ಮೊರ್ಬಿ ಸೇತುವೆ ಕುಸಿತ ಪ್ರಕರಣ: ಏಳು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಮೊರ್ಬಿ: ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ತೂಗು ಸೇತುವೆ ಕುಸಿದು 135 ಜನರು ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಏಳು ಜನ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.
ಸೇತುವೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಗುತ್ತಿಗೆ ಪಡೆದ ಕಂಪನಿ ಒರೆವಾ ಗ್ರೂಪ್‌ನ ಇಬ್ಬರು ವ್ಯವಸ್ಥಾಪಕರು ಸೇರಿದಂತೆ ಏಳು ಆರೋಪಿಗಳಿಗೆ ಜಾಮೀನು ನೀಡಲು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಪಿ ಸಿ ಜೋಶಿ ನಿರಾಕರಿಸಿದರು.
ಮಚ್ಚು ನದಿಯ ಮೇಲಿನ ಬ್ರಿಟಿಷರ ಕಾಲದ ಸೇತುವೆಯು ಅಕ್ಟೋಬರ್ 30, 2022 ರಂದು ಕುಸಿದು ಬಿದ್ದಿತು. ದುರಸ್ತಿ ನಂತರ ಅದನ್ನು ಪುನಃ ತೆರೆಯಲಾಗಿತ್ತು.
ಒರೆವಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್, ಬಂಧನಕ್ಕೂ ಮುನ್ನ ಫೆಬ್ರವರಿ 1 ರಂದು ಇಲ್ಲಿನ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಮೊರ್ಬಿ ಪೊಲೀಸರು ಕಳೆದ ವಾರ ಪ್ರಕರಣದ ಆರೋಪಪಟ್ಟಿ ಸಲ್ಲಿಸಿದ್ದು, ಪಟೇಲ್ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. ಇತರ ಒಂಬತ್ತು ಮಂದಿ ಬಂಧಿತರಲ್ಲಿ ಸಂಸ್ಥೆಯ ಇಬ್ಬರು ಮ್ಯಾನೇಜರ್‌ಗಳು, ಇಬ್ಬರು ಟಿಕೆಟ್ ಬುಕ್ಕಿಂಗ್ ಕ್ಲರ್ಕ್‌ಗಳು, ಮೂವರು ಭದ್ರತಾ ಸಿಬ್ಬಂದಿ ಮತ್ತು ಒರೆವಾ ಗ್ರೂಪ್‌ನಿಂದ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಉಪ ಗುತ್ತಿಗೆದಾರರು ಸೇರಿದ್ದಾರೆ.
ಈ ಒಂಬತ್ತು ಮಂದಿಯ ಜಾಮೀನು ಅರ್ಜಿಯನ್ನು ಈ ಹಿಂದೆ ಗುಜರಾತ್ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.
ಇಬ್ಬರು ಉಪ ಗುತ್ತಿಗೆದಾರರನ್ನು ಹೊರತುಪಡಿಸಿ ಉಳಿದ ಏಳು ಮಂದಿ ಗುರುವಾರ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿಂದೆ, ಕುಸಿತದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ), ಸಂಸ್ಥೆಯ ಕಡೆಯಿಂದ ಹಲವಾರು ಲೋಪಗಳನ್ನು ಉಲ್ಲೇಖಿಸಿತ್ತು. ಜನಪ್ರಿಯ ಪ್ರವಾಸಿ ತಾಣವಾದ ತೂಗು ಸೇತುವೆಯ ಮೇಲೆ ಸುಮಾರು 250 ಮಂದಿ ಇದ್ದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಎಸ್‌ಐಟಿ ಪ್ರಕಾರ, ಸೇತುವೆ ಪ್ರವೇಶಿಸುವ ವ್ಯಕ್ತಿಗಳ ಸಂಖ್ಯೆಯ ಮೇಲೆ ನಿರ್ಬಂಧ ವಿಧಿಸದೆ ಇರುವುದು ತೂಗು ಮೇಲೆ ಅನಿಯಂತ್ರಿತ ಚಲನೆಗೆ ಕಾರಣವಾಯಿತು ಮತ್ತು ತಜ್ಞರನ್ನು ಸಂಪರ್ಕಿಸದೆ ರಿಪೇರಿ ಕಾರ್ಯ ನಡೆಸಿದ್ದನ್ನು ಉಲ್ಲೇಖಿಸಲಾಗಿದೆ.
ಸಂಸ್ಥೆಯು ಮಾಡಿದ ಹೊಸ ಲೋಹದ ನೆಲಹಾಸು ರಚನೆಯ ತೂಕವನ್ನು ಹೆಚ್ಚಿಸಿದೆ ಮತ್ತು ಸಂಪೂರ್ಣ ತೂಗು ಸೇತುವೆಯ ತುಕ್ಕು ಹಿಡಿದ ಕೇಬಲ್‌ಗಳನ್ನು ಬದಲಾಯಿಸಿಲ್ಲ ಎಂದು ತನಿಖೆಯು ಬಹಿರಂಗಪಡಿಸಿದೆ. ಇದಲ್ಲದೆ, ಪಟೇಲ್ ಅವರ ಸಂಸ್ಥೆಯಿಂದ ಗುತ್ತಿಗೆ ಪಡೆದ ಗುತ್ತಿಗೆದಾರರು ಅಂತಹ ದುರಸ್ತಿ ಮತ್ತು ನವೀಕರಣ ಕಾರ್ಯಗಳನ್ನು ಕೈಗೊಳ್ಳಲು ಅರ್ಹರಲ್ಲ ಎಂದು ಎಸ್‌ಐಟಿ ಹೇಳಿದೆ.
ದುರಸ್ತಿ ಮತ್ತು ನವೀಕರಣ ಕಾರ್ಯದ ನಂತರ ಸಾರ್ವಜನಿಕರಿಗೆ ಹೋಗಲು ಮುಕ್ತ ಮಾಡುವ ಮೊದಲು ಕ್ಯಾರೇಜ್‌ವೇಯ ಭಾರ ಹೊರುವ ಸಾಮರ್ಥ್ಯವನ್ನು ನಿರ್ಣಯಿಸಲು ಒರೆವಾ ಗ್ರೂಪ್ ಯಾವುದೇ ಪರಿಣಿತ ಏಜೆನ್ಸಿ ನೇಮಿಸಿಕೊಂಡಿಲ್ಲ ಎಂದು ತನಿಖಾ ವರದಿಯು ಬಹಿರಂಗಪಡಿಸಿದೆ.
ಕುಸಿದ ದಿನವೇ ಸಂಸ್ಥೆಯು 3,165 ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಮತ್ತು ಸೇತುವೆಯ ಎರಡೂ ಬದಿಯಲ್ಲಿರುವ ಟಿಕೆಟ್ ಬುಕಿಂಗ್ ಕಚೇರಿಗಳ ನಡುವೆ ಯಾವುದೇ ಸಮನ್ವಯವಿಲ್ಲ ಎಂದು ಪ್ರಾಸಿಕ್ಯೂಷನ್ ಈ ಹಿಂದೆ ಕೆಳ ನ್ಯಾಯಾಲಯಕ್ಕೆ ತಿಳಿಸಿತ್ತು.
ಜೈಸುಖ್ ಪಟೇಲ್ ಸೇರಿದಂತೆ ಎಲ್ಲಾ 10 ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ), 308 (ಅಪರಾಧೀಯ ನರಹತ್ಯೆ ಮಾಡಲು ಯತ್ನ), 336 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಕೃತ್ಯ), 337 (ನೋವು ಉಂಟುಮಾಡುವ ಕೃತ್ಯ), ಯಾವುದೇ ದುಡುಕಿನ ಅಥವಾ ನಿರ್ಲಕ್ಷ್ಯದ ಕ್ರಿಯೆಯನ್ನು ಮಾಡುವ ಮೂಲಕ ಯಾವುದೇ ವ್ಯಕ್ತಿ) ಮತ್ತು 338 (ದುಡುಕು ಅಥವಾ ನಿರ್ಲಕ್ಷ್ಯದ ಕ್ರಿಯೆಯಿಂದ ಘೋರವಾದ ಗಾಯವನ್ನು ಉಂಟುಮಾಡುವುದು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement