ಬೀದರ : ಹಸುಗೂಸುಗಳಿಗೆ ವಿಷವುಣಿಸಿ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

ಬೀದರ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ನಿಲಮನಹಳ್ಳಿ ತಾಂಡಾದಲ್ಲಿ ನಡೆದ ವರದಿಯಾಗಿದೆ.
25 ವರ್ಷದ ಮೀರಾಬಾಯಿ ಎಂಬವರು ತನ್ನ ಮೂರು ಮತ್ತು ಎರಡು ವರ್ಷದ ಮಕ್ಕಳಿಗೆ ವಿಷವುಣಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಮೀರಾಬಾಯಿ ತನ್ನಮಕ್ಕಳಾದ ನಚ್ಚುಬಾಯಿ ಮತ್ತು ಗೋಲುಬಾಯಿಗೆ ವಿಷ ಉಣಿಸಿದ್ದಾರೆ. ಇಬ್ಬರು ಪುಟಾಣಿಗಳು ನಿದ್ದೆಯಲ್ಲೇ ಉಸಿರು ನಿಲ್ಲಿಸುತ್ತಿದ್ದಂತೆಯೇ ಮೀರಾಬಾಯಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ತೆರಳಿದ್ದು, ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement