ಫೆಬ್ರುವರಿ 14, ʼಹಸು ಅಪ್ಪುಗೆʼ ದಿನವಾಗಿ ಆಚರಿಸುವ ಮನವಿ ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ

ನವದೆಹಲಿ: ಫೆಬ್ರುವರಿ 14 ಅನ್ನು ‘ಹಸು ಅಪ್ಪುಗೆಯ ದಿನ’ವನ್ನಾಗಿ ಆಚರಿಸುವ ಮನವಿಯನ್ನು ಸರ್ಕಾರದ ನಿರ್ದೇಶನದ ಮೇರೆಗೆ ಹಿಂಪಡೆದಿರುವುದಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಶುಕ್ರವಾರ ತಿಳಿಸಿದೆ.
ಫೆಬ್ರವರಿ 14 ಅನ್ನು ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್ ಡೇ ಎಂದು ಆಚರಿಸಲಾಗುತ್ತದೆ.”ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ, ಫೆಬ್ರವರಿ 14 ರಂದು ಹಸು ಅಪ್ಪುಗೆಯ ದಿನವನ್ನು ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಹೊರಡಿಸಿದ ಮನವಿಯನ್ನು ಹಿಂಪಡೆಯಲಾಗಿದೆ” ಎಂದು ಮಂಡಳಿಯ ಕಾರ್ಯದರ್ಶಿ ಎಸ್‌ಕೆ ದತ್ತಾ ತಿಳಿಸಿದ್ದಾರೆ.
ಮೊದಲ ಬಾರಿಗೆ AWBI ದೇಶದ ಗೋ ಪ್ರೇಮಿಗಳಿಗೆ ‘ಹಸು ಹಗ್ ಡೇ’ ಆಚರಿಸುವಂತೆ ಮನವಿ ಮಾಡಿತ್ತು.

4 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ನಟ ಸಾಹಿಲ್ ಖಾನ್ ಬಂಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement