ಡಬ್ಲ್ಯುಎಫ್‌ಐ ವಿವಾದ: ರಾಜೀನಾಮೆ ನೀಡಲು ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ ಗೆ ಕ್ರೀಡಾ ಸಚಿವಾಲಯ ಸೂಚನೆ..?

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ(WFI)ದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಗುರುವಾರ ಕ್ರೀಡಾ ಸಚಿವಾಲಯ ಅಂತಿಮ ಸೂಚನೆ ನೀಡಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು 24 ಗಂಟೆಗಳ ಕಾಲಾವಕಾಶ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ನಿವಾಸದಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ. ಗುರುವಾರ ಸಚಿವರನ್ನು ಭೇಟಿ ಮಾಡಿದ ಕುಸ್ತಿಪಟುಗಳಲ್ಲಿ ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಅವರು ಸಹ ಸೇರಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ಒಲಿಂಪಿಕ್ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥರ ರಾಜೀನಾಮೆಗೆ ಒತ್ತಾಯಿಸಿದರು ಮತ್ತು ಫೆಡರೇಶನ್ ಅನ್ನು ವಿಸರ್ಜಿಸಬೇಕೆಂದು ಬಯಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅನುರಾಗ್‌ ಠಾಕೂರ್, ಆರೋಪಗಳು “ಸ್ವರೂಪದಲ್ಲಿ ಗಂಭೀರವಾಗಿದೆ” ಮತ್ತು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರವು ಕುಸ್ತಿಪಟುಗಳ ಮಾತನ್ನು ಆಲಿಸುತ್ತದೆ ಎಂದು ಹೇಳಿದ್ದರು.
ಹಿಂದಿನ ದಿನ, ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಇತರ ಕುಸ್ತಿಪಟುಗಳು ಕ್ರೀಡಾ ಕಾರ್ಯದರ್ಶಿಯೊಂದಿಗಿನ ಸಭೆಯ ನಂತರ “ಯಾವುದೇ ರೀತಿಯ ಕಾಂಕ್ರೀಟ್ ಕ್ರಮದ ಭರವಸೆ ಸಿಕ್ಕಿಲ್ಲ ಹಾಗೂ ತಾವು ತೃಪ್ತರಾಗಲಿಲ್ಲ ಎಂದು ಹೇಳಿದ್ದರು. ಅಗತ್ಯವಿದ್ದರೆ ಪೊಲೀಸರನ್ನು ಸಂಪರ್ಕಿಸುವುದಾಗಿ ಕುಸ್ತಿಪಟುಗಳು ಹೇಳಿದ್ದರು.
ಜನವರಿ 22 ರಂದು ನಡೆಯುವ ಎಮರ್ಜೆಂಟ್ ಜನರಲ್ ಕೌನ್ಸಿಲ್ ಸಭೆಯಲ್ಲಿ ಬ್ರಿಜ್ ಭೂಷಣ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂದು ಬುಧವಾರ ವರದಿಯಾಗಿತ್ತು.
ಅವರ ಬಳಿ ಯಾವುದಾದರೂ ಪುರಾವೆಗಳಿದ್ದರೆ ಅವುಗಳನ್ನು ಸಾರ್ವಜನಿಕಗೊಳಿಸಿ ಎಂದು ನಾನು ಮೊದಲ ದಿನವೇ ಹೇಳಿದ್ದೆ. ನನ್ನ ಮೇಲಿನ ಲೈಂಗಿಕ ಕಿರುಕುಳ ಆರೋಪ ಸಾಬೀತಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಬುಧವಾರ ಹೇಳಿದ್ದರು.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement