ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಡ್ರೈವರ್ ಕಂ ಕಂಡಕ್ಟರ್ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾದ್ದರಿಂದ ಅದಕ್ಕಾಗಿ ಅಭ್ಯರ್ಥಿಗಳು ವಾಮಮಾರ್ಗ ಹಿಡಿದಿರುವುದು ಸಂಗತಿ ಬಯಲಾಗುತ್ತಲೇ ಇದೆ.
ನಿನ್ನೆ ಶುಕ್ರವಾರ ಇಂಥ ಪ್ರಕರಣಗಳು ಬಹಿರಂಗವಾಗಿತ್ತು. ತಮ್ಮ ತೂಕ ಹೆಚ್ಚಿಸಿಕೊಳ್ಳಲು ಅಭ್ಯರ್ಥಿಗಳು ಪ್ಯಾಂಟ್ ಒಳಗೆ ಕಬ್ಬಿಣದ ಪೀಸ್ಗಳು, ಒಳ ಉಡುಪಲ್ಲಿ ತೂಕದ ಕಲ್ಲು ಇಟ್ಟುಕೊಂಡು ಬಂದಿದ್ದ ಕಿಲಾಡಿಗಳು ಸಿಕ್ಕಿಬಿದ್ದಿದ್ದರು. ಈಗ ಇದೇ ರೀತಿಯ ಮತ್ತೊಂದು ಕಳ್ಳಾಟ ಮಾಡಿ ಸಿಕ್ಕಿಬಿದ್ದ ವರದಿಯಾಗಿದೆ. ಹೇಗಾದರೂ ಕೆಲಸ ಪಡೆಯಲೇ ಬೇಕು ಎಂದು ವಾಮಮಾರ್ಗದಲ್ಲಿ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಒಬ್ಬಾತ ಕಾಲಿಗೆ ಗೋಧಿ ಹಿಟ್ಟನ್ನು ಮೆತ್ತಿಕೊಂಡು ಬಂದು ಸಿಕ್ಕಿಬಿದ್ದಿದ್ದಾನೆ…!
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಯಲ್ಲಿ ಚಾಲಕ ಕಂ ಕಂಡಕ್ಟರ್ ಹುದ್ದೆಗೆ ಆಯ್ಕೆಯಾಗಬೇಕಾದರೆ 55 ಕೆ.ಜಿ. ತೂಕ ಕಡ್ಡಾಯವಾಗಿದೆ. ಹೇಗಾದರೂ ಮಾಡಿ ತೂಕ ಹೆಚ್ಚಿಸಿಕೊಳ್ಳಲುಈ ಅಭ್ಯರ್ಥಿ ಕಬ್ಬಿಣದ ಬದಲು ಗೋಧಿ ಹಿಟ್ಟಿನ ಮೊರೆ ಹೋಗಿದ್ದಾನೆ. ತನ್ನ ಒಂದೊಂದು ಕಾಲಿಗೆ ಒಂದೊಂದು ಕೆಜಿಯ ಗೋಧಿ ಹಿಟ್ಟನ್ನು ಮೆತ್ತಿಕೊಂಡು ಅದರ ಮೇಲೆ ಪ್ಯಾಂಟ್ ಧರಿಸಿಕೊಂಡು ಬಂದಿದ್ದಾನೆ…! ಗೋಧಿ ಹಿಟ್ಟನ್ನು ನೀರಲ್ಲಿ ಕಲಸಿ ಅದಕ್ಕೆ ಅಂಟು ಬರುವಂತೆ ಮಾಡಿ ಅದನ್ನು ಕಾಲಿಗೆ ಅಂಟಿಸಿಕೊಂಡು ಅದರ ಮೇಲೆ ಬಟ್ಟೆ ಕಟ್ಟಿಕೊಂಡು ಬಂದು ದೈಹಿಕ ಪರೀಕ್ಷೆಗೆ ಹಾಜರಾಗಿದ್ದಾನೆ. ಕೆಕೆಆರ್‌ಟಿಸಿ ಜಾಗೃತ ದಳದ ಅಧಿಕಾರಿಗಳ ತಪಾಸಣೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ನಿಮ್ಮ ಕಾಮೆಂಟ್ ಬರೆಯಿರಿ