ಧಾರವಾಡ: ವೇತನಕ್ಕಾಗಿ ಮೊಬೈಲ್‌ ಟವರ್‌ ಏರಿದ ಜಲಮಂಡಳಿ ನೌಕರ…!

ಧಾರವಾಡ: ಎಂಟು ತಿಂಗಳುಗಳಿಂದ ವೇತನವಿಲ್ಲದ ಜಲಮಂಡಳಿ ಕಾರ್ಮಿಕರು ವೇತನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಆಡಳಿತದಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ಕಾರ್ಮಿಕನೊಬ್ಬ ಧಾರವಾಡದ ಜುಬ್ಲಿ ವೃತ್ತದಲ್ಲಿರುವ ಮೊಬೈಲ್ ಟವರ್ ಏರಿ ವಿನೂತನವಾಗಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾನೆ. ಆದರೆ ಉಳಿದವರು ಗಾಬರಿಯಾಗುವಂತೆ ಮಾಡಿದ್ದಾನೆ.
ನೀರು ಸರಬರಾಜು ನೌಕರರ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದೆ. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾಲಿಕೆ ಕಚೇರಿ ಮುಂದೆ ನಡೆಸುತ್ತಿರುವ ಈ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರನೊಬ್ಬ ಭಿತ್ತಿ ಪತ್ರದೊಂದಿಗೆ ಟವರ್ ಏರಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದಾನೆ. ನಗರದ ಆಲೂರು ವೆಂಕಟರಾವ್ ವೃತ್ತದ ಬಳಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾಗ ನೌಕರ ಮಲ್ಲಿಕಾರ್ಜುನ  ಎಂಬಾತ ಟವರ್ ಏರಿ ಕುಳಿತಿದ್ದಾನೆ. ಕೈಯಲ್ಲಿ ಬೇಡಿಕೆ ಫಲಕ ಹಿಡಿದು ಟವರ್ ಏರಿದ ಮಲ್ಲಿಕಾರ್ಜುನ ಗುಮ್ಮಗೋಳ, ತುತ್ತ ತುದಿಯಲ್ಲಿ ಕುಳಿತು ಪ್ರದರ್ಶನ ಮಾಡಿದ್ದಾನೆ. ಕಳೆದ ಎಂಟು ತಿಂಗಳಿನಿಂದ ವೇತನ ನೀಡಿಲ್ಲ. ಕೂಡಲೇ ಬಾಕಿ ವೇತನ ನೀಡುವಂತೆ ಆಗ್ರಹಿಸಿದ್ದಾನೆ.
ಮೂರು ದಿನಗಳ ಹಿಂದೆಯಷ್ಟೇ ಜಲಮಂಡಳಿಯ ಮಹಿಳಾ ಗುತ್ತಿಗೆ ನೌಕರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಚೇರಿ ಮುಂಭಾಗದಲ್ಲಿ ಕೂಡ ಕಾರ್ಮಿಕರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement