ಯಲ್ಲಾಪುರ: ಅರಬೈಲ್ ಬಳಿ ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಲಾರಿ, ಚಾಲಕ, ಕ್ಲೀನರ್ ಪಾರು | ವೀಕ್ಷಿಸಿ

ಯಲ್ಲಾಪುರ: ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಹುಬ್ಬಳ್ಳಿ ಕಡೆಯಿಂದ ಸಿಮೆಂಟ್ ತುಂಬಿಕೊಂಡು ಮಂಗಳೂರು ಕಡೆ ಹೊರಟಿದ್ದ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಸುದ್ದಿ ತಿಳಿದಿ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕದವರು ಧಾವಿಸಿ ಬಂದರೂ ದಹಿಸುವ ಬೆಂಕಿಯನ್ನು ತಕ್ಷಣವೇ ನಂದಿಸಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ಬಹುತೇಕ ಸುಟ್ಟು ಹೋಗಿತ್ತು. ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಸಿಮೆಂಟ್‌ ಚೀಲಗಳಿಗೂ ಹಾನಿಯಾಗಿದೆ.ಲಕ್ಷಾಂತರ ನಷ್ಟ ಉಂಟಾಗಿದೆ. lನೋಡು ನೋಡುತ್ತಿದ್ದಂತೆ ಬೆಂಕಿ, ಲಾರಿ ತುಂಬ ವ್ಯಾಪಿಸಿ, ಸಟ್ಟು ಕರಕಲಾಗಿದೆ. ಚಾಲಕ ಮತ್ತು ನಿರ್ವಾಹಕ ಈ ಅನಾಹುತದಿಂದ ಪಾರಾಗಿದ್ದಾರೆ. ಬೆಂಕಿ ಹೇಗೆ ತಗುಲಿತು, ಹೊತ್ತಿಕೊಂಡಿತು ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ. ಕೆಲವರ ಪ್ರಕಾರ ಘಟ್ಟದ ಪ್ರದೇಶದಲ್ಲಿ ಬ್ರೇಕ್‌ ಲೈನರ್‌ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳಿವೆ.ಆದರೆ ಯಾವುದಕ್ಕೂ ನಿಖರತೆ ಇಲ್ಲ. ಹೀಗಾಗಿ ಈ ಬಗ್ಗೆ ಕೂಲಂಕಷವಾಗಿ ತನಿಖೆ ನಂತರವೇ ಏನಾಗಿದೆ ಎಂಬ ಮಾಹಿತಿ ಸಿಗಬೇಕಷ್ಟೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement