ಪ್ರೇಮಿಗಳ ದಿನವಾದ ಇಂದು ಮತ್ತೊಮ್ಮೆ ಮದುವೆಯಾಗುತ್ತಿರುವ ಭಾರತದ ಟಿ 20 ಕ್ರಿಕೆಟ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ-ನತಾಷಾ …!

ಭಾರತ ಟಿ 20 ಕ್ರಿಕೆಟ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರು ಪ್ರೇಮಿಗಳ ದಿನವಾದ ಇಂದು (ಫೆಬ್ರವರಿ 14) ಮತ್ತೊಮ್ಮೆ ಮದುವೆಯಾಗುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಸೋಮವಾರದಿಂದ ಉದಯಪುರದಲ್ಲಿ ವಿವಾಹ ಕಾರ್ಯಕ್ರಮಗಳು ಆರಂಭವಾಗಿದ್ದು, ಇನ್ನೆರಡು ದಿನಗಳ ಕಾಲ ನಡೆಯಲಿದೆ. ಇಂದು, ಮಂಗಳವಾರ ಪ್ರೇಮಿಗಳ ದಿನದಂದು ಮದುವೆ ನಡೆಯಲಿದೆ.
ಈ ಹಿಂದೆ, ಇಬ್ಬರೂ 31 ಮೇ 2020 ರಂದು ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಕಾನೂನುಬದ್ಧ ವಿವಾಹವಾಗಿದ್ದರು. ಆದರೆ, ಅವರು ಇಂದು ಸಂಪ್ರದಾಯಬದ್ಧವಾಗಿ ಮದುವೆಯಾಗುತ್ತಿದ್ದಾರೆ. ಉದಯಪುರದ ರಾಫೆಲ್ಸ್ ಹೋಟೆಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ದಂಪತಿಗೆ ಎರಡು ವರ್ಷದ ಅಗಸ್ತ್ಯ ಎಂಬ ಮಗನಿದ್ದಾನೆ. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಮದುವೆಗಾಗಿ ಸೋಮವಾರವೇ ಉದಯಪುರ ತಲುಪಿದ್ದಾರೆ. ಇವರೊಂದಿಗೆ ಕುಟುಂಬಸ್ಥರು ಹಾಗೂ ಭಾರತೀಯ ಕ್ರಿಕೆಟಿಗ ಇಶಾನ್ ಕಿಶನ್ ಕೂಡ ಬಂದಿದ್ದಾರೆ. ಸಂಜೆ ಆರಂಭವಾದ ವಿವಾಹ ವಿಧಿವಿಧಾನಗಳು ಫೆ.15ರವರೆಗೆ ನಡೆಯಲಿದ್ದು, ಮಂಗಳವಾರ ಹಲ್ದಿ, ಸಂಗೀತ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.
ಹಾರ್ದಿಕ್ 1 ಜನವರಿ 2020 ರಂದು ನತಾಶಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಸುದ್ದಿ ಹಂಚಿಕೊಂಡರು. ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಕಾನೂನುಬದ್ಧವಾಗಿ ಅವರ ಮದುವೆಯಾಯಿತು. ಆದರೆ ಸಂಪ್ರದಾಯಬದ್ಧವಾಗಿ ವಿವಾಹ ನಡೆದಿರಲಿಲ್ಲ.
ಇತ್ತೀಚೆಗೆ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜೈಸಲ್ಮೇರ್‌ನಲ್ಲಿ ವಿವಾಹವಾದರು. ಇದಾದ ಕೆಲವೇ ದಿನಗಳಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮಗಳು ನಾಗೌರ್ ಕೋಟೆಯಲ್ಲಿ ವಿವಾಹವಾದರು.
ರಾಜಸ್ಥಾನವು ಸೆಲೆಬ್ರಿಟಿಗಳ ವಿವಾಹಗಳ ಪ್ರಮುಖ ತಾಣವಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಪ್ರಧಾನಿ ಮೋದಿ ಪದವಿ ಪ್ರಕರಣ: ಪಿಎಂಒ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ ಎಂದ ಗುಜರಾತ್ ಹೈಕೋರ್ಟ್ ; ಅರವಿಂದ್ ಕೇಜ್ರಿವಾಲ್‌ ಗೆ 25,000 ರೂ. ದಂಡ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement