ಯಡಿಯೂರಪ್ಪ ಜೊತೆಗಿನ ರಾಜಕೀಯ ಸಂಘರ್ಷಕ್ಕೆ ಇನ್ಮುಂದೆ ಪೂರ್ಣ ವಿರಾಮ : ಯತ್ನಾಳ

ವಿಜಯಪುರ: ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ. ಯಡಿಯೂರಪ್ಪ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಹಿರಿಯರ ಸಲಹೆ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಗೆ ರಾಜಕೀಯ ಸಂಘರ್ಷಕ್ಕೆ ವಿರಾಮ ನೀಡಲು ನಿರ್ಧರಿಸಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಕುರಿತು ಮಾತನಾಡದಂತೆ ಪಕ್ಷ ಸೂಚನೆ ನೀಡಿರುವ ಕಾರಣ ಪಾಲಿಸಬೇಕು. ಹೀಗಾಗಿ ಯಡಿಯೂರಪ್ಪ ಅವರ ವಿರುದ್ಧ ರಾಜಕೀಯ ಸಂಘರ್ಷಕ್ಕೆ ತೆರೆ ಎಳೆಯುವುದಾಗಿ ಅವರು ಹೇಳಿದರು.
ಹಾಗಂತ ಇದು ರಾಜಕೀಯ ಹೊಂದಾಣಿಕೆ ಅಲ್ಲ, ಆದರೆ ಪಕ್ಷದ ಹೈಕಾಂಡ ಸೂಚನೆ ಪಾಲಿಸಬೇಕು. ಇದಕ್ಕಾಗಿ ಇನ್ಮುಂದೆ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವುದಿಲ್ಲ. ಎಲ್ಲದಕ್ಕೂ ಗುರ್‌ ಎನ್ನಲು ಆಗುತ್ತದೆಯೇ ಎಂದು ಯತ್ನಾಳ ಹೇಳಿದರು.
ಪಕ್ಷದಿಂದ ಕಾರಣ ಕೇಳಿ ನನಗೆ ಯಾವುದೇ ನೋಟೀಸ್ ಬರದಿದ್ದರೂ ನೋಟಿಸ್‌ ನೀಡಲಾಗಿದೆ ಎಂದು ಊಹಾಪೋಹ ಹರಡಿವೆ. ಮಾಧ್ಯಮಗಳಲ್ಲಿ ಇಂತಹ ವರದಿಗಳು ಪ್ರಸಾರ ಆಗುತ್ತಿವೆ ಎಂದರು.
ನಗರಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮಕ್ಕೆ ನಾನು ಉದ್ದೇಶಪೂರ್ವಕವಾಗಿ ನಾನು ಗೈರಾಗಿಲ್ಲ. ರಾಷ್ಟರೀಯ ಅಧ್ಯಕ್ಷ ನಡ್ಡಾ ಅವರೊಂದಿಗೆ ಮಾತನಾಡಿ, ಅನುಮತಿ ಪಡೆದೇ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ ಎಂದು ಯತ್ನಾಳ್ ಸ್ಪಷ್ಟನೆ ನೀಡಿದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement