ವಿಶ್ವದ ಟಾಪ್‌ 15 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದ ಗೌತಮ್‌ ಅದಾನಿ…! ಈಗ ಮುಕೇಶ ಅಂಬಾನಿ ಏಷ್ಯಾದ ನಂ.1 ಶ್ರೀಮಂತ

ನವದೆಹಲಿ : ಕಳೆದ ಕೆಲ ದಿನಗಳಿಂದ ಅದಾನಿ ಗ್ರೂಪ್‌ ಷೇರುಗಳು ಭಾರೀ ಕುಸಿತ ಕಾಣುತ್ತಿವೆ. ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಕ್ಯಾಪ್ ಸುಮಾರು $ 100 ಬಿಲಿಯನ್‌ನಷ್ಟು ಕುಸಿದಿದೆ.
ಕಳೆದ ವಾರ ಅಮೆರಿಕ (US) ಮೂಲದ ಶಾರ್ಟ್‌ ಸೆಲ್ಲರ್‌ ಸಂಸ್ಥೆ ‘ಹಿಂಡೆನ್‌ಬರ್ಗ್ ರಿಸರ್ಚ್‌’ನ ವರದಿಯು ಅದಾನಿ ಗ್ರೂಪ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಖಾತೆ ವಂಚನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದೆ. ಈ ವರದಿ ಪ್ರಕಟವಾದ ದಿನದಿಂದಲೂ ಅದಾನಿ ಗ್ರೂಪ್‌ನ ಷೇರುಗಳು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಾಣುತ್ತಿವೆ. ಹಾಗೂ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ನಿವ್ವಳ ಮೌಲ್ಯವು ಶೇಕಡಾ 27 ಕ್ಕಿಂತ ಹೆಚ್ಚು ಕುಸಿದಿದೆ ಎಂದು ವರದಿಗಳು ಹೇಳಿವೆ.
ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ವರದಿ ಪ್ರಕಾರ, ಗೌತಮ್‌ ಅದಾನಿ ಅವರ ನಿವ್ವಳ ಮೌಲ್ಯವು ಇಳಿಕೆಯಾಗಿದ್ದು, ಗೌತಮ್‌ ಅದಾನಿ ಅವರು ವಿಶ್ವದ ಟಾಪ್‌ 15 ಶ್ರೀಮಂತರ ಪಟ್ಟಿಯಿಂದಲೂ ಹೊಬಿದ್ದಿದ್ದಾರೆ ಹಾಗೂ 16ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ವರದಿ ಬರುವ ಮೊದಲು, ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಆದರೆ ಕಳೆದ ಕೆಲದಿನಗಳಿಂದ ಅವರ ಕಂಪನಿ ಶೇರುಗಳು ಕುಸಿತ ಕಂಡ ನಂತರ ಏಷ್ಯಾದ ಟಾಪ್‌ ಶ್ರೀಮಂತರ ಪಟ್ಟಿಯಲ್ಲೂ ಅವರು 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಪ್ರಮುಖ ಸುದ್ದಿ :-   ಚುನಾವಣಾ ಬಾಂಡ್, ಉತ್ತರ ಭಾರತ-ದಕ್ಷಿಣ ಭಾರತ ಚರ್ಚೆ, ಸಿಬಿಐ - ಇ.ಡಿ. ದುರ್ಬಳಕೆ ಆರೋಪ, ಬಿಜೆಪಿ ಮಾಡೆಲ್-ಕಾಂಗ್ರೆಸ್‌ ಮಾಡೆಲ್‌ ಬಗ್ಗೆ ಮೋದಿ ಹೇಳಿದ್ದೇನು..?

ವಿಶ್ವದ ಟಾಪ್‌ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಗೆ 10ನೇ ಸ್ಥಾನ
ವಿಶ್ವದ ಟಾಪ್‌ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ (mukesh ambani) 10 ನೇ ಸ್ಥಾನದಲ್ಲಿದ್ದಾರೆ ಹಾಗೂ ಚೀನಾದ ಜಾಂಗ್ ಶಂಶಾನ್‌ 15 ನೇ ಸ್ಥಾನದಲ್ಲಿದ್ದಾರೆ. ಮುಕೇಶ್‌ ಅಂಬಾನಿ ಈಗ ಏಷ್ಯಾದ ಅಗ್ರ ಶ್ರೀಮಂತ ವ್ಯಕ್ತಿಯಾದರೆ ಚೀನಾದ ಶಂಶಾನ್ ಎರಡನೇ ಸ್ಥಾನದಲ್ಲಿದ್ದಾರೆ. ಏಷ್ಯನ್ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಹಿಂಡೆನ್‌ಬರ್ಗ್ ರಿಸರ್ಚ್ ವರದಿ ನಿರಾಕರಿಸಿರುವ ಅದಾನಿ
ಆದರೆ, ಹಿಂಡೆನ್‌ಬರ್ಗ್ ರಿಸರ್ಚ್ ವರದಿಯನ್ನು ಸುಳ್ಳಿನ ಕಂತೆ ಎಂದು ಅದಾನಿ ಗ್ರೂಪ್ ಬಣ್ಣಿಸಿದೆ. ಆದರೆ, ಹೂಡಿಕೆದಾರರ ವಿಶ್ವಾಸ ಗಳಿಸುವಲ್ಲಿ ಅದಾನಿ ಸಮೂಹ ವಿಫಲವಾಗಿದೆ. ಬುಧವಾರವೂ ಕಂಪನಿಗಳ ಶೇರುಗಳು ಕುಸಿತ ಕಂಡ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್‌ ತನ್ನ ಪ್ರಮುಖ ಕಂಪನಿ ಅದಾನಿ ಎಂಟರ್‌ಪ್ರೈಸಸ್‌ನ 20,000 ಕೋಟಿ ಎಫ್‌ಪಿಒ ಹಿಂಪಡೆದಿದೆ. ಈ ಕುರಿತು ಸ್ವತಃ ಗೌತಮ್‌ ಅದಾನಿ ಅವರೇ ವೀಡಿಯೊ ಸಂದೇಶ ನೀಡಿದ್ದಾರೆ. ಹಾಗೂ ಹೂಡಿಕೆದಾರರಿಗೆ ಅದಾನಿ ಗ್ರೂಪ್‌ ಮೇಲೆ ನಂಬಿಕೆ ಇಡುವಂತೆ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024: ಮೊದಲ ಹಂತದ ಮತದಾನಕ್ಕೆ ಮುನ್ನವೇ 2019ರ ಚುನಾವಣೆಗಿಂತ ಹೆಚ್ಚು ಮೌಲ್ಯದ ಸ್ವತ್ತು ವಶಕ್ಕೆ ಪಡೆದ ಚುನಾವಣಾ ಆಯೋಗ; ಎಷ್ಟು ಗೊತ್ತಾ..?

ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಬುಧವಾರ ಶೇ.25ರಷ್ಟು ಕುಸಿದಿತ್ತು. ಗುರುವಾರ ಕೂಡ ಶೇ.21ರಷ್ಟು ಕುಸಿದಿತ್ತು. ಅದಾನಿ ಎಂಟರ್‌ಪ್ರೈಸಸ್ ಷೇರು ಕಳೆದ 5 ವರ್ಷಗಳಲ್ಲಿ ಶೇ.800 ರಷ್ಟು ಏರಿಕೆ ಕಂಡಿತ್ತು. ಆದರೆ, ಕಳೆದ 5 ದಿನಗಳಲ್ಲಿ ಶೇ.40ಕ್ಕೂ ಹೆಚ್ಚು ಕುಸಿತ ಕಂಡಿದೆ.
ಅದಾನಿ ಪವರ್‌ನಲ್ಲಿ ಶೇ. 5, ಅದಾನಿ ಪೋರ್ಟ್ಸ್‌ನಲ್ಲಿ ಶೇಕಡಾ 3.74, ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಶೇಕಡಾ 10, ಅದಾನಿ ಗ್ರೀನ್ ಎನರ್ಜಿ, ಎಸಿಸಿ ಲಿಮಿಟೆಡ್‌ನಲ್ಲಿ ಶೇಕಡಾ 10) ಶೇಕಡಾ 0.29, ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 10 ರಷ್ಟು ಕುಸಿದಿದೆ. ಎನ್‌ಡಿಟಿವಿ ಶೇ.5 ಮತ್ತು ಅದಾನಿ ವಿಲ್ಮಾರ್ ಶೇ. 5ರಷ್ಟು ಕುಸಿತ ಕಂಡಿದೆ. ಅಂಬುಜಾ ಸಿಮೆಂಟ್ಸ್ ಮಾತ್ರ ಶೇ.3.12 ಗಳಿಕೆ ಕಂಡಿದೆ. ಬುಧವಾರ ಎಲ್ಲ 10 ಕಂಪನಿಗಳ ಷೇರುಗಳು ಕುಸಿದಿದ್ದವು.

 

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement