ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಹಾಡಹಗಲೇ ಚೂರಿಯಿಂದ ಇರಿದು ಸಿಬ್ಬಂದಿ ಕೊಲೆ

ಮಂಗಳೂರು : ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿಗೆ ಚೂರಿ ಇರಿದ ಕೊಲೆ ಮಾಡಿರುವ ಘಟನೆ ನಗರದ ಹಂಪನಕಟ್ಟೆ ಮಿಲಾಗ್ರಿಸ್ ಸಮೀಪ ಶುಕ್ರವಾರ ನಡೆದ ವರದಿಯಾಗಿದೆ.
ಕೊಲೆಯಾದ ಸಿಬ್ಬಂದಿಯನ್ನು ಜುವೆಲ್ಲರಿ ಉದ್ಯೋಗಿ, ಅತ್ತಾವರ ನಿವಾಸಿ ರಾಘವೇಂದ್ರ (52) ಎಂದು ಹೇಳಲಾಗಿದೆ. ಮಧ್ಯಾಹ್ನ ಮುಸುಕು ಹಾಕಿಕೊಂಡು ಬಂದಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದು, ಜ್ಯುವೆಲ್ಲರಿ ಮಾಲೀಕ ಊಟಕ್ಕೆಂದು ತೆರಳಿದ್ದಾಗ ಮುಸಕುಕುಧಾರಿ ವ್ಯಕ್ತಿ ಬಂದಿದ್ದ ಎನ್ನಲಾಗಿದ್ದು, ಮಾಲಕ ಬರುವಷ್ಟರಲ್ಲಿ ಚೂರಿ ಇರಿದು ಪರಾರಿಯಾಗಿದ್ದಾನೆ. ಊಟ ಮುಗಿಸಿ ಮಾಲೀಕ ಚಿನ್ನಾಭರಣದ ಅಂಗಡಿಗೆ ಮರಳಿದಾಗ ಈ ಘಟನೆ ಗಮನಕ್ಕೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿಬ್ಬಖದಯನ್ನು ತಕ್ಷಣವೇ ವೆನ್ಲಾಕ್ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಜ್ಯುವೆಲ್ಲರಿಯ ಸಿಸಿ ಕ್ಯಾಮೆರಾದಲ್ಲಿ ಕೊಲೆ ಕೃತ್ಯ ದಾಖಲಾಗಿದ್ದು, ಪರಿಶೀಲನೆ ನಡೆಯುತ್ತಿದೆ. ಜ್ಯುವೆಲ್ಲರಿಯಿಂದ ಓರ್ವ ಮುಸುಕುಧಾರಿ ಹೊರಗೆ ಬರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎನ್ನಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement