ದೆಹಲಿ ಗಣರಾಜ್ಯೋತ್ಸವʼದ ಪರೇಡ್‌ನಲ್ಲಿ ಎಲ್ಲರ ಗಮನ ಸೆಳೆದ ಕರ್ನಾಟಕದ ʻನಾರಿಶಕ್ತಿʼ ಸ್ತಬ್ಧಚಿತ್ರ

ನವದೆಹಲಿ: ನವದೆಹಲಿಯ ರಾಷ್ಟ್ರಪತಿ ಭವನದ ಕರ್ತವ್ಯಪಥದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಪರೇಡ್​​ನಲ್ಲಿ ಕರ್ನಾಟಕದಿಂದ ‘ನಾರಿ ಶಕ್ತಿ’ ಸ್ತಬ್ಧಚಿತ್ರ (Nari shakti Tableau) ಪ್ರದರ್ಶನವಾಗಿದೆ.
ಈ ಮೂಲಕ ಸತತ 14 ವರ್ಷಗಳಿಂದ ಪಥಸಂಚಲನದಲ್ಲಿ ಪಾಲ್ಗೊಂಡ ದೇಶದ ಏಕೈಕ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಸ್ತಬ್ಧಚಿತ್ರದಲ್ಲಿ ಈ ಬಾರಿ ಆದರ್ಶ ಮಹಿಳೆಯರ ಸಾಧನೆಯಗಳು ಅನಾವರಣಗೊಂಡಿವೆ. ಕರ್ನಾಟಕದ ಮೂವರು ಸಾಧಕ ಮಹಿಳೆಯರ ಮೇಲೆ ಸ್ತಬ್ಧಚಿತ್ರ ಮಾಡಲಾಗಿದೆ ರಾಜ್ಯದ 3 ಮಹಿಳಾ ಸಾಧಕರ ಅಸಾಧಾರಣ ಸಾಧನೆಗಳನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿದೆ. ಸೂಲಗಿತ್ತಿ ನರಸಮ್ಮ – ಸೂಲಗಿತ್ತಿ, ಹಾಲಕ್ಕಿ ಸಮಾಜದ ತುಳಸಿ ಗೌಡ ಹಾಗೂ ಸಾಲುಮರದ ತಿಮ್ಮಕ್ಕ ಅವರು ಸಮಾಜಕ್ಕೆ ಸಲ್ಲಿಸಿದ ಅವರ ನಿಸ್ವಾರ್ಥ ಕೊಡುಗೆಯಿಂದಾಗಿ ಹೆಸರುವಾಸಿಯಾಗಿದ್ದಾರೆ.
ಸ್ತಬ್ಧಚಿತ್ರದಲ್ಲಿ ಸೂಲಗಿತ್ತಿ ನರಸಮ್ಮ, ಪದ್ಮಶ್ರೀ ಪುರಸ್ಕೃತರಾದ ಹಾಲಕ್ಕಿ ಸಮುದಾಯದ ತುಳಸಿ ಗೌಡ ಹಾಲಕ್ಕಿ, ಹಾಗೂ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರ ಸಾಧನೆಗಳ ಪ್ರದರ್ಶನ ಮಾಡಲಾಗಿದೆ. ಹಾಗಯೇ ಬೆಟ್ಟ-ಗುಡ್ಡಗಗಳು, ಗಿಡಮರಗಳಿಂದ ಸ್ತಬ್ಧಚಿತ್ರ ಅನಾವರಣಗೊಂಡಿದೆ. ಮುಂಭಾಗದಲ್ಲಿ ಹೆರಿಗೆ ತಜ್ಞೆ ಸೂಲಗಿತ್ತಿ ನರಸಮ್ಮ ಚಿತ್ರವಿದ್ದು, ಚನ್ನಪಟ್ಟಣದ ಗೊಂಬೆ ಮಾದರಿಯ ತೊಟ್ಟಿಲು ಚಿತ್ರ ಮತ್ತು ನರಸಮ್ಮನವರು ಮಗುವನ್ನು ಎತ್ತಿಕೊಂಡಿರುವಂತೆ ಚಿತ್ರ ಪ್ರದರ್ಶನಗೊಂಡಿದೆ. ನಂತರ ತುಳಸಿ ಗೌಡ ಅವರು ಗಿಡ ನೆಡುತ್ತಿರುವ ಚಿತ್ರವಿದೆ. ಅದರ ನಂತರ ಸಾಲುಮರದ ತಿಮ್ಮಕ್ಕ ಅವರು ಗಿಡಗಳಿಗೆ ನೀರುಣಿಸುತ್ತಿರುವ ಚಿತ್ರವಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement