ಆಂಧ್ರಪ್ರದೇಶ: ಪೋಲಿಸ್ ಕಾನ್ಸ್‌ಟೇಬಲ್ ಹುದ್ದೆಗೆ ಪಿಎಚ್‌ಡಿ, ಎಂಟೆಕ್, ಎಲ್‌ಎಲ್‌ಬಿ, ಎಂಎಸ್‌ಸಿ ಆದವರಿಂದಲೂ ಅರ್ಜಿ…!

ವಿಜಯವಾಡ: ಆಂಧ್ರಪ್ರದೇಶದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ 10 ಪಿಎಚ್‌ಡಿ ಮತ್ತು 930 ಎಂಟೆಕ್ ಪದವೀಧರರು, 94 ವಕೀಲರು ಮತ್ತು 13,961 ಸ್ನಾತಕೋತ್ತರ ಪದವೀಧರರು ಇದ್ದಾರೆ…!
ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯ ಅಧಿಕೃತ ಟಿಪ್ಪಣಿಯ ಪ್ರಕಾರ, ಕಾನ್ಸ್‌ಟೇಬಲ್ ಹುದ್ದೆಗೆ ಅರ್ಹತೆಗೆ ಇಂಟರ್‌ಮೀಡಿಯಟ್‌ ಪಾಸ್‌ ಆದರೆ ಸಾಕು. ಭಾನುವಾರ ಲಿಖಿತ ಪರೀಕ್ಷೆ ನಡೆಯಲಿದೆ.
ಅಲ್ಲದೆ, ಅರ್ಜಿದಾರರಲ್ಲಿ 1,55,537 ಪದವೀಧರರು ಸೇರಿದ್ದಾರೆ. ಪಿಎಚ್‌ಡಿ ಹೊಂದಿರುವವರು ಮತ್ತು ವಕೀಲರು ಕಾನ್‌ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಸ್ಟೈಪೆಂಡರಿ ಕೆಡೆಟ್ ಟ್ರೈನಿ ಸಬ್-ಇನ್‌ಸ್ಪೆಕ್ಟರ್ 411 ಹುದ್ದೆಗೆ 1,73,047 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಮತ್ತು ಹೆಚ್ಚಿನ ಅರ್ಜಿದಾರರ ಅತ್ಯುನ್ನತ ವಿದ್ಯಾರ್ಹತೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಇಂಜಿನಿಯರಿಂಗ್ ಪದವೀಧರರೂ ಇದ್ದಾರೆ.

ಆಂಧ್ರಪ್ರದೇಶ ಸರ್ಕಾರವು ಅಕ್ಟೋಬರ್ 20 ರಂದು 411 ಸಬ್ ಇನ್ಸ್‌ಪೆಕ್ಟರ್‌ಗಳ ಹುದ್ದೆಗಳು ಮತ್ತು 6100 ಪೊಲೀಸ್ ಕಾನ್ಸ್‌ಟೇಬಲ್‌ಗಳ ಹುದ್ದೆಗಳಿಗೆ ನೇಮಕಾತಿಯನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಪೊಲೀಸ್ ನೇಮಕಾತಿ ಮಂಡಳಿಯು 5,03,486 ಅರ್ಜಿಗಳನ್ನು ಸ್ವೀಕರಿಸಿದೆ, ಅದರಲ್ಲಿ 3,95,415 ಪುರುಷ ಆಕಾಂಕ್ಷಿಗಳು ಮತ್ತು 1,08,071 ಮಹಿಳೆಯರು. ಅಭ್ಯರ್ಥಿಗಳಲ್ಲಿ 5,284 ಎಂಬಿಎ (MBA) ಪದವಿ ಪಡೆದವರು, 4,365- ಎಂಎಸ್‌ಸಿ (MSc) ಪದವಿ ಪಡೆದವರು ಸಹ ಇದ್ದಾರೆ.
6,400 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಸ್ಪರ್ಧಿಸುತ್ತಿರುವ 5,03,486 ಅಭ್ಯರ್ಥಿಗಳಲ್ಲಿ ಒಟ್ಟಾರೆ 13,961 ಸ್ನಾತಕೋತ್ತರ ಪದವೀಧರರು ಮತ್ತು 1,55,537 ಪದವೀಧರರು ಸೇರಿದ್ದಾರೆ.
3.64 ಲಕ್ಷಕ್ಕೂ ಹೆಚ್ಚು ಅರ್ಜಿದಾರರು ತೆಲುಗು ಭಾಷೆಯನ್ನು ಲಿಖಿತ ಪರೀಕ್ಷಾ ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದರೆ, 1.39 ಲಕ್ಷಕ್ಕೂ ಹೆಚ್ಚು ಜನರು ಇಂಗ್ಲಿಷ್ ಮತ್ತು 227 ಮಂದಿ ಉರ್ದು ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024: ಮೊದಲ ಹಂತದ ಮತದಾನಕ್ಕೆ ಮುನ್ನವೇ 2019ರ ಚುನಾವಣೆಗಿಂತ ಹೆಚ್ಚು ಮೌಲ್ಯದ ಸ್ವತ್ತು ವಶಕ್ಕೆ ಪಡೆದ ಚುನಾವಣಾ ಆಯೋಗ; ಎಷ್ಟು ಗೊತ್ತಾ..?

 

4.3 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement