500 ವಿಮಾನಗಳ ಖರೀದಿಗೆ ಆರ್ಡರ್‌ ಮಾಡಿ ದಾಖಲೆ ಬರೆದ ಏರ್‌ ಇಂಡಿಯಾ : ವರದಿ

ಮುಂಬೈ: ಟಾಟಾ ಸನ್ಸ್ (Tata Sons) ಒಡೆತನದ ಏರ್ ಇಂಡಿಯಾ 500 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ಇದು ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್‌ಲೈನ್ಸ್ ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡರ್‌ಗಳಲ್ಲಿ ಒಂದಾಗಿರಬಹುದು ಎಂದು ಹೇಳಲಾಗಿದೆ.
ಫ್ರಾನ್ಸ್‌ನ ಏರ್‌ಬಸ್ ಮತ್ತು ಪ್ರತಿಸ್ಪರ್ಧಿ ವಿಮಾನ ತಯಾರಕ ಬೋಯಿಂಗ್ ಎರಡರಿಂದಲೂ ವಿಮಾನ ಖರೀದಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
250 ಏರ್‌ಬಸ್ ವಿಮಾನಗಳನ್ನು ಖರೀದಿಸಲು ಸಮ್ಮತಿಸಿದೆ, 210 ಸಿಂಗಲ್-ಐಸ್ಲ್ A320neos ಮತ್ತು 40 ವೈಡ್‌ಬಾಡಿ A350ಗಳನ್ನು ಆರ್ಡರ್‌ ಮತ್ತು 220 ಬೋಯಿಂಗ್ ವಿಮಾನಗಳು ಅದರ 190 737 MAX ನ್ಯಾರೋಬಾಡಿ ಜೆಟ್‌ಗಳು, 20 787 ವೈಡ್‌ಬಾಡಿ ವಿಮಾನಗಳು ಮತ್ತು 10 777X ವಿಮಾನಗಳನ್ನು ಒಳಗೊಂಡಿವೆ.
ಏರ್‌ಬಸ್ ಮತ್ತು ಏರ್ ಇಂಡಿಯಾ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದರೆ, ಜನವರಿ 27 ರಂದು ಬೋಯಿಂಗ್ ತನ್ನ ಒಪ್ಪಂದ ಮಾಡಿಕೊಂಡಿದೆ.
ಈ ಹಿಂದೆ ಅಮೆರಿಕನ್ ಏರ್‌ಲೈನ್ಸ್‌ (American Airlines) 460 ವಿಮಾನಗಳನ್ನು ಆರ್ಡರ್‌ ಮಾಡುವ ಮೂಲಕ ದಾಖಲೆ ಮಾಡಿತ್ತು. 2019 ರಲ್ಲಿ ಇಂಡಿಗೋ (Indigo) 300 ವಿಮಾನ ಖರೀದಿಗೆ ಆರ್ಡರ್‌ ಮಾಡಿತ್ತು.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement