ಬನವಾಸಿ: ಫೆಬ್ರವರಿ 25, 26 ಎರಡು ದಿನಗಳ ಕದಂಬೋತ್ಸವ

ಶಿರಸಿ:ಐತಿಹಾಸಿಕ ಬನವಾಸಿಯ ಕದಂಬೋತ್ಸವ ಫೆಬ್ರವರಿ 25 ಹಾಗೂ 26ರಂದು ನಡೆಯಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ನಗರದ ಮಿನಿವಿಧಾನಸೌದದಲ್ಲಿ ಕದಂಬೋತ್ಸವ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು,
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕದಂಬೋತ್ಸವ ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಕದಂಬೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಗುಡ್ನಾಪುರದಲ್ಲಿ ಒಂದು ದಿನದ ಕಾರ್ಯಕ್ರಮದ ನಡೆಯಲಿದೆ. ಸ್ಥಳೀಯ ಕಲಾವಿದರಿಂದ ಈ ಹಿಂದಿನಂತೆ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎರಡು ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಅರ್ಜುನ್ ಜನ್ಯ, ಗುರುಕಿರಣ್ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಹಾಗೂ ತಂಡದವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸಾಹಿತ್ಯ ಗೋಷ್ಠಿ ಸೇರಿ ಹಲವು ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಡಲು ಫೆಬ್ರವರಿ 9ರಿಂದ ಅರ್ಜಿ ಸ್ವೀಕಾರ ಕಾರ್ಯ ನಡೆಯಲಿದೆ. ಇದು 18ರ ವರೆಗೆ ನಡೆಯಲಿದ್ದು, ಶಿರಸಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅರ್ಜಿ ನೀಡಬೇಕು. ಕದಂಬೋತ್ಸವಕ್ಕೆ ಮೆರುಗು ತರಲು ಸಿದ್ಧತೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ 25ಕ್ಕೆ ಆಗಮಿಸಲಿದ್ದಾರೆ. ಬನವಾಸಿ ಮಧುಕೇಶ್ವರ ದೇವಸ್ಥಾನದ ನೂತನ ರಥವನ್ನು ದೇವಸ್ಥಾನಕ್ಕೆ ಸಮರ್ಪಣೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೂ  ಅವರು ಚಾಲನೆ ನೀಡಲಿದ್ದಾರೆ ಎಂದರು.
ಪ್ರತಿವರ್ಷ ಕದಂಬೋತ್ಸವದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳೂ ನಡೆಯಲಿವೆ. ಫೆಬ್ರವರಿ 23ರ ಬೆಳಿಗ್ಗೆ ಗುಡ್ನಾಪುರದಿಂದ ಕದಂಬಜ್ಯೋತಿ ಹೊರಡಲಿದೆ. ರಾಜ್ಯಾದ್ಯಂತ ಸಂಚರಿಸಿ ಅದು 25ರಂದು ಬನವಾಸಿ ತಲುಪಲಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಗದಗ: ನಾಲ್ವರು ಅಮಾಯಕರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ತಂದೆ-ತಾಯಿ ಕೊಲೆಗೆ ಮಗನೇ ಸುಪಾರಿ ಕೊಟ್ಟಿದ್ದ...! 8 ಮಂದಿ ಬಂಧನ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement