ಬೆಂಗಳೂರು : ಸಿಸಿಬಿ ದಾಳಿ, 6800 ನಕಲಿ ಅಂಕಪಟ್ಟಿಗಳು ವಶಕ್ಕೆ

ಬೆಂಗಳೂರು : ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿ 6800 ನಕಲಿ ಅಂಕಪಟ್ಟಿಗಳನ್ನ ವಶಕ್ಕೆ ಪಡೆದಿದೆ.
ಮಾಹಿತಿ ಆಧರಿಸಿ ದಾಳಿ ನಡೆಸಿ ಸಿಸಿಬಿ ಪೊಲೀಸರು ಓರ್ವನನ್ನ ಬಂಧಿಸಿ 15 ವಿಶ್ವ ವಿದ್ಯಾಲಯಗಳು, ಬೋರ್ಡ್ ಗಳ ನಕಲಿ ಅಂಕಪಟ್ಟಿಯನ್ನ ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ದಂಧೆ ಬಯಲಾಗಿದ್ದು 6800 ನಕಲಿ ಅಂಕಪಟ್ಟಿಗಳು ತಯಾರಿಸಲು ಬಳಸಲಾಗುತ್ತಿದ್ದ ಟೆಕ್ನಿಕಲ್ ವಸ್ತುಗಳನ್ನ ಸಹ ವಶಕ್ಕೆ ಪಡೆಯಲಾಗಿದೆ.
ನಗರ ಪೊಲೀಸ್ ಆಯುಕ್ತ ಪ್ರತಾಪ್‌ರೆಡ್ಡಿ ಮಾಹಿತಿ ನೀಡಿದ್ದು, ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಏಕಕಾಲಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ೧೫ ವಿಶ್ವವಿದ್ಯಾನಿಲಯದ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ೬೮೦೦ಕ್ಕಿಂತ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ದಾಳಿಯ ವೇಳೆ ಸಿಕ್ಕಿಬಿದ್ದಿರುವ ಆರೋಪಿಯು ಹಲವು ವರ್ಷಗಳಿಂದ ವ್ಯವಸ್ಥಿತ ಜಾಲವನ್ನು ಹೊಂದಿ, ವಿವಿಧ ಹೆಸರುಗಳಲ್ಲಿ ಶಿಕ್ಷಣ ಇಲಾಖೆಯಿಂದಾಗಲಿ ಅಥವಾ ವಿಶ್ವವಿದ್ಯಾನಿಲಯಗಳಿಂದ ಯಾವುದೇ ರೀತಿಯ ಅನುಮೋದನೆ ಹಾಗೂ ಪರವಾನಗಿ ಪಡೆಯದೆ ಕಾನೂನುಬಾಹಿರವಾಗಿ ನಕಲಿ ಅಂಕಪಟ್ಟಿ ನೀಡಿ ಹಣ ಗಳಿಸುತ್ತಿದ್ದ ಎಂದು ಹೇಳಿದರು.
ನಕಲಿ ಅಂಕಪಟ್ಟಿ ವಿತರಿಸುವ ಜಾಲದಲ್ಲಿ ಭಾಗಿಯಾಗಿರುವ ಇನ್ನೂ ಕೆಲವು ಆರೋಪಿಗಳು ಇರುವ ಬಗ್ಗೆ ಮಾಹಿತಿ ದೊರೆತಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement