ಡಿಕೆಶಿ ವಿರುದ್ಧ ರಮೇಶ ಜಾರಕಿಹೊಳಿ ಸಮರ: ಯುವತಿ ಸೇರಿ ಸಿಡಿ ಗ್ಯಾಂಗ್ ಬಂಧಿಸಲು ಒತ್ತಾಯ

ಬೆಳಗಾವಿ: ರಮೇಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ಸಿಡಿ ವಿಚಾರದಲ್ಲಿ ಷಡ್ಯಂತ್ರ ರೂಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಆಶ್ರಯದಲ್ಲಿ ಆ ಯುವತಿ ಬೆಂಗಳೂರಿನಲ್ಲಿ ನೆಲೆಸಿದ್ದು, ಯುವತಿ ಸೇರಿದಂತೆ ಸಿಡಿ ಗ್ಯಾಂಗ್ ಅನ್ನು ಬಂಧಿಸಬೇಕು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್​ ರಾಜಕಾರಣ‌ ಮಾಡಲು ಯೋಗ್ಯರಲ್ಲ. ಷಡ್ಯಂತ್ರದ ಮೂಲಕ ರಾಜಕಾರಣ ಹಾಳು ಮಾಡುವ ಮತ್ತು ನನ್ನ ರಾಜಕೀಯ ಜೀವನ ಮುಗಿಸಲು ಪ್ರಯತ್ನಿಸಿರುವ ಡಿ.ಕೆ.ಶಿವಕುಮಾರ್​ ಅವರನ್ನು ಬಂಧಿಸಿದ ಬಳಿಕವೇ ರಾಜಕೀಯ ದಿಂದ ನಿವೃತ್ತಿ ಆಗುವುದಾಗಿ ಘೋಷಿಸಿದರು.
ರಾಜ್ಯದ ನೂರಾರು ಜನರ ಸಿಡಿ ಇಟ್ಟುಕೊಂಡು ಷಡ್ಯಂತ್ರ ರೂಪಿಸಿರುವ ಮಹಾನಾಯಕ ಡಿ.ಕೆ.‌ಶಿವಕುಮಾರ ಅವರನ್ನು ಕೂಡಲೇ ಬಂಧಿಸಬೇಕು. ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕು. ಸಿಡಿ ಯುವತಿ ಹಾಗೂ ಅವರಿಗೆ ಸಹಕರಿಸಿದ ಎಲ್ಲರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.
ಒಬ್ಬ ವ್ಯಕ್ತಿ ಜೀವನ ಹಾಳು ಮಾಡಿ ರಾಜಕೀಯ ಮಾಡುವ ಡಿಕೆ ಶಿವಕುಮಾರ್ ರಾಜಕೀಯ ಮಾಡಲು ಅಯೋಗ್ಯ ವ್ಯಕ್ತಿ. ನಾನು ವೈಯಕ್ತಿಕವಾಗಿ ಯಾರನ್ನೂ ದ್ವೇಷ ಮಾಡುವುದಿಲ್ಲ. ನಾನು ಯಾವುದೇ ಸಿಡಿ ರಿಲೀಜ್ ಮಾಡಲ್ಲ. ಜಾರಕಿಹೊಳಿ ಯಾವುದೇ ಗಾಳಿಯಲ್ಲಿ ಗುಂಡು ಹಾರಿಸಲ್ಲ. ಡಿಕೆ ಶಿವಕುಮಾರ್ ಒಬ್ಬ ಮಹಿಳೆ ಮುಖಾಂತರ ನನ್ನ ಜೀವನ ಹಾಳು ಮಾಡಿದ್ದಾರೆ. ಶಿವಕುಮಾರ್ ಅವರ ಆಡಿಯೋ ಝಲಕ್ ತೋರಿಸುತ್ತೇನೆ. ಸಿಡಿ ಲೇಡಿ ಅರೆಸ್ಟ್ ಮಾಡಿಸಿದರೆ ಎಲ್ಲಾ ಹೊರಗೆ ಬರುತ್ತದೆ. ಡಿಕೆಶಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಹಿಳಾ ಪದಾಧಿಕಾರಿ ಮನೆಯಲ್ಲಿ ಆ ಲೇಡಿ ಇದ್ದಾಳೆ. ಅವಳನ್ನು ಅರೆಸ್ಟ್ ಮಾಡಿ ಎಲ್ಲಾ ಹೊರಗೆ ಬರುತ್ತದೆ.ಎಂದರು.
ಸಿಡಿ ಪ್ರಕರಣದಲ್ಲಿ ನನ್ನ ಬಳಿ ಸಾಕಷ್ಟು ಸಾಕ್ಷಿಗಳಿವೆ.‌ ಡಿ.ಕೆ.‌ಶಿವಕುಮಾರ್ ಅವರೇ ಸಿಡಿ‌ ಪ್ರಕರಣದ ಸೂತ್ರದಾರ. ಈ ಕುರಿತು ಕೂಡಲೇ ಆಡಿಯೋ ಬಿಡುಗಡೆ ಮಾಡುವೆ. ಈ ವಿಷಯದಲ್ಲಿ ನಾನು ಯಾರಿಗೂ ಹೆದರುವುದಿಲ್ಲ. ಇದನ್ನು ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರದ‌ ಮೂಲಕ ಶಿಫಾರಸ್ಸು ಮಾಡುವಂತೆ ಒತ್ತಾಯಿಸುತ್ತೇನೆ. ಇದು ವೈಯಕ್ತಿಕ ವಿಷಯವಾಗಿರುವುದರಿಂದ ಪಕ್ಷದ ನಾಯಕರು, ಮುಖಂಡರಿಗೂ ಇದಕ್ಕೂ ಸಂಬಂಧ ಇಲ್ಲ ಎಂದರು.
ನೀರಾವರಿ ಇಲಾಖೆಯಲ್ಲಿ ಅಕ್ರಮಕ್ಕೆ ಅವಕಾಶ ಒದಗಿಸಿದ್ದರೆ ಈ ಸಿಡಿ ಹೊರಗೆ ಬರುತ್ತಿರಲಿಲ್ಲ. ನಾನು ಸಹಕಾರ ಸಚಿವನಾಗಿದ್ದಾಗ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಫೈಲ್ ಕ್ಲಿಯರ್ ಮಾಡಿ ಎಂದು ಡಿಕೆಶಿ ನನ್ನ ಬೆನ್ನು ಬಿದ್ದಿದ್ದರು. ನಾನು ಯಾವಾಗ ಫೈಲ್ ಕ್ಲಿಯರ್ ಮಾಡಲಿಲ್ಲವೋ ಅಲ್ಲಿಂದ ನನ್ನ ಮೇಲೆ ದ್ವೇಷ ಶುರುವಾಗಿದೆ ಎಂದು ರಮೇಶ ಜಾರಕಿಹೊಳಿ ಆರೋಪಿಸಿದ್ದಾರೆ.
ನನ್ನ ಬಳಿ ದುಬೈ ಹಾಗೂ ಲಂಡನ್ ನಲ್ಲಿ ಮನೆ ಇದೆ, ಸಾವಿರಾರು ಕೋಟಿ ಆಸ್ತಿ ಇದೆ ಎಂದು ಡಿಕೆಶಿ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ ಎಂದು ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದರು.
ಇನ್ನು, ನಾನು ಮತ್ತು ಡಿಕೆ ಶಿವಕುಮಾರ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದೆವು, ನಮ್ಮಿಬ್ಬರಿಗೂ ಒಳ್ಳೆಯ ರಾಜಕೀಯ ಭವಿಷ್ಯವಿತ್ತು. ಆದರೆ, ಗ್ರಾಮೀಣ ಶಾಸಕಿಯಿಂದ ನನ್ನ ಸಂಬಂಧ ಹಾಳಾಯಿತು, ಮುಂದೆ ಕಾಂಗ್ರೆಸ್ ಸರ್ವನಾಶವಾಗುವುದು ವಿಷಕನ್ಯೆಯಿಂದಲೇ ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಹೇಳದೆ ಕಿಡಿಕಾರಿದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟಿಸಿದ ಬಿಸಿಸಿಐ: ರವೀಂದ್ರ ಜಡೇಜಾಗೆ ಬಡ್ತಿ, ಕೆ.ಎಲ್‌. ರಾಹುಲ್‌ಗೆ ಭಾರೀ ಹಿನ್ನಡೆ-ಇಲ್ಲಿದೆ ಪಟ್ಟಿ

 

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement