ಬೆಂಗಳೂರಿನ ಸ್ಟಿಕ್ ಇಡ್ಲಿ : ಈ ಖಾದ್ಯ ತಿನ್ನಲು ಈ ಹೊಸ ಮಾರ್ಗಕ್ಕೆ ಇಂಟರ್ನೆಟ್ ಭಾರೀ ಪ್ರತಿಕ್ರಿಯೆ

posted in: ರಾಜ್ಯ | 0

ಸಾಮಾನ್ಯವಾಗಿ ತಟ್ಟೆ ಇಡ್ಲಿ ನೋಡಿರುತ್ತೇವೆ. ಆದರೆ ಸ್ಟಿಕ್ ಇಡ್ಲಿ ಬಗ್ಗೆ ಕೇಳಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ​​ ಭಾರೀ ವೈರಲ್ ಆಗುತ್ತಿದೆ ಈ ಸ್ಟಿಕ್ ಇಡ್ಲಿ. ಏನಿದರ ವಿಶೇಷತೆ ಈ ಸ್ಟೋರಿ ಓದಿ. ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಕೆಲವೊಂದಿಷ್ಟು ಪೋಸ್ಟ್​​ಗಳು, ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿರುತ್ತವೆ. ಈಗ ಸ್ಟಿಕ್ ಇಡ್ಲಿ ಎಲ್ಲೆಡೆ ವೈರಲ್​​ ಆಗಿದೆ. ಹೌದು ಇದನ್ನು ಕಡ್ಡಿ ಇಡ್ಲಿ ಎಂದು ಕೂಡ ಕರೆಯುತ್ತಾರೆ. ನೀವು ಆರಾಮದಾಯಕವಾಗಿ ಸ್ಟಿಕ್​​ನಲ್ಲಿ ಹಿಡಿದು ಇಡ್ಲಿಯನ್ನು ಸವಿಯಬಹುದು. ಕಡ್ಡಿ ಇಡ್ಲಿ ಮೊದಲ ಬಾರಿಗೆ ಅಕ್ಟೋಬರ್ 2021 ರಲ್ಲಿ ಯೂಟ್ಯೂಬ್‌ನಲ್ಲಿ ವೈರಲ್ ಆಗಿತ್ತು. ಆದರೆ ಇದೀಗಾ ಟ್ವೀಟ್​​​ನಲ್ಲಿ ಸ್ಟಿಕ್ ಇಡ್ಲಿ ಬಗ್ಗೆ ಮತ್ತೆ ಭಾರೀ ಚರ್ಚೆಯಾಗುತ್ತಿದೆ.
ಬೆಂಗಳೂರಿನ ಆಹಾರ ಕ್ಷೇತ್ರವು ಹೊಸ ಹೊಸತನವನ್ನು ಹೊಂದಿದೆ — ಸಾಂಬಾರ್ ಮತ್ತು ಚಟ್ನಿಯೊಂದಿಗೆ ಕೋಲಿನ ಮೇಲೆ ಇಡ್ಲಿ! ಹೌದು ಅಥವಾ ಇಲ್ಲವೇ?” ಎಂದು ಟ್ವಿಟರ್ ಬಳಕೆದಾರರೊಬ್ಬರು ಕೇಳಿದರು. ಈ ಟ್ವೀಟ್ ಪೋಸ್ಟ್ 90,000 ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಶಾಸಕ ಮಾಡಾಳು ವಿರೂಪಾಕ್ಷಪ್ಪ ಐದು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ : ನ್ಯಾಯಾಲಯ ಆದೇಶ

ಕೇಂದ್ರದ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ ಚಂದ್ರಶೇಖರ ಕೂಡ ಪ್ರತಿಕ್ರಿಯಿಸಿ, “ನಾನು ಮೂಲ ಇಡ್ಲಿಗೆ ಅಂಟಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
“ಇದು ಅನುಪಯುಕ್ತ ಸೃಜನಶೀಲತೆ. ಮೊದಲಿನ ಇಡ್ಲಿ ಉತ್ತಮವಾಗಿದೆ. ನನ್ನ ಸುಂದರವಾದ ಬೆರಳುಗಳಿಂದ ನಾನು ಆಹಾರವನ್ನು ಸ್ಪರ್ಶಿಸಿದಾಗ, ರುಚಿ ಹೆಚ್ಚಾಗುತ್ತದೆ ಎಂದು ಇನ್ನೊಬ್ಬ ಇಂಟರ್ನೆಟ್ ಬಳಕೆದಾರರು ಉತ್ತರಿಸಿದ್ದಾರೆ

.

“ಮಕ್ಕಳಿಗೆ ಇದು ತಿನ್ನಲು ಸುಲಭ ಮತ್ತು ನನಗೆ ಅಲ್ಲ ಎಂದು ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.ಆದಾಗ್ಯೂ, ಕೆಲವರು ಸ್ಟಿಕ್ ಇಡ್ಲಿಗೆ ಥಂಬ್ಸ್ ಅಪ್ ನೀಡಿದರು, ಅದನ್ನು “ನೈರ್ಮಲ್ಯ”, “ಅನುಕೂಲಕರ” ಮತ್ತು “ಪ್ರಾಯೋಗಿಕ” ಎಂದು ಕರೆದಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ರಾಜ್ಯದಲ್ಲಿ 9 ನೂತನ ವಿಶ್ವ ವಿದ್ಯಾಲಗಳನ್ನು ಉದ್ಘಾಟಿಸಿ ಸಿಎಂ ಬೊಮ್ಮಾಯಿ

4 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement