನ್ಯಾಷನಲ್ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿ ಅವರನ್ನು ಅರಸಿಕೊಂಡು ಬಂದಿವೆ. ಹಲವಾರು ಪುರಸ್ಕಾರಗಳು ಅವರಿಗೆ ಸಂದಿವೆ. ಭಾರತ ಸರಕಾರ ಮಾನ್ಯತೆ ಪಡೆದ ಭಾರತೀಯ ಸಕ್ಕರೆ ತಂತ್ರಜ್ಞರ ಒಕ್ಕೂಟದ ಜೀವನಮಾನ ಸಾಧನೆ, “ದಿ ಡೋಯನ್ಸ್-ಗಾರ್ಡಯನ್ಸ್ ಆಫ್ ನಾಲೆಡ್ಜ್‌, ಅಮೆರಿಕದ ನ್ಯೂಯಾರ್ಕ್‌ನ ರೋಟರಿ ಕ್ಲಬ್‌ನ ಗಿಫ್ಟ್‌ ಲೈಫ್‌ ಪೌಂಡೇಶನ್‌ನ ‘ಎಂಜಿಲ್, ಸಿರಿಕನ್ನಡ ಗೌರವ, ಶ್ರೀ ಮೃತ್ಯುಂಜಯ ಮಹಾಂತ, ವಿಶ್ವ ಚೇತನ, ಶ್ರೇಷ್ಠ ಶಿಕ್ಷಣ ತಜ್ಞ ಮುಂತಾದ ಪ್ರಶಸ್ತಿಗಳು ಸಂದಿವೆ. ರಾಜ್ಯಸಭಾ ಸದಸ್ಯರಾಗಿದ್ದ ಅವರು ರಕ್ಷಣಾ, ಗೃಹ ಮಂಡಳಿ, ಟೆಲಿಕಾಂ, ಆರೋಗ್ಯ, ರೈಲ್ವೆ ಇಲಾಖೆ, ಸ್ಥಾಯಿ ಯೋಜನಾ ಮತ್ತು ವಾಸ್ತುಶಿಲ್ಪ ಶಾಲೆಯ ಸಾಮಾನ್ಯ ಪರಿಷತ್ತು, ಹಿಂದಿ ಪ್ರಚಾರ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಮುಂತಾದ ಸಮಿತಿಗಳ ಸದಸ್ಯರಾಗಿ ವಿಶಿಷ್ಟ ಮತ್ತು ಅನುಪಮ ಸೇವೆ ಸಲ್ಲಿಸಿದ್ದಾರೆ.

ಜನವರಿ ೧೭ರಂದು ಹುಬ್ಬಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ
ಕೆ.ಎಲ್. ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬಿ. ಕೋರೆ ಹಾಗೂ ಬಿ.ವಿ. ಭೂಮರಡ್ಡಿ ಇಂಜಿನಿರಿಂಗ್ ಕಾಲೇಜಿನ ೭೫ನೇ ವರ್ಷದ (ಅಮೃತ ಮಹೋತ್ಸವ) ಸವಿ ನೆನಪಿಗಾಗಿ ಕೆ.ಎಲ್.ಇ. ವಿಶ್ವವಿದ್ಯಾಲಯ ಬೆಳಗಾವಿ, ಕೆ.ಎಲ್.ಇ. ತಾಂತ್ರಿಕ ಮಹಾವಿದ್ಯಾಲಯ ಹುಬ್ಬಳ್ಳಿ, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ, ಕೆ.ಎಲ್.ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ ಹುಬ್ಬಳ್ಳಿ, ಕೆ.ಎಲ್.ಇ. ಹುಬ್ಬಳ್ಳಿ ಕೊ-ಆಪರೇಟಿವ್ ಆಸ್ಪತ್ರೆ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವು ಜನವರಿ ೧೭ರಂದು ಬೆಳಿಗ್ಗೆ ೧೦ ಗಂಟೆಗೆ ಕೊಯಿನ್ ರಸ್ತೆಯ ಕೆ.ಎಲ್.ಇ. ಕೊ-ಆಪರೇಟಿವ್ ಆಸ್ಪತ್ರೆಯಲ್ಲಿ ನಡೆಯಲಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ವೀರೇಶ ಅಂಚಟಗೇರಿ ಉದ್ಘಾಟಿಸುವರು. ಕೆ.ಎಲ್.ಇ. ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕರಾದ ಪ್ರಸಾದ ಅಬ್ಬಯ್ಯ ಕೆ.ಎಲ್.ಇ. ತಾಂತ್ರಿಕ ವಿವಿ ಉಪಕುಲಪತಿಗಳಾದ ಡಾ. ಅಶೋಕ ಶೆಟ್ಟರ, ಕೆ.ಎಲ್.ಇ. ಹುಬ್ಬಳ್ಳಿ ಕೊ-ಆಪರೇಟಿವ್ ಆಸ್ಪತ್ರೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ ಶೆಟ್ಟರ, ಕಾರ್ಯದರ್ಶಿಗಳಾದ ಲಿಂಗರಾಜ ಪಾಟೀಲ ಮತ್ತು ಆಸ್ಪತ್ರೆಯ ನಿರ್ದೇಶಕರಾದ ಡಾ. ವಿ.ಡಿ. ಪಾಟೀಲ ಆಗಮಿಸಲಿದ್ದಾರೆ. ಸಾರ್ವಜನಿಕರು ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಡಾ. ಬಸವರಾಜ ಎಸ್. ಅನಾಮಿ, ಪ್ರಾಚಾರ್ಯರಾದ ಡಾ. ಎಂ. ಜಿ. ಹಿರೇಮಠ, ಡಾ. ವೈ. ಎಫ್. ಹಂಜಿ ವಿನಂತಿಸಿದ್ದಾರೆ.

೧೯೮೪ ರಿಂದ ಕೆಎಲ್‌ಇ ಸಂಸ್ಥೆಯ ಆಡಳಿತ ಕರ್ಣಧಾರತ್ವವನ್ನು ವಹಿಸಿಕೊಂಡು, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಕೈಗೆಟಕುವ ವೆಚ್ಚದಲ್ಲಿ ಅತ್ಯಾಧುನಿಕ ಆರೋಗ್ಯಸೇವೆ ಜನಸಾಮಾನ್ಯರಿಗೂ ಕೈಗೆಟುಕಬೇಕು ಎನ್ನುವುದು ಇವರ ಇನ್ನೊಂದು ಕನಸು. ಇದನ್ನು ನನಸಾಗಿಸುವ ಪ್ರಯತ್ನವಾಗಿ ವಿದೇಶಿ ವಿವಿಗಳ ಸಹಯೋಗದಲ್ಲಿ ನೂರು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಸಾವಿರ ಹಾಸಿಗೆಯ ಹೈಟೆಕ್ ಆಸ್ಪತ್ರೆ ನಿರ್ಮಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಉಚಿತ ವೈದ್ಯಕೀಯ ಸೇವೆ ಒದಗಿಸಿ ಲಕ್ಷಾಂತರ ಮಂದಿಗೆ ಆರೋಗ್ಯ ಭಾಗ್ಯ ಕಲ್ಪಿಸಿಕೊಟ್ಟಿದ್ದಾರೆ. ರಾಜ್ಯದ ವಿಧಾನ ಮಂಡಲ ಅಧಿವೇಶನ ಬೆಳಗಾವಿಯಲ್ಲಿ ಯಶಸ್ವಿಯಾಗಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕೆಎಲ್‌ಇ ಸಂಸ್ಥೆಯ ಪ್ರಸಾರಾಂಗದ ಮೂಲಕ ೧೧೫ ಕ್ಕೂ ಹೆಚ್ಚಿನ ಗ್ರಂಥಗಳನ್ನು ಪ್ರಕಟಿಸಿದ್ದಾರಲ್ಲದೆ, ಕೆಎಲ್‌ಇ ವಾರ್ತಾ ಪತ್ರ ತ್ರೈಮಾಸಿಕವನ್ನು ೨೦೦೧ರಿಂದ ಪ್ರಕಟಿಸುತ್ತಿದ್ದಾರೆ. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಕೆಎಲ್‌ಇ ಎಫ್.ಎಂ ಬಾನುಲಿ ಕೇಂದ್ರಗಳನ್ನು ಸ್ಥಾಪಿಸಿ ಸಮುದಾಯದ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಂಸ್ಥೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೨ ಕೋಟಿ ಸಹಾಯ ನಿಧಿಯನ್ನು ಅರ್ಪಿಸಿದ್ದಾರೆ.
ಸಂಸ್ಥೆಯ ಹಿರಿಯ ನಿರ್ದೇಶಕರಾದ ಶಂಕರಣ್ಣ ಐ. ಮುನವಳ್ಳಿ ಮತ್ತು ಇತರ ನಿರ್ದೇಶಕರು, ಅಜೀವ ಸದಸ್ಯರು ಡಾ. ಕೋರೆ ಅವರ ದೂರದೃಷ್ಟಿತ್ವ ಮತ್ತು ಯೋಜನೆಗಳಿಂದಾಗಿ ಕೆಎಲ್‌ಇ ಸಂಸ್ಥೆ ಪ್ರಗತಿಪರ ಕಾರ್ಯಗಳನ್ನು ಮಾಡುತ್ತಿವೆ ಎಂದು ಸಂತಸ ವ್ಯಕ್ತ ಪಡಿಸುತ್ತಾರೆ.
ಜ್ಞಾನದಾಸೋಹದ ಜೊತೆಗೆ ಗಡಿಭಾಗದಲ್ಲಿ ಕನ್ನಡ ಬೆಳೆಸುವ ವಿಧೇಯಕ ಕಾರ್ಯದಲ್ಲೂ ಸಕ್ರಿಯವಾಗಿ ಡಾ. ಪ್ರಭಾಕರ ಕೋರೆ ತೊಡಗಿಸಿಕೊಂಡಿದ್ದಾರೆ. “ಸಂಸ್ಥೆಯನ್ನು ಕಟ್ಟಿದ ಸಪ್ತರ್ಷಿಗಳ ಆಶೀರ್ವಾದ, ದಾನಿಗಳ ನೆರವು, ಆಡಳಿತ ಮಂಡಳಿಯ ಕ್ರಿಯಾಶೀಲತೆ, ಸಿಬ್ಬಂದಿಗಳು ಸೇವೆ, ಕರ್ತವ್ಯ ನಿಷ್ಠೆ, ಕಾರ್ಯತತ್ಪರತೆಯೇ ಕೆಎಲ್‌ಇ ಸಂಸ್ಥೆಯ ಬೆಳವಣಿಗೆಗೆ ಕಾರಣ” ಎಂದು ಸೌಜನ್ಯದಿಂದಲೇ ನುಡಿಯುತ್ತಾರೆ.
ಡಾ. ಪ್ರಭಾಕರ ಕೋರೆ ಅವರು ಪತ್ನಿ ಶ್ರೀಮತಿ ಆಶಾ, ಮಕ್ಕಳಾದ ಪ್ರೀತಿ, ದೀಪ್ತಿ, ಮತ್ತು ಅಮಿತ, ಸಂಬಂಧಿಗಳು, ಹಿತೈಷಿಗಳು ಮತ್ತು ಸ್ನೇಹಿತರ ಸಹಾಯ ಹಸ್ತವನ್ನು ಸದಾ ನೆನೆಯುತ್ತಾರೆ.

ಇಂದಿನ ಪ್ರಮುಖ ಸುದ್ದಿ :-   ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು-ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ..ಇದರ ಪ್ರಕ್ರಿಯೆ ಹೇಗೆ..?

ಕೆ.ಎಲ್.ಇ. ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆ
ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆಯು ಖಾಸಗಿ ಆಸ್ಪತ್ರೆಗಳಲ್ಲಿ ಅತ್ಯಂತ ಹಳೆಯದು. ಪೂಜ್ಯರಾದ ಶ್ರೀ ಸಿದ್ಧಾರೂಡ ಸ್ವಾಮಿಗಳು ಈ ಅಸ್ಪತ್ರೆಗೆ ೦೭.೦೬.೧೯೨೩ ರಂದು ಶಂಕು ಸ್ಥಾಪನೆ ಮಾಡಿದ್ದರು. ೨೭.೦೮.೧೯೨೪ ರಂದು ಮುಂಬೈ ಗರ್ವನರ್‌ ಆಗಿದ್ದ ಲೇಸಿ ಓರಾಮಿ ವಿಲ್ಸನ್ಸ್‌ ಅವರಿಂದ ಉದ್ಘಾಟನೆಗೊಂಡಿದೆ.
ಈ ಆಸ್ಪತ್ರೆಯು ೦೧.೦೭-೨೦೨೦ ರಲ್ಲಿ ಕೆ.ಎಲ್.ಇ. ಸಂಸ್ಥೆಯಿಂದ ನವೀಕೃತಗೊಂಡು, ಉತ್ತಮ ಸೇವೆ ನೀಡುತ್ತಿದೆ. ಹುಬ್ಬಳ್ಳಿಯ ಪ್ರತಿಷ್ಠಿತ ವೈದ್ಯರಾಗಿದ್ದ ಡಾ. ಕುಂಬಕೋಣಂ, ಡಾ. ಗೋರೆ, ಡಾ.ಬ್ರಿ.ಗಾಂಜಾ, ಡಾ. ಯಶವಂತರಾವ ನಾಡಿಗೇರ, ಡಾ. ಆರ್. ಬಿ. ಪಾಟೀಲ ಈ ಆಸ್ಪತ್ರೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಶ್ರೀಮತಿ ಬೆಲಗಾಮ್‌ವಾಲೆ ಎಂಬ ಮಹಿಳೆ ತಮ್ಮ ಮಾಲ್ಕಿಯ ಜಾಗವನ್ನು ನೀಡಿದ್ದಾರಲ್ಲದೆ, ಆ ಸಮಯದಲ್ಲಿ ೧೦,೦೦೦ ರೂ.ದೇಣಿಗೆ ನೀಡಿದ್ದು, ದಾಖಲೆಗಳಿಂದ ತಿಳಿಯುತ್ತದೆ. ಶ್ರೀಮತಿ ಸುಧಾ ಆರ್. ಶೆಟ್ಟಿ ಅವರು ನೆಲ ಹಾಸಿಗೆ, ಗೋಡೆಗಳಿಗೆ ಟೈಲ್ಸ್ ಗಳನ್ನು ಕೊಡಿಸಿದ್ದಾರೆ. ದಿ. ರಂಗಪ್ಪ ಕಾಮತ ಅವರು ೧೯೯೦ ರಲ್ಲಿ ಆಸ್ಪತ್ರೆಯ ಕಟ್ಟಡ ಕಟ್ಟಲು ಸಹಕರಿಸಿದ್ದಾರೆ. ಬಹಳಷ್ಟು ದಾನಿಗಳು ಆಸ್ಪತ್ರೆಯ ಬೆಳವಣಿಗೆಗೆ ಕೈ ಜೋಡಿದ್ದಾರೆ.
ಒಂದು ನೂರು ಬೆಡ್ ಆಸ್ಪತ್ರೆಯಲ್ಲಿ ೧೪ ಕ್ಕೂ ಹೆಚ್ಚಿನ ವಿಭಾಗಗಳಿದ್ದು, ಮೇಜರ್ ಮತ್ತು ಮೈನರ್ ಆಪರೇಶನ್ ಮತ್ತು ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ.
-ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕ

 

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.5 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement