ಇಂದು ಮಂತ್ರದ್ರಷ್ಟ ಅರವಿಂದ ಘೋಷ್‌ ಪುಸ್ತಕ ಬಿಡುಗಡೆ

ಹುಬ್ಬಳ್ಳಿ: ಲೋಕಹಿತ ಟ್ರಸ್ಟ್‌ ವತಿಯಿಂದ ಮಂತ್ರದ್ರಷ್ಟ ಅರವಿಂದ ಘೋಷ್‌ ಪುಸ್ತಕ ಬಿಡುಗಡೆ ಸಮಾರಂಭ ಹುಬ್ಬಳ್ಳಿಯ ಕೇಶವ ಕುಂಜದಲ್ಲಿ ಫೆಬ್ರವರಿ 12ರ ಭಾನುವಾರ ಸಂಜೆ 6:30 ಗಂಟೆಗೆ ನಡೆಯಲಿದೆ.
ವಕ್ತಾರರಾಗಿ ಖ್ಯಾತ ಲೇಖಕ ಹಾಗೂ ವಿಮರ್ಶಕ ಡಾ.ಜಿ.ಬಿ.ಹರೀಶ ಆಗಮಿಸಲಿದ್ದಾರೆ. ಹುಬ್ಬಳ್ಳಿ ಲೋಕ ಹಿತ ಟ್ರಸ್ಟ್‌ ಅಧ್ಯಕ್ಷ ಅರವಿಂದರಾವ್‌ ದೇಶಪಾಂಡೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಲೇಖಕರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಕಾ.ಶ್ರೀ. ನಾಗರಾಜ ಅವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

4 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

ನಿಮ್ಮ ಕಾಮೆಂಟ್ ಬರೆಯಿರಿ

advertisement