7000 ಉದ್ಯೋಗಿಗಳ ವಜಾಕ್ಕೆ ಡಿಸ್ನಿ ನಿರ್ಧಾರ

ವೆಚ್ಚವನ್ನು ಕಡಿಮೆ ಮಾಡಲು 7,000 ಉದ್ಯೋಗಿಗಳನ್ನು ವಜಾಗೊಳಿಸಲು ಡಿಸ್ನಿ ಯೋಜಿಸುತ್ತಿದೆ. ಸಮೂಹ ಮಾಧ್ಯಮ ಮತ್ತು ಮನರಂಜನಾ ಸಮೂಹವು ತನ್ನ ಕೆಲಸದ ರಚನೆಯನ್ನು ಮರುಸಂಘಟಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ ಎಂದು ಬುಧವಾರ ಪ್ರಕಟಿಸಿದೆ.
ಇತ್ತೀಚಿನ ತ್ರೈಮಾಸಿಕ ಗಳಿಕೆಗಳ ಕಂಪನಿಯ ಘೋಷಣೆಯ ನಂತರ ದೊಡ್ಡ ನಿರ್ಧಾರ ಪ್ರಕಟಿಸಲಾಗಿದೆ.ಅಮೆರಿಕ ಮತ್ತು ಪ್ರಪಂಚದಾದ್ಯಂತದ ಇತರ ಟೆಕ್ ಕಂಪನಿಗಳಲ್ಲಿನ ಪ್ರಕ್ಷುಬ್ಧತೆಯಂತೆಯೇ, ಡಿಸ್ನಿ ಕೂಡ “ಸವಾಲಿನ ಆರ್ಥಿಕ ಪರಿಸ್ಥಿತಿಯ” ನಡುವೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ನವೆಂಬರ್‌ನಲ್ಲಿ ಕಂಪನಿಯ ಸಿಇಒ (CEO) ರಾಬರ್ಟ್ ಇಗರ್ ಅವರು ಮಾಜಿ ಸಿಇಒ ಬಾಬ್ ಚಾಪೆಕ್‌ ಅವರಿಂದ ಅಧಿಕಾರ ವಹಿಸಿಕೊಂಡ ತಕ್ಷಣ ವೆಚ್ಚ ಕಡಿತ ಮತ್ತು ವಜಾಗೊಳಿಸುವ ಯೋಜನೆಯನ್ನು ಡಿಸ್ನಿ ಪ್ರಾರಂಭಿಸಿದೆ ಎಂದು ವರದಿಗಳು ಸೂಚಿಸುತ್ತವೆ. ಗಮನಾರ್ಹವಾಗಿ, ಇಗರ್‌ ಅವರು 2020 ರಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿಯುವ ಮೊದಲು 15 ವರ್ಷಗಳ ಕಾಲ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಆದಾಗ್ಯೂ, ಅವರು ಮರಳಿಬಂದ ನಂತರ, ಕಂಪನಿಯು ಈಗಾಗಲೇ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ಒಳಗೊಂಡಂತೆ ಕೆಲವು ಮಹತ್ವದ ಸಾಂಸ್ಥಿಕ ಬದಲಾವಣೆಗಳನ್ನು ಪ್ರಾರಂಭಿಸಿದೆ.

ತ್ರೈಮಾಸಿಕ ಗಳಿಕೆಯ ಬಗ್ಗೆ ಡಿಸ್ನಿಯ ಅಧಿಕೃತ ಬಿಡುಗಡೆಯ ಪ್ರಕಾರ, ಕಂಪನಿಯು ತನ್ನ ಪ್ರತಿಸ್ಪರ್ಧಿ ನೆಟ್‌ಫ್ಲಿಕ್ಸ್‌ನಂತೆಯೇ ಚಂದಾದಾರರ ಬೆಳವಣಿಗೆಯ ದರದಲ್ಲಿ ನಿಧಾನಗತಿ ಕಂಡಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಅಮೆರಿಕ ಮತ್ತು ಕೆನಡಾದಲ್ಲಿ ಕೇವಲ 2,00,000 ಚಂದಾದಾರರನ್ನು ಸೇರಿಸಿದ್ದು, ಅದರ ಒಟ್ಟು ಮೊತ್ತವನ್ನು 4.66 ಕೋಟಿ ಚಂದಾದಾರರಿಗೆ ತಂದಿದೆ ಎಂಬುದು ವಿಷಯ ಮತ್ತಷ್ಟು ಬಿಗಡಾಯಿಸಲು ಕಾರಣವಾಯಿತು.
ಡಿಸ್ನಿ ತನ್ನ ಇತ್ತೀಚಿನ ತ್ರೈಮಾಸಿಕ ಗಳಿಕೆಗಳನ್ನು ಪೋಸ್ಟ್ ಮಾಡಿದ ನಂತರ ವಿಶ್ಲೇಷಕರೊಂದಿಗಿನ ಕರೆಯಲ್ಲಿ ಸಿಇಒ ಇಗರ್ ಅವರು ಡಿಸ್ನಿಯಲ್ಲಿ ಮುಂಬರುವ ವಜಾಗೊಳಿಸುವಿಕೆ ಪ್ರಕಟಿಸಿದರು. “ನಾನು ಈ ನಿರ್ಧಾರವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ವಿಶ್ವಾದ್ಯಂತ ನಮ್ಮ ಉದ್ಯೋಗಿಗಳ ಪ್ರತಿಭೆ ಮತ್ತು ಸಮರ್ಪಣೆಗಾಗಿ ನನಗೆ ಅಪಾರ ಗೌರವ ಮತ್ತು ಮೆಚ್ಚುಗೆ ಇದೆ” ಎಂದು ಇಗರ್ ಹೇಳಿದರು. ಅವರು “ಕಂಪನಿಯಾದ್ಯಂತ $5.5 ಶತಕೋಟಿ ವೆಚ್ಚವನ್ನು ಉಳಿಸುವ ಗುರಿ ಇರಿಸಿಕೊಂಡಿದ್ದಾರೆ” ಮತ್ತು ವೆಚ್ಚ ಕಡಿತ ಮತ್ತು ಉದ್ಯೋಗಿಗಳ ಕಡಿತವು “ಇದನ್ನು ಸಾಧಿಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.

“ನಮ್ಮ ಆದ್ಯತೆಯು ನಮ್ಮ ಸ್ಟ್ರೀಮಿಂಗ್ ವ್ಯವಹಾರದ ನಿರಂತರ ಬೆಳವಣಿಗೆ ಮತ್ತು ಲಾಭದಾಯಕತೆಯಾಗಿದೆ. ನಮ್ಮ ಪ್ರಸ್ತುತ ಮುನ್ಸೂಚನೆಗಳು 2024 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಡಿಸ್ನಿ ಪ್ಲಸ್ ಲಾಭದಾಯಕತೆಯನ್ನು ಮುಟ್ಟುತ್ತದೆ ಎಂದು ಸೂಚಿಸುತ್ತದೆ ಮತ್ತು ಅದನ್ನು ಸಾಧಿಸುವುದು ನಮ್ಮ ಗುರಿಯಾಗಿ ಉಳಿದಿದೆ” ಎಂದು ಇಗರ್ ಹೇಳಿದ್ದಾರೆ. ಆದಾಗ್ಯೂ, ವಜಾಗೊಳಿಸುವಿಕೆಯೊಂದಿಗೆ ಯಾವ ಇಲಾಖೆಗಳು ಪರಿಣಾಮ ಬೀರುತ್ತವೆ ಎಂಬುದನ್ನು ಡಿಸ್ನಿ ಸಿಇಒ ಬಹಿರಂಗಪಡಿಸಲಿಲ್ಲ.
ಇಲಾಖೆಗಳ ಪುನರ್ರಚನೆಗೆ ಸಂಬಂಧಿಸಿದಂತೆ, ಕಂಪನಿಯು ಈಗ ಡಿಸ್ನಿ ಎಂಟರ್ಟೈನ್ಮೆಂಟ್, ಇಎಸ್‌ಪಿಎನ್ ವಿಭಾಗ, ಪಾರ್ಕ್ಸ್ ಮತ್ತು ಪೊಡಕ್ಷನ್‌ ಘಟಕ ಹೀಗೆ ಮೂರು ವಿಭಾಗಗಳಾಗಿ ಮರುಸಂಘಟಿಸಲಿದೆ ಎಂದು ಬಹಿರಂಗಪಡಿಸಿದೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement