ಫೈನಲ್‌ನಲ್ಲಿ ಇಂಗ್ಲೆಂಡ್ ಸೋಲಿಸಿ ಚೊಚ್ಚಲ U19 ಮಹಿಳಾ T20 ವಿಶ್ವಕಪ್‌ ಚಾಂಪಿಯನ್ ಆದ ಭಾರತ

ನವದೆಹಲಿ: ಶಫಾಲಿ ವರ್ಮಾ ನಾಯಕತ್ವದ ಭಾರತ, ದಕ್ಷಿಣ ಆಫ್ರಿಕಾದಲ್ಲಿ ನಡೆದ U19 ಮಹಿಳಾ T20 ಕಪ್‌ನ ಉದ್ಘಾಟನಾ ಪಂದ್ಯಾವಳಿಯಲ್ಲಿ ವಿಶ್ವ ಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ.
ಭಾನುವಾರ, ಜನವರಿ 29 ರಂದು ಪಾಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತವು ಗ್ರೇಸ್ ಸ್ಕ್ರಿವೆನ್ಸ್‌ ನಾಯಕತ್ವದ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು.
ಮೊದಲು ಫೀಲ್ಡಿಂಗ್ ಆಯ್ದುಕೊಂಡ ನಂತರ, ಭಾರತವು ತಮ್ಮ ಎದುರಾಳಿಗಳನ್ನು 17.1 ಓವರ್‌ಗಳಲ್ಲಿ ಕೇವಲ 68 ರನ್‌ಗಳ ಅಲ್ಪ ಸ್ಕೋರ್‌ಗೆ ಆಲ್‌ ಔಟ್ ಮಾಡುವ ಮೂಲಕ ಅತ್ಯುತ್ತಮ ಸಾಧನೆ ತೋರಿತು. ಒಮ್ಮೆ ಶಫಾಲಿ ನಾಯಕತ್ವದ ಮಹಿಳೆಯರು ಇಂಗ್ಲೆಂಡ್ ಅನ್ನು 6.2 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 22 ಕ್ಕೆ ಕುಸಿಯುವಂತೆ ಮಾಡಿದ್ದರು.
24 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 19 ರನ್ ಗಳಿಸಿದ ರಯಾನಾ ಮ್ಯಾಕ್‌ಡೊನಾಲ್ಡ್ ಇಂಗ್ಲೆಂಡ್ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಿಯಾಮ್ ಹಾಲೆಂಡ್, ಅಲೆಕ್ಸಾ ಸ್ಟೋನ್‌ಹೌಸ್ ಮತ್ತು ಸೋಫಿಯಾ ಸ್ಮೇಲ್ ಎರಡಂಕಿ ಗಳಿಸಿದರು, ಆದರೆ ಅದನ್ನು ಉತ್ತಮ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು.

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

ಭಾರತದ ಪರ ಟಿಟಾಸ್ ಸಾಧು, ಅರ್ಚನಾ ದೇವಿ ಮತ್ತು ಪಾರ್ಶವಿ ಚೋಪ್ರಾ ತಲಾ ಎರಡು ವಿಕೆಟ್ ಪಡೆದರು. ಸಾಧು ಅವರು 1.50 ಎಕಾನಮಿ ದರದಲ್ಲಿ ಕೇವಲ ಆರು ರನ್‌ಗಳನ್ನು ನೀಡಿಎರಡು ವಿಕೆಟ್‌ ಪಡೆದು ಭಾರತದ ಪರ ಯಶಸ್ವಿ ಬೌಲರ್‌ ಎನಿಸಿದರು. ಮನ್ನತ್ ಕಶ್ಯಪ್, ನಾಯಕ ಶಫಾಲಿ ಮತ್ತು ಸೋನಮ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಮೊದಲ ಎರಡು ಓವರ್‌ಗಳಲ್ಲಿ ಭಾರತ 16 ರನ್ ಗಳಿಸಿ ಶಫಾಲಿ ಮತ್ತು ಶ್ವೇತಾ ಸೆಹ್ರಾವತ್ ರನ್ ಚೇಸ್‌ನಲ್ಲಿ ಭರ್ಜರಿ ಆರಂಭ ಪಡೆದರು. ಹನ್ನಾ ಬೇಕರ್ ಅವರು 11 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ 15 ರನ್ ಗಳಿಸಿದ್ದ ಶಫಾಲಿಯನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್‌ಗೆ ಮೊದಲ ಯಶಸ್ಸು ನೀಡಿದರು.

ಪ್ರಮುಖ ರನ್ ಸ್ಕೋರರ್ ಆಗಿ ಪಂದ್ಯಾವಳಿಯನ್ನು ಮುಗಿಸಿದ ಶ್ವೇತಾ ಸೆಹ್ರಾವತ್, ಸ್ಕ್ರಿವೆನ್ಸ್‌ನ ಮೊದಲ ಬಲಿಯಾದರು. ಶ್ವೇತಾ ಏಳು ಪಂದ್ಯಗಳಿಂದ 99 ಸರಾಸರಿಯಲ್ಲಿ ಮೂರು ಅರ್ಧ ಶತಕಗಳೊಂದಿಗೆ 297 ರನ್ ಗಳಿಸಿದರು.
ಭಾರತ 3.4 ಓವರ್‌ಗಳಲ್ಲಿ 20ಕ್ಕೆ ಎರಡು ವಿಕೆಟ್ ಕಳೆದುಕೊಂಡ ನಂತರ ಸೌಮ್ಯ ತಿವಾರಿ ಮತ್ತು ಗೊಂಗಡಿ ತ್ರಿಶಾ ಭಾರತವನ್ನು ಅಂತಿಮ ಗೆರೆಯನ್ನು ದಾಟಿಸಿದರು. ತ್ರಿಶಾ 24 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಅಂತಿಮವಾಗಿ ಭಾರತ 36 ಎಸೆತಗಳು ಬಾಕಿ ಇರುವಂತೆಯೇ ಗುರಿ ಬೆನ್ನಟ್ಟಿತು. ಸೌಮ್ಯಾ 24 ರನ್ ಗಳಿಸಿ ಔಟಾಗದೆ ಉಳಿದರು.

ಪ್ರಮುಖ ಸುದ್ದಿ :-   ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಅಮೆರಿಕದಲ್ಲಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement