ಗಾಯಕಿ ವಾಣಿ ಜಯರಾಮ್ ನಿಗೂಢ ಸಾವು: ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ ?

ಚೆನ್ನೈ: ಫೆಬ್ರವರಿ 4 ರಂದು, ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಅವರು ಚೆನ್ನೈನ ನುಂಗಂಬಾಕ್ಕಂನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರ ಹಣೆಯ ಮೇಲೆ ಗಾಯದ ಕಂಡುಬಂದ ನಂತರ ಅನುಮಾನಾಸ್ಪದ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈಗ ಅವರ ಮರಣೋತ್ತರ ಪರೀಕ್ಷೆಯು ಹೊರಬಿದ್ದಿದೆ. ಪೊಲೀಸರು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯು ಪ್ರಕಾರ, ಗಾಯಕಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎಂದು ಸೂಚಿಸುತ್ತದೆ. ಅವರ ಸಾವಿನಲ್ಲಿ ಯಾವುದೇ ಅನುಮಾನಗಳು ಇಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಸಾವಿನ ಸಮಯದಲ್ಲಿ ಗಾಯಕಿ ಒಬ್ಬಂಟಿಯಾಗಿದ್ದರು ಮತ್ತು ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಪೊಲೀಸರು ಅವರ ಮನೆ ಬಳಿಯಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ. “ಮನೆಯೊಳಗೆ ಯಾವುದೇ ಬಲವಂತದ ಪ್ರವೇಶದ ಯಾವುದೇ ಲಕ್ಷಣಗಳಿಲ್ಲ” ಎಂದು ಪೊಲೀಸರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ವಾಣಿ ಜಯರಾಂ ಅವರ ತಲೆಗೆ ಬಲವಾದ ಗಾಯವಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಆಕಸ್ಮಾತ್ ಆಗಿ ವಾಣಿ ಅವರು ಜಾರಿಬಿದ್ದು ಮನೆಯಲ್ಲಿರುವ ಮರದ ಟೇಬಲ್‌ಗೆ ತಲೆ ಬಡಿಸಿಕೊಂಡಿದ್ದಾರೆ. ಅದರಿಂದಾಗಿ ಅವರ ಹಣೆಗೆ ಬಲವಾದ ಪೆಟ್ಟು ಬಿದ್ದು ಸುಮಾರು ಒಂದೂವರೆ ಇಂಚಿನಷ್ಟ ಆಳವಾದ ಗಾಯವಾಗಿದೆ. ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಿರಿಯ ಗಾಯಕಿಯ ಪಾರ್ಥಿವ ಶರೀರವನ್ನು ಶನಿವಾರ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು ಮತ್ತು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ಪದ್ಮಭೂಷಣ ಪುರಸ್ಕೃತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್‌ ಅವರು ಶನಿವಾರ ತನ್ನ ಡೌನ್‌ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ನಂತರ ಅವರ ಮನೆಯ ಕೆಲಸ ಮಾಡುವ ಮಹಿಳೆ ಬೆಳಿಗ್ಗೆ ಬಂದು ಬೆಲ್‌ ಮಾಡಿದಾಗ ಯಾವುದೇ ಪ್ರತಿಕ್ರಿಯೆಗಳಿಲ್ಲದ ಕಾರಣ ಅವರು ಸಹೋದರಿ ಉಷಾ ಅವರಿಗೆ ಮಾಹಿತಿ ನೀಡಿದ್ದರು. ಅವರು ಬಂದು ನಕಲಿ ಕೀ ಬಳಸಿ ಒಳಗೆ ಪ್ರವೇಶ ಮಾಡಿದಾಗ ವಾಣಿ ಜಯರಾಮ್‌ ಅವರು ಬೆಡ್‌ ರೂಮಿನಲ್ಲಿ ನೆಲಕ್ಕೆ ಬಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಹಣೆಗೆ ಗಾಯದ ಗುರುತುಗಳಿದ್ದವು. ಅವರ ದೇಹವನ್ನು ಆಸ್ಪತ್ರೆಗೆ ರವಾನಿ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ್ದರು.
ವಾಣಿ ಜಯರಾಂ ಪತಿ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ವಾಣಿ ಜಯರಾಂ ಒಬ್ಬರೇ ವಾಸಿಸುತ್ತಿದ್ದರು.
ವಾಣಿ ಅವರು ಐದು ದಶಕಗಳಿಗೂ ಹೆಚ್ಚು ಕಾಲದ ಶ್ರೇಷ್ಠ ವೃತ್ತಿಜೀವನ ಹೊಂದಿದ್ದರು. ಹಿಂದಿ ಚಿತ್ರ ಗುಡ್ಡಿ (1971), ತಮಿಳು ಚಲನಚಿತ್ರ ಅಪೂರ್ವ ರಾಗಂಗಲ್ (1975) ನಿಂದ ಏಳು ಸ್ವರಂಗಳುಕ್ಕುಲ್ ಮತ್ತು ಮಲ್ಲಿಗೈ ಎನ್ ಮನ್ನನ್ ಮಯಂಗುಮ್ (1974 ತಮಿಳು ಚಲನಚಿತ್ರ ದೀರ್ಗ ಸುಮಂಗಲಿ) ಸೇರಿದಂತೆ ಅನೇಕ ಸ್ಮರಣೀಯ ಹಾಡುಗಳಿಗೆ ಅವರು ತಮ್ಮ ಮಧುರ ಧ್ವನಿಯನ್ನು ನೀಡಿದ್ದಾರೆ.
ಅವರು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ 10,000 ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಆರ್‌ಡಿ ಬರ್ಮನ್, ಮದನ್ ಮೋಹನ್, ಒಪಿ ನಯ್ಯರ್, ಎಂ ಎಸ್ ವಿಶ್ವನಾಥನ್ ಮತ್ತು ಇಳಯರಾಜ ಸೇರಿದಂತೆ ಖ್ಯಾತನಾಮ ಸಂಗೀತ ಸಂಯೋಜಕರು ಮತ್ತು ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದಾರೆ. ಸಿನೆಮಾ ಹಿನ್ನೆಲೆ ಗಾಯನಕ್ಕೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement