ಟರ್ಕಿ-ಸಿರಿಯಾ ಭೂಕಂಪ : ಅವಶೇಷಗಳಡಿ ತನ್ನ ತೋಳಲ್ಲಿ ಆಸರೆ ನೀಡಿ ಪುಟ್ಟ ತಮ್ಮನನ್ನು17 ತಾಸು ರಕ್ಷಿಸಿದ 7 ವರ್ಷದ ಬಾಲಕಿ | ವೀಡಿಯೊ ವೈರಲ್‌

ಭೂಕಂಪನದಿಂದ ನಲುಗಿರುವ ಟರ್ಕಿ-ಸಿರಿಯಾದ ಜನರ ಸ್ಥಿತಿ ಮನಕಲಕುವಂತಿದೆ. ಪ್ರಬಲ ಭೂಕಂಪದ ನಂತರ ಕುಸಿದು ಬಿದ್ದ ಮನೆಯ ಅವಶೇಷಗಳಡಿಯಲ್ಲಿ ಏಳು ವರ್ಷದ ಸಿರಿಯಾದ ಬಾಲಕಿ ತನ್ನ ಚಿಕ್ಕ ಸಹೋದರನ ರಕ್ಷಿಸಲು ಪಟ್ಟ ಶ್ರಮದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಪುಟ್ಟ ಮಗುವಿನ ಹೃದಯ ವೈಶಾಲ್ಯತೆಗೆ ಹಿಡಿದ ಕನ್ನಡಿಯಂತಿದೆ.
ಭೂಕಂಪನದಿಂದಾಗಿ ಸಿರಿಯಾದಲ್ಲಿ ಕುಸಿತಗೊಂಡ ಕಟ್ಟಡದ ಅವಶೇಷಗಳಡಿಯಲ್ಲಿ ಅಕ್ಕ ಮತ್ತು ತಮ್ಮ ಇಬ್ಬರೂ ಸಿಲುಕಿಕೊಂಡಿದ್ದಾರೆ. ಈ ವೇಳೆ ತನ್ನ ಪುಟ್ಟ ತಮ್ಮನಿಗೆ ಏನೂ ಆಗದಿರಲೆಂದು 7 ವರ್ಷದ ಈ ಪುಟ್ಟ ಅಕ್ಕ ತನ್ನ ಕೈಯನ್ನು ರಕ್ಷಣಾತ್ಮಕವಾಗಿ ಚಾಚಿಕೊಂಡು ಅದರ ಮೇಲೆ ತಮ್ಮನ ತಲೆ ಇಟ್ಟುಕೊಂಡಿರುವ ವೀಡಿಯೊ ಮನಕಲಕುವಂತಿದೆ. ಅತ್ಯಂತ ಕಷ್ಟದ ಸಮಯದಲ್ಲಿಯೂ 7 ವರ್ಷದ ಈ ಪುಟ್ಟ ಬಾಲಕಿ ತನ್ನ ತಮ್ಮನ ರಕ್ಷಣೆಯ ಜವಾಬ್ದಾರಿ ಹೊತ್ತ ಇದು ಭಾವನಾತ್ಮಕವಾಗಿದೆ.
ಫೋಟೋವನ್ನು ವ್ಲೋಗಿಂಗ್‌ ನಾರ್ಥ್‌ವೆಸ್ಟರ್ನ್‌ ಸಿರಿಯಾ (Vlogging Northwestern Syria) ಎಂಬವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಟ್ಟಡಿಗಳಿಯಲ್ಲಿ ಚಿಕ್ಕ ಸಂದಿಯಲ್ಲಿ ಸಿಲುಕೊಂಡಿದ್ದ ಅಕ್ಕ ಮತ್ತು ತಮ್ಮ 17 ಗಂಟೆ ಕಾಲ ಈ ಸ್ಥಿತಿಯಲ್ಲಿ ಕಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವವರು ಅವರಿಬ್ಬರನ್ನೂ ರಕ್ಷಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಪ್ರಮುಖ ಸುದ್ದಿ :-   ಪಾಕಿಸ್ತಾನ ಸೇನೆಯ ವಕ್ತಾರ ಅಹ್ಮದ್ ಶರೀಫ್ ಚೌಧರಿ ವಿಶ್ವಸಂಸ್ಥೆಯಿಂದ ಘೋಷಿತ ಭಯೋತ್ಪಾದಕನ ಮಗ...!

ಮತ್ತೊಂದು ಟ್ವೀಟ್‌ನಲ್ಲಿ, ವಿಶ್ವಸಂಸ್ಥೆಯ (ಯುಎನ್) ಪ್ರತಿನಿಧಿ ಮೊಹಮ್ಮದ್ ಸಫಾ ಅವರು, ಬಾಲಕಿ ಮತ್ತು ಅವಳ ತಮ್ಮ 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದರು. “17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದಾಗ ತನ್ನ ತಮ್ಮನ ತಲೆಯ ಸುತ್ತಮ ಕೈಯಿಟ್ಟು ರಕ್ಷಿಸಿದ 7 ವರ್ಷದ ಬಾಲಕಿ ಆತನನ್ನು ಸುರಕ್ಷಿತವಾಗಿ ಇಟ್ಟಿದ್ದಾಳೆ. ಇದನ್ನು ಯಾರೂ ಹಂಚಿಕೊಳ್ಳದಿರುವುದನ್ನು ನಾನು ನೋಡುತ್ತೇನೆ. ಅವಳು ಸತ್ತಿದ್ದರೆ ಎಲ್ಲರೂ ಹಂಚಿಕೊಳ್ಳುತ್ತಾರೆ! ಸಕಾರಾತ್ಮಕತೆಯನ್ನು ಶೇರ್ ಮಾಡಿ ಸಕಾರಾತ್ಮಕತೆ…” ಎಂದು ಬರೆದಿದ್ದಾರೆ.
ವೀಡಿಯೊ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಜಕ್ಕೂ ಇದೊಂದು ಪವಾಡ ಎಂದು ನೆಟ್ಟಿಗರು ಬರೆದಿದ್ದಾರೆ. ಆ ಬಾಲಕಿ ಪುಟ್ಟ ಹೀರೋ ಎಂಬುದಾಗಿಯೂ ಹಲವರು ಕಮೆಂಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಪದಚ್ಯುತ ಮಾಜಿ ಪ್ರಧಾನಿ ಹಸೀನಾ ಪಕ್ಷ ಅವಾಮಿ ಲೀಗ್‌ ನಿಷೇಧಕ್ಕೆ ಮುಂದಾದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ

ಟರ್ಕಿ-ಸಿರಿಯಾ ಭೂಕಂಪದಲ್ಲಿ 8,300 ದಾಟಿದ ಸಾವಿನ ಸಂಖ್ಯೆ…
ಟರ್ಕಿ ಮತ್ತು ಸಿರಿಯಾ ಗಡಿ ಭಾಗದಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದಾಗಿ 8,300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ಬುಧವಾರ ವರದಿ ಮಾಡಿದೆ. ಇದರ ನಂತರ ಮತ್ತೊಂದು ಭೂಕಂಪವು ಮೊದಲಿನಂತೆಯೇ ಪ್ರಬಲವಾಗಿದೆ, ಆಸ್ಪತ್ರೆಗಳು, ಶಾಲೆಗಳು ಮತ್ತು ಅಪಾರ್ಟ್ಮೆಂಟ್ ಬ್ಲಾಕ್‌ಗಳು ಸೇರಿದಂತೆ ಸಾವಿರಾರು ಕಟ್ಟಡಗಳನ್ನು ಉರುಳಿಸಿತು. ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಹತ್ತಾರು ಸಾವಿರ ಜನರು ಗಾಯಗೊಂಡಿದ್ದಾರೆ ಮತ್ತು ಲೆಕ್ಕವಿಲ್ಲದಷ್ಟು ಜನರು ನಿರಾಶ್ರಿತರಾಗಿದ್ದಾರೆ. ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ದೇಶದ 10 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement