ಕೇಶವ ಹೆಗಡೆ ಕೊಳಗಿಗೆ ನೆಬ್ಬೂರು ನಾರಾಯಣ ಭಾಗವತ ಪ್ರಶಸ್ತಿ : ಜನವರಿ 29ರಂದು ಪ್ರದಾನ

ಶಿರಸಿ: ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನದಿಂದ ಯಕ್ಷಗಾನದ ಬಡಗುತಿಟ್ಟಿನ ಖ್ಯಾತ ಭಾಗವತರಾಗಿದ್ದ ದಿ.ನಾರಾಯಣ ಭಾಗವತರ ಹೆಸರಿನಲ್ಲಿ ಕೊಡಮಾಡುವ ಪ್ರಥಮ ಪ್ರಶಸ್ತಿಯನ್ನು ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಅವರಿಗೆ ಪ್ರಕಟಿಸಲಾಗಿದೆ.
ಸುಮಾರು 40 ವರ್ಷಗಳಿಂದ ಯಕ್ಷಗಾನದ ಭಾಗವತರಾಗಿರುವ ಕೇಶವ ಹೆಗಡೆ ಕೊಳಗಿ ಅವರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿ.ಎನ್.ಹೆಗಡೆ ಹಾವಳಿಮನೆ ತಿಳಿಸಿದ್ದಾರೆ.
ಪ್ರಶಸ್ತಿಯನ್ನು ಜನವರಿ 29 ರಂದು ಸಂಜೆ 4 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಸಂಪಖಂಡ ಪ್ರೌಢಶಾಲೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಹುಬ್ಬಳ್ಳಿಯ ಆರ್.ಜಿ.ಭಟ್ಟ ವರ್ಗಾಸರ, ಡಾ. ದಿನೇಶ ಹೆಗಡೆ, ವಿನಾಯಕ ಭಾಗ್ವತ್ ಹಣಗಾರ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಎಂ.ಆರ್.ಹೆಗಡೆ‌ ಕಾನಗೋಡ, ಗಣಪತಿ ಭಟ್ಟ ಓಣಿ ವಿಘ್ನೇಶ್ವರ ಅವರನ್ನು ಗೌರವಿಸಲಾಗುತ್ತದೆ.
ಕಾಶ್ಯಪ ಪರ್ಣಕುಟಿ‌ ಅಭಿನಂದನಾ‌ ನುಡಿಯಾಡಲಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ಬಳಿಕ ಯಕ್ಷ ಸೌರಭ ಯಕ್ಷಗಾನ ನಡೆಯಲಿದೆ ಎಂದು ಟ್ರಸ್ಟ್ ನ ಸುಬ್ರಹ್ಮಣ್ಯ ಹೆಗಡೆ ಸುತ್ಮನೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement