ಮಂಗಳೂರು: ಅಪಾರ್ಟ್ಮೆಂಟಿನಲ್ಲಿ ದಂಪತಿ ಶವವಾಗಿ ಪತ್ತೆ

posted in: ರಾಜ್ಯ | 0

ಮಂಗಳೂರು: ಮಂಗಳೂರಿನ ಬಿಜೈನ ಅಪಾರ್ಟ್‌ಮೆಂಟ್‌ ಒಂದರಲ್ಲಿ ದಂಪತಿ ಶವವಾಗಿ ಪತ್ತೆಯಾಗಿದೆ.
ಮೃತರನ್ನು ಬಿಜೈ ನಿವಾಸಿಗಳಾದ ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್ ದಿನೇಶ್ ರಾವ್ (65) ಹಾಗೂ ಶೈಲಜಾ (64) ಎಂದು ಗುರುತಿಸಲಾಗಿದೆ. ಶೈಲಜಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದರು. ಇವರನ್ನು ನೋಡಿಕೊಳ್ಳಲು ರಾತ್ರಿ ಮತ್ತು ಬೆಳಿಗ್ಗೆ ಹೊತ್ತಿನಲ್ಲಿ ಇಬ್ಬರು ಹೋಮ್ ನರ್ಸ್‌ಗಳು ಬಂದು ಹೋಗುತ್ತಿದ್ದರು. ರಾತ್ರಿ ಕೆಲಸಕ್ಕೆ ಬಂದ ಹೋಂ ನರ್ಸ್ ಬೆಳಿಗ್ಗೆ ಮನೆಯಿಂದ ಹೋದ ನಂತರದಲ್ಲಿ ಹಗಲು ಹೊತ್ತಿನಲ್ಲಿ ಕೆಲಸ ನಿರ್ವಹಿಸುವ ಮತ್ತೊಬ್ಬರು ಹೋಂ ನರ್ಸ್ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ದಿನೇಶ ಅವರು ಪತ್ನಿ ಶೈಲಜಾ ಅವರನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುಬಹುದು ಎಂದು ಶಂಕೆ ವ್ಯಕ್ತವಾಗಿದೆ.
ದಿನೇಶ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಂಡತಿ ಮೃತಪಟ್ಟ ಪಕ್ಕದ ಕೋಣೆಯಲ್ಲಿ ಗಂಡ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ದಂಪತಿ ಮಾತ್ರ ವಾಸ ಮಾಡುತ್ತಿದ್ದು, ಮಕ್ಕಳು ಹೊರ ದೇಶದಲ್ಲಿ ಉದ್ಯೋಗದಲ್ಲಿದ್ದಾರೆ ಎನ್ನಲಾಗಿದೆ. ಉರ್ವ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ಧಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಹಿರಿಯ ನಟ ಶರತ್ ಬಾಬು ಆಸ್ಪತ್ರೆಗೆ ದಾಖಲು

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement