ಅದಾನಿ ಷೇರು ಕುಸಿತದ ಬಗ್ಗೆ ಸಂಸದೀಯ ಸಮಿತಿ ತನಿಖೆಗೆ ಪ್ರತಿಪಕ್ಷಗಳ ಒತ್ತಾಯ

ನವದೆಹಲಿ : ಅಮೆರಿಕದ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್ ವಿರುದ್ಧ ಆಪಾದಿತ “ಆರ್ಥಿಕ ಹಗರಣ” ಕುರಿತು ಸಂಸದೀಯ ಸಮಿತಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ವಿರೋಧ ಪಕ್ಷಗಳು ಗುರುವಾರ ಒತ್ತಾಯಿಸಿವೆ.
ಸಂಸತ್ತಿನ ಬಜೆಟ್ ಅಧಿವೇಶನದ ಮೂರನೇ ದಿನದಂದು ಆರಂಭವಾದ ಕೆಲವೇ ಹೊತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯನ್ನು ಮುಂದೂಡಿದ ನಂತರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲಾಪದ ನೋಟಿಸ್ ಅಮಾನತುಗೊಳಿಸಿದ್ದಾರೆ. ಈ ವಿಷಯದ ಬಗ್ಗೆ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಲಾಯಿತು ಎಂದು ಹೇಳಿದರು.
ಎಲ್ಲಾ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಆರ್ಥಿಕ ಹಗರಣದ ವಿರುದ್ಧ ಧ್ವನಿ ಎತ್ತಲು ನಿರ್ಧರಿಸಿವೆ. ಎಲ್‌ಐಸಿ (LIC), ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವ ಸಮಸ್ಯೆ ಬಗ್ಗೆ ಚರ್ಚಿಸಲು ನಾವು ನಿಯಮ 267 ರ ಅಡಿಯಲ್ಲಿ ಕಲಾಪದಲ್ಲಿ ಚರ್ಚೆಗೆ ನೀಡಿದ ಸೂಚನೆ ತಿರಸ್ಕರಿಸಲಾಗಿದೆ. ಕೋಟ್ಯಂತರ ಭಾರತೀಯರ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅಪಾಯಕ್ಕೆ ಸಿಲುಕಿಸಲಾಗುತ್ತಿದೆ. ಆದರೆ ಪ್ರತಿ ಬಾರಿಯೂ ನಮ್ಮ ಸೂಚನೆಗಳನ್ನು ತಿರಸ್ಕರಿಸಲಾಗುತ್ತದೆ. ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದಾಗ ಚರ್ಚೆಗೆ ಸಮಯ ಸಿಗುವುದಿಲ್ಲ ಎಂದು ಆರೋಪಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

“ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್‌ನ ಸಿಜೆಐ ಮೇಲ್ವಿಚಾರಣೆಯಲ್ಲಿರುವ ಈ ಬಗ್ಗೆ ತನಿಖೆ ನಡೆಸಬೇಕು” ಎಂದು ಖರ್ಗೆ ಒತ್ತಾಯಿಸಿದರು.
ರಾಜ್ಯಸಭೆ ಪ್ರತಿಫಕ್ಷದ ನಾಯಕರು “ಅಂತಹ ಕಂಪನಿಗಳಿಗೆ” ಹಣ ಸಾಲ ನೀಡುವ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿತು ಮತ್ತು ಹಣವನ್ನು ಸಾಲ ನೀಡಲು ಬ್ಯಾಂಕುಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು.
“ಪ್ರತಿಷ್ಠಿತ ಸಂಸ್ಥೆಯಾದ ಎಲ್‌ಐಸಿಯಲ್ಲಿ ಕೋಟಿಗಟ್ಟಲೆ ಜನರು ಹೂಡಿಕೆ ಮಾಡುತ್ತಾರೆ. ಒಬ್ಬ ವ್ಯಕ್ತಿಗೆ ಪದೇ ಪದೇ ಸೂಚಿಸುವ ಬದಲು, ಅಂತಹ ಕಂಪನಿಗಳಿಗೆ ಸರ್ಕಾರವು ಹೇಗೆ ಹಣವನ್ನು ನೀಡುತ್ತಿದೆ ಎಂದು ನಾವು ಕೇಳುತ್ತೇವೆ. ಅಂತಹ ಕಂಪನಿಗಳಿಗೆ ಹಣವನ್ನು ಸಾಲವಾಗಿ ನೀಡಲು ಸರ್ಕಾರವು ಏಕೆ ಒತ್ತಡ ಹೇರುತ್ತಿದೆ ಎಂದು ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಖರ್ಗೆ ಹೇಳಿದರು.
ಸಂಸತ್ತಿನ ದಿನದ ಅಧಿವೇಶನ ಪ್ರಾರಂಭವಾಗುವ ಮೊದಲು ಸಮಾನ ಮನಸ್ಕ ವಿರೋಧ ಪಕ್ಷಗಳು ಖರ್ಗೆ ಅವರ ಕೊಠಡಿಯಲ್ಲಿ ದಿನದ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಸಭೆ ನಡೆಸಿದರು.
ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ಸಿಪಿಐ(ಎಂ) ನಾಯಕ ಎಂ.ಪಿ. ಎಳಮರಮ್ ಕರೀಂ, ಶಿವಸೇನಾ ಸಂಸದ (ಉದ್ಧವ್ ಠಾಕ್ರೆ ಬಣ) ಪ್ರಿಯಾಂಕಾ ಚತುರ್ವೇದಿ, ಸಿಪಿಐ ರಾಜ್ಯಸಭಾ ಸಂಸದ ಬಿನೋಯ್ ವಿಶ್ವಂ, ಲೋಕಸಭೆ ಸಂಸದ ನಾಮ ನಾಗೇಶ್ವರ ರಾವ್, ಬಿಆರ್‌ಎಸ್ ರಾಜ್ಯಸಭಾ ಸಂಸದ ಕೆ.ಕೇಶವ ರಾವ್, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಸೇರಿದಂತೆ ಸದನಗಳಲ್ಲಿ ನೋಟಿಸ್ ನೀಡಿದ ನಾಯಕರಾಗಿದ್ದಾರೆ.
ಅಧಿವೇಶನದ ಮೊದಲ ಅವಧಿ ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದೆ. ಬಜೆಟ್ ಅಧಿವೇಶನದ ಎರಡನೇ ಅವಧಿ ಮಾರ್ಚ್ 12 ರಂದು ಸೇರಲಿದ್ದು, ಏಪ್ರಿಲ್ 6 ರಂದು ಮುಕ್ತಾಯವಾಗಲಿದೆ.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement