ರಾಮಮಂದಿರ ನಿರ್ಮಾಣವಾಗುತ್ತಿದೆ, ಆದರೆ ರಾಮರಾಜ್ಯವೆಲ್ಲಿ?: ಪ್ರವೀಣ್ ತೊಗಾಡಿಯಾ ಪ್ರಶ್ನೆ

ಅಮೇಥಿ: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ದೇಶದಲ್ಲಿ ಇನ್ನೂ ರಾಮರಾಜ್ಯ ಮಾತ್ರ ಸ್ಥಾಪನೆಯಾಗಿಲ್ಲ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷದ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆ ಉತ್ತರ ಪ್ರದೇಶ ಅಮೇಥಿಯಲ್ಲಿನ ಪುರೆ ರಾಮದೀನ್ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೊಗಾಡಿಯಾ, “ಅಯೋಧ್ಯಾದಲ್ಲಿ ರಾಮಮಂದಿರ ತಲೆ ಎತ್ತುತ್ತಿದೆ. ಆದರೆ ‘ರಾಮರಾಜ್ಯ’ ಮಾತ್ರ ಎಲ್ಲಿಯೂ ಕಾಣಿಸುತ್ತಿಲ್ಲ. ದೇಶದ ಸಾವಿರಾರು ಹಿಂದೂಗಳಿಗೆ ಮನೆ, ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಉದ್ಯೋಗ, ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದು ತಾನು ಬಯಸುತ್ತಿರುವುದಾಗಿ ತೊಗಾಡಿಯಾ ಹೇಳುವ ಮೂಲಕ ಮೋದಿ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಹಿಂದೂಗಳು ಹಳ್ಳಿ ಹಳ್ಳಿಗೆ ತೆರಳಿ ಜನರ ಬೆಂಬಲ ಮತ್ತು ದೇಣಿಗೆ ಪಡೆದರು ಎಂದು ತೊಗಾಡಿಯಾ ಹೇಳಿದರು. ದೇಶದಲ್ಲಿ ಹಿಂದೂಗಳು ಸಮೃದ್ಧಿ ಮತ್ತು ಸುರಕ್ಷಿತವಾಗಿರಿಸುವುದು ತಮ್ಮ ಅಭಿಯಾನವಾಗಿದೆ. ನಮ್ಮ ದೇಶ ಸುಭಿಕ್ಷವಾಗಿರಲು ಹಿಂದೂಗಳೆಲ್ಲ ಕಳೆದು ಹೋಗಿರುವ ಸಮೃದ್ಧಿಯನ್ನು ಮರಳಿ ಪಡೆಯಲು ಜಾಗೃತರಾಗಬೇಕು ಎಂದರು.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement