ರಾಜಸ್ತಾನದ ಖಿಮ್ಸರ್ ಕೋಟೆಯಲ್ಲಿ ನಡೆದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ವಿವಾಹ

ನವದೆಹಲಿ: ಕೇಂದ್ರ ಸಚಿವೆ, ಸ್ಮೃತಿ ಇರಾನಿ ಮಗಳು, ಶಾನೆಲ್ಲೆ ಇರಾನಿ, ಫೆಬ್ರವರಿ 9ರಂದು ನಡೆದ ವಿವಾಹ ಸಮಾರಂಭದಲ್ಲಿ ಅರ್ಜುನ್ ಭಲ್ಲಾ ಅವರನ್ನು ಮದುವೆಯಾದರು. ರಾಜಸ್ತಾನದ ಜೋಧ್‌ಪುರದ ಭವ್ಯವಾದ ಖಿಮ್ಸರ್ ಕೋಟೆಯಲ್ಲಿಇವರಿಬ್ಬರ ವಿವಾಹ ಸಮಾರಂಭ ನಡೆಯಿತು.
ಫೆಬ್ರವರಿ 7 ರಂದು ಹಲ್ದಿ, ಮೆಹೆಂದಿ ಮತ್ತು ಸಂಗೀತ ಸಮಾರಂಭಗಳೊಂದಿಗೆ ಮೂರು ದಿನಗಳ ಕಾಲ ವಿವಾಹದ ಕಾರ್ಯಕ್ರಮಗಳು ನಡೆಯಿತು ಕೆಲವೇ ಆಹ್ವಾನಿತರು ಮಾತ್ರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ದಂಪತಿಗಳು 2021 ರಲ್ಲಿ ಕೋಟೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಅದರ ಫೋಟೊವನ್ನು ಸ್ಮೃತಿ ಇರಾನಿ ಅವರು Instagram ನಲ್ಲಿ ಹಂಚಿಕೊಂಡಿದ್ದರು.
ಅರ್ಜುನ್ ಭಲ್ಲಾ ಕೆನಡಾದ ವಕೀಲರಾಗಿದ್ದು, ಅಲ್ಲಿಯೇ ಜನಿಸಿದವರು. ಅವರ ತಂದೆ-ತಾಯಿ ಭಾರತದಿಂದ ವಲಸೆ ಹೋದವರು. ಅವರು ಕೆನಡಾದ ಒಂಟಾರಿಯೊದ ಟೊರೊಂಟೊದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಅರ್ಜುನ್ ಭಲ್ಲಾ ಪ್ರಸ್ತುತ ದುಬೈನಲ್ಲಿ ಕಾನೂನು ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಶಾನೆಲ್ಲೆ ಇರಾನಿ ಸಹ ವಕೀಲರಾಗಿದ್ದಾರೆ. ಮುಂಬೈನಲ್ಲಿರುವ ಬಾಯಿ ಅವಬಾಯಿ ಫ್ರಾಂಜಿ ಪೆಟಿಟ್ ಬಾಲಕಿಯರ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ನಂತರ ಅವರು ಮುಂಬೈನ ನಾರ್ಸಿ ಮೊಂಜಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‌ನಿಂದ ಪದವಿಯನ್ನು ಪೂರ್ಣಗೊಳಿಸಿದರು. ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದರು ವಾಷಿಂಗ್ಟನ್ ಡಿಸಿಯ ಜಾರ್ಜ್‌ಟೌನ್ ಯೂನಿವರ್ಸಿಟಿ ಲಾ ಸೆಂಟರ್ ಹಳೆಯ ವಿದ್ಯಾರ್ಥಿ.

ಪ್ರಮುಖ ಸುದ್ದಿ :-   ಶಿರಸಿ : ಇಂದಿನಿಂದ (ಜು.11) ಸಾಂಪ್ರದಾಯಿಕ ತರಕಾರಿ ಬೀಜ ಮೇಳ-ಮಲೆನಾಡು ಮೇಳ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement