ಎಲ್ಲೆ ಮೀರಿದ ಪ್ರೀತಿ..! ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಲು ಭಾರತಕ್ಕೆ ಹಾರಿ ಬಂದ ಸ್ವೀಡನ್‌ ಮಹಿಳೆ

ಇಟಾಹ್ (ಉತ್ತರ ಪ್ರದೇಶ): ಪ್ರೀತಿಗೆ ಯಾವುದೇ ಗಡಿಗಳಿಲ್ಲ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಸ್ವೀಡನ್ ಮಹಿಳೆಯೊಬ್ಬರು ಸ್ಥಳೀಯ ನಿವಾಸಿಯನ್ನು ವಿವಾಹವಾದಾಗ ಉತ್ತರ ಪ್ರದೇಶದ ಇಟಾಹ್ ಜನರು ಇದೇ ರೀತಿಯ ಘಟನೆಗೆ ಸಾಕ್ಷಿಯಾದರು.
ಸ್ವೀಡನ್ನಿನ ಕ್ರಿಸ್ಟನ್ ಲೀಬರ್ಟ್ ಎಂಬವರು ಶುಕ್ರವಾರ ಉತ್ತರ ಪ್ರದೇಶದ ಇಟಾಹ್‌ನಲ್ಲಿರುವ ಶಾಲೆಯೊಂದರಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ಫೇಸ್‌ಬುಕ್‌ನಲ್ಲಿ ಭೇಟಿಯಾದ ಪವನ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.
ಡೆಹ್ರಾಡೂನ್‌ನಲ್ಲಿ ಬಿ.ಟೆಕ್ ಮುಗಿಸಿರುವ ಪವನಕುಮಾರ, ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಸ್ಟನ್ ಲೀಬರ್ಟ್ ಅವರು 2012 ರಲ್ಲಿ ಪವನಕುಮಾರ ಅವರನ್ನು ಫೇಸ್‌ಬುಕ್‌ನಲ್ಲಿ ಭೇಟಿಯಾದರು ಮತ್ತು ಕ್ರಮೇಣ ಅವರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರೂ ಫೋನ್ ಮತ್ತು ವೀಡಿಯೊ ಕರೆಗಳ ಮೂಲಕ ನಿರಂತರವಾಗಿ ಮಾತನಾಡಲು ಪ್ರಾರಂಭಿಸಿದರು. ಅವರು ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ.

ಒಂದು ವರ್ಷದ ಹಿಂದೆ, ಪವನ್ ಆಗ್ರಾಕ್ಕೆ ಹೋಗಿ ಕ್ರಿಸ್ಟನ್ ಲೀಬರ್ಟ್ ಅವರನ್ನು ಭೇಟಿಯಾದರು, ಅಲ್ಲಿ ಅವರಿಬ್ಬರೂ ಪ್ರೀತಿಯ ಸಂಕೇತವಾದ ತಾಜ್ ಮಹಲ್ ಅನ್ನು ಒಟ್ಟಿಗೆ ನೋಡಿದರು. ನಂತರ ಮದುವೆಯಾಗಲು ಕೂಡ ನಿರ್ಧರಿಸಿದ್ದಾರೆ.
ವೀಡಿಯೊವೊಂದರಲ್ಲಿ ಕ್ರಿಸ್ಟನ್ ಲೀಬರ್ಟ್, ಭಾರತೀಯ ವಧುವಿನ ಡ್ರೆಸ್ ಧರಿಸಿ, ವರಮಾಲಾ ಸಮಾರಂಭದಲ್ಲಿ ವರನ ಕುತ್ತಿಗೆಗೆ ಹಾರವನ್ನು ಹಾಕಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಭಾರತೀಯ ಯುವಕನನ್ನು ಮದುವೆಯಾಗಿರುವುದು ನನಗೆ ಸಂತೋಷವಾಗಿದೆ, ತಾನು ಭಾರತವನ್ನು ಪ್ರೀತಿಸುತ್ತೇನೆ ಎಂದು ಕ್ರಿಸ್ಟನ್ ಲೀಬರ್ಟ್ ಹೇಳಿದ್ದಾರೆ.ಮದುವೆಗೆ ವರನ ಮನೆಯವರು ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಮಕ್ಕಳ ಸಂತೋಷದಲ್ಲಿ ತಮ್ಮ ಸಂತೋಷ ಅಡಗಿದೆ ಎಂದು ವರನ ತಂದೆ ಗೀತಮ್ ಸಿಂಗ್ ಹೇಳಿದ್ದಾರೆ. “ಈ ಮದುವೆಗೆ ನಾವು ಸಂಪೂರ್ಣವಾಗಿ ಒಪ್ಪುತ್ತೇವೆ” ಎಂದು ಅವರು ಹೇಳಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement